ಕ್ರೀಡೆ

ICC t20 worldcup 2024: ಟೀಂ ಇಂಡಿಯಾ ನ್ಯೂನತೆ ಬಗ್ಗೆ ಮಾತನಾಡಿದ ಹಾರ್ದಿಕ್‌

ಆಂಟಿಗುವಾ: ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಯ ಗ್ರೂಪ್‌-8ರ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು 50 ರನ್‌ಗಳ ಅಂತರದಿಂದ ಬಗ್ಗುಬಡಿಯಿತು. ಆ ಮೂಲಕ ಸೆಮಿಸ್‌ಗೆ ನೇರ ಅರ್ಹತೆ ಪಡೆದುಕೊಂಡಿತು.

ಇನ್ನು ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ತಂಡದ ಉಪನಾಯಕ ಹಾರ್ದಿಕ್‌ ಪಾಂಡ್ಯ, ನಾವು ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುವ ವಿಧಾನವನ್ನು ನಾವು ಸುಧಾರಿಸಬೇಕಿದೆ ಎಂದು ತಂಡದ ನ್ಯೂನತೆ ಬಗ್ಗೆ ಇದೇ ಮೊದಲ ಬಾರಿಗೆ ಪಾಂಡ್ಯ ಮಾತನಾಡಿದ್ದಾರೆ.

ಇದೇ ವರ್ಷ ನಡೆದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕನ ಸ್ಥಾನ ವಹಿಸಿಕೊಂಡ ಬಳಿಕ ತೀರ ಕಳಪೆ ಪ್ರದರ್ಶನ ತೋರಿದರು. ಎಲ್ಲರಿಂದಲೂ ಟೀಕೆಗೆ ಗುರಿಯಾಗಿದ್ದ ಹಾರ್ದಿಕ್‌ ಟೀಂ ಇಂಡಿಯಾ ಪರವಾಗಿ ಉತ್ತಮ ಪ್ರದರ್ಶನ ತೋರಿದರು.

ಬಾಂಗ್ಲಾದೇಶ ವಿರುದ್ಧ ಬ್ಯಾಟಿಂಗ್‌ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಹಾರ್ದಿಕ್‌ ತಂಡದ ಗೆಲುವಿಗೆ ಶ್ರಮಿಸಿದರು. ಈ ಬಳಿಕ ಮಾತನಾಡಿದ ಅವರು, ನಾವು ಒಂದು ತಂಡವಾಗಿ ಉತ್ತಮವಾಗಿ ಆಡುತ್ತಿದ್ದೇವೆ. ಆದರೆ ಹಲವು ವಿಭಾಗಗಳಲ್ಲಿ ನಾವು ಸುಧಾರಿಸುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ತಂಡದಲ್ಲಿ ವೇಗವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುವುದನ್ನು ನಾವು ಸುಧಾರಿಸಿದ್ದಲ್ಲಿ, ತಂಡ ಇನ್ನು ಶ್ರೇಷ್ಠ ಪ್ರದರ್ಶನ ನೀಡಬಹುದಾಗಿದೆ. ಸದ್ಯ ತಂಡ ಉತ್ತಮವಾಗಿ ಆಡುತ್ತಿದ್ದು, ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಇದು ಪಂದ್ಯದ ಗೆಲುವಿಗೆ ಸಹಕಾರಿಯಾಗುತ್ತಿದೆ ಎಂದು ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ರೋಹಿತ್‌ ಬ್ಯಾಟಿಂಗ್‌ ಅಬ್ಬರ : ಭರ್ಜರಿ ಗೆಲುವು ದಾಖಲಿಸಿದ ಮುಂಬೈ

ಮುಂಬೈ : 13 ವರ್ಷಗಳ ಸೋಲಿನ ಓಟಕ್ಕೆ ಬ್ರೇಕ್‌ ಹಾಕಿದ ಮುಂಬೈ ಇಂಡಿಯನ್ಸ್‌ ಕೊನೆಗೂ ಐಪಿಎಲ್‌ನ ಮೊದಲ ಪಂದ್ಯವನ್ನು ಭರ್ಜರಿಯಾಗಿ…

6 hours ago

ಷೇರುಪೇಟೆ ವಹಿವಾಟಿನಲ್ಲಿ ಇಳಿಕೆ ; ಟಾಪ್-10 ಕಂಪನಿಗಳಲ್ಲಿ 7ಕ್ಕೆ ಭಾರೀ ನಷ್ಟ

ಹೊಸದಿಲ್ಲಿ : ಕಳೆದ ವಾರ ನಡೆದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಗಳು ಇಳಿಕೆ ಕಂಡಿದ್ದರಿಂದ ದೇಶದ ಪ್ರಮುಖ 10 ಕಂಪನಿಗಳ ಪೈಕಿ…

9 hours ago

ಎಲ್‌ಪಿಜಿ ಹೊತ್ತ ಮತ್ತೆರಡು ಹಡಗು ಭಾರತದತ್ತ

ಮುಂಬೈ : ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಭಾಗಶಃ ಅನುಮತಿ ನೀಡಿದ ನಂತರ ಭಾರತ ಧ್ವಜ ಹೊತ್ತ ಎರಡು ಎಲ್‌ಪಿಜಿ (ದ್ರವೀಕೃತ…

9 hours ago

ಮೇಲುಕೋಟೆ ಜಾತ್ರೆ | ವೈರಮುಡಿ ಕಿರೀಟಧಾರಣಾ ಮಹೋತ್ಸವದಲ್ಲಿ 2 ಲಕ್ಷ ಜನರು ಭಾಗಿ

ಮೇಲುಕೋಟೆ : ವೈಷ್ಣವ ಪರಂಪರೆಯ ಅತ್ಯಂತ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಶನಿವಾರ ರಾತ್ರಿಯಿಡಿ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ…

9 hours ago

ಅಸ್ಸಾಂ ಚುನಾವಣೆ | ಪಂಚ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ಗುವಾಹಟಿ : ಅಸ್ಸಾಂ ವಿಧಾನಸಭಾ ಚುನಾವಣೆಗೆ ರಾಜಕೀಯ ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ಪಕ್ಷವೂ ಪಂಚ ಗ್ಯಾರಂಟಿಗಳನ್ನು ಘೋಷಿಸಿದೆ. ಎಐಸಿಸಿ ಅಧ್ಯಕ್ಷ…

10 hours ago

ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ : ​ಆಹಾರ,ನಾಗರಿಕ ಸರಬರಾಜು ಇಲಾಖೆ ಸ್ಪಷ್ಟನೆ

ಬೆಂಗಳೂರು : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ‌ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ ಆಟೋ‌ ಎಲ್.ಪಿ.ಜಿಗೆ ಯಾವುದೇ…

10 hours ago