ಕ್ರೀಡೆ

“ಧೋನಿ ನಾಯಕರಾಗಿದ್ದರೆ ಆರ್‌ ಸಿಬಿ ಮೂರು ಸಲ ಐಪಿಎಲ್‌ ಕಪ್‌ ಗೆಲ್ಲುತ್ತಿತ್ತು’

ನವದೆಹಲಿ: ಒಂದು ವೇಳೆ ಮಹೇಂದ್ರ ಸಿಂಗ್‌ ಧೋನಿ ಆರ್‌ಸಿಬಿ ತಂಡದ ನಾಯಕರಾಗಿದ್ದರೆ, ತಂಡ ಇಷ್ಟರಲ್ಲಿ ಮೂರು ಸಲ ಚಾಂಪಿಯನ್‌ ಆಗಿರುತ್ತಿತ್ತು ಎಂದಿದ್ದಾರೆ ಪಾಕಿಸ್ತಾನದ ಲೆಜೆಂಡ್ರಿ ವೇಗಿ ವಾಸಿಮ್‌ ಅಕ್ರಮ್‌!

ಐಪಿಎಲ್‌ನ ಅತ್ಯಂತ ನತದೃಷ್ಟ ತಂಡಗಳಲ್ಲಿ ಒಂದಾದ ರಾಯಲ್‌ ಚಾಲೆಂಜರ್ ಬೆಂಗಳೂರು, 2009, 2011 ಮತ್ತು 2016ರಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿತ್ತು. ಆದರೆ ಮೂರೂ ಸಲ ರನ್ನರ್ ಅಪ್‌ ಸ್ಥಾನಕ್ಕೆ ಸಮಾಧಾನಪಟ್ಟಿತ್ತು. ಒಂದು ವೇಳೆ ಮಹೇಂದ್ರ ಸಿಂಗ್‌ ಧೋನಿ ಆರ್‌ಸಿಬಿ ತಂಡದ ನಾಯಕರಾಗಿದ್ದರೆ, ತಂಡ ಇಷ್ಟರಲ್ಲಿ ಮೂರು ಸಲ ಚಾಂಪಿಯನ್‌ ಆಗಿರುತ್ತಿತ್ತು ಎಂಬುದಾಗಿ ಕ್ರಿಕೆಟ್‌ ವೆಬ್‌ಸೈಟ್‌ ಜತೆಗಿನ ಸಂದರ್ಶನವೊಂದರಲ್ಲಿ ಅಕ್ರಮ್‌ ಅಭಿಪ್ರಾಯಪಟ್ಟಿದ್ದಾರೆ.

“ಅಪಾರ ಅಭಿಮಾನಿಗಳ ಬೆಂಬಲವನ್ನು ಹೊಂದಿರುವ ಆರ್‌ಸಿಬಿ ಈವರೆಗೆ ಒಮ್ಮೆಯೂ ಚಾಂಪಿಯನ್‌ ಆಗದಿದೇ ಇರುವುದು ದೌರ್ಭಾಗ್ಯ. ಕ್ರಿಕೆಟಿನ ಆಧುನಿಕ ಯುಗದ ಶ್ರೇಷ್ಠ ಆಟಗಾರ ವಿರಾಟ್‌ ಕೊಹ್ಲಿ ಅವರನ್ನು ಹೊಂದಿರುವ ತಂಡವಿದು. ಹಿಂದೆ ಗೇಲ್‌, ಎಬಿಡಿ ಅವರಂಥ ಸ್ಫೋಟಕ ಆಟಗಾರರಿದ್ದರು. ಆದರೂ ಗೆಲುವು ಮರೀಚಿಕೆಯೇ ಆಗಿದೆ. ಆ ಮೂರು ಫೈನಲ್‌ಗ‌ಳ ವೇಳೆ ಧೋನಿಯವರ ನಾಯಕತ್ವ ಹೊಂದಿದ್ದೇ ಆದಲ್ಲಿ ಆರ್‌ಸಿಬಿ ಖಂಡಿತವಾಗಿಯೂ ಕಪ್‌ ಗೆಲ್ಲುತ್ತಿತ್ತು’ ಎಂದಿದ್ದಾರೆ.

“ಧೋನಿ ಕ್ರಿಕೆಟ್‌ನ ವಿಶ್ವದ ಮಹಾನ್‌ ಹಾಗೂ ಜಾಣ ನಾಯಕರಲ್ಲೊಬ್ಬರು. ಅವರಿಗೆ ತಂಡವನ್ನು ಮುನ್ನಡೆಸುವುದೊಂದು ಹವ್ಯಾಸವೇ ಆಗಿದೆ. ಆಟಗಾರರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಅವರನ್ನು ಹೇಗೆ ಹುರಿದುಂಬಿಸಬೇಕು, ಅವರ ಆಟವನ್ನು ಹೇಗೆ ಹೊರತೆಗೆಯಬೇಕು ಎಂಬುದೆಲ್ಲ ಚೆನ್ನಾಗಿ ಕರಗತವಾಗಿದೆ. ಖಂಡಿತವಾಗಿಯೂ ಧೋನಿ ಕೂಲ್‌ ಅಲ್ಲ, ಹೊರಗಿನಿಂದ ಹಾಗೆ ತೋರಿಸಿಕೊಳ್ಳುತ್ತಾರೆ, ಅಷ್ಟೇ. ಆಟಗಾರರಲ್ಲಿ ಆತ್ಮವಿಶ್ವಾಸ ಮೂಡಿಸುವ ವಿಧಾನ ಅವರ ಹೆಚ್ಚುಗಾರಿಕೆ,’ ಎಂದು ಅಕ್ರಮ್‌ ಹೇಳಿದ್ದಾರೆ.

andolanait

Recent Posts

ವ್ಯಕ್ತಿಯ ಭೀಕರ ಕೊಲೆ : ಹಳೇ ವೈಷಮ್ಯ ಹಿನ್ನೆಲೆ ಪತಿ,ಪತ್ನಿಯಿಂದ ಕೃತ್ಯ

ಕೊಳ್ಳೇಗಾಲ : ಹಳೇ ವೈಷಮ್ಯ ಹಿನ್ನೆಲೆ ವ್ಯಕ್ತಿಯೋರ್ವನನ್ನು ಪತಿ ಪತ್ನಿ ಇಬ್ಬರು ಮಾರಕಾಸ್ತ್ರದಿಂದ ಹೊಡೆದು ಭೀಕರವಾಗಿ ಹತ್ಯೆಗೈದಿರುವ ಘಟನೆ ತಾಲ್ಲೂಕಿನ…

8 mins ago

ಬಂಧನ್‌ ಬ್ಯಾಂಕ್‌ನಲ್ಲಿ ಕನ್ನಡಿಗರ ವಜಾ : ಕರ್ನಾಟಕ ರಕ್ಷಣಾ ವೇದಿಕೆ ಖಂಡನೆ

ಮೈಸೂರು : ಬಂಧನ್ ಬ್ಯಾಂಕ್‌ನ ವಿದ್ಯಾರಣ್ಯಪುರಂ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 30 ರಿಂದ 40ಜನ ಕನ್ನಡಿಗರನ್ನು ಏಕಾಏಕಿ ಕೆಲಸದಿಂದ ವಜಾ…

22 mins ago

ಲೈಂಗಿಕ ದೌರ್ಜನ್ಯ ಪ್ರಕರಣ : ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಬಿಗ್‌ ರಿಲೀಫ್!

ಬೆಂಗಳೂರು : ಹೊಳೆನರಸೀಪುರದ ಸಂತ್ರಸ್ತೆಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಬಿಗ್‌ ರಿಲೀಫ್‌ ಸಿಕ್ಕಿದ್ದು, ರೇವಣ್ಣ…

1 hour ago

ಹುಣಸೂರು ಚಿನ್ನಾಭರಣ ದರೋಡೆ ಪ್ರಕರಣ : ತನಿಖೆ ಕುರಿತು ಎಸ್ಪಿ ವಿಷ್ಣುವರ್ಧನ್ ಹೇಳಿದ್ದೇನು?

ಹುಣಸೂರು : ಸದಾ ಜನನಿಬಿಡ ಪ್ರದೇಶವಾದ ಹುಣಸೂರು ಬಸ್‌ ನಿಲ್ದಾಣ ಹಿಂಭಾಗದ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಜ್ಯುಯಲರಿ ಅಂಗಡಿಯಲ್ಲಿ…

1 hour ago

ಮುಡುಕುತೊರೆ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಡಾ.ಹೆಚ್.ಸಿ.ಮಹದೇವಪ್ಪ

ತಿ.ನರಸೀಪುರ : ಮುಡುಕುತೊರೆಯು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದ್ದು, ಪ್ರವಾಸೋದ್ಯಮ ಕೇಂದ್ರವೂ ಆಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು…

2 hours ago

ಬಹುರೂಪಿ ಬಾಬಾ ಸಾಹೇಬ್‌ | ಜ.11 ರಿಂದ 18ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

ಮೈಸೂರು : ರಂಗಾಯಣದ ಪ್ರತಿಷ್ಠಿತ ಉತ್ಸವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಜನವರಿ 11 ರಿಂದ 18 ರವರೆಗೆ ನಡೆಯಲಿದೆ ಎಂದು‌…

3 hours ago