ಕ್ರೀಡೆ

ICC T20 ವಿಶ್ವಕಪ್​: ನೆದರ್ಲೆಂಡ್​ ವಿರುದ್ಧ ಸೋಲಿನ ಭೀತಿಯಲ್ಲಿ ಗೆದ್ದ ಬಾಂಗ್ಲಾದೇಶ

ಹೋಬಾರ್ಟ್: ಟಿ20 ವಿಶ್ವಕಪ್‌ನ 17ನೇ ಪಂದ್ಯದಲ್ಲಿ ನೆದರ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಸೋಮವಾರ (ಅಕ್ಟೋಬರ್ 24) ಹೋಬಾರ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ನೆದರ್ಲೆಂಡ್ಸ್ ತಂಡ ಬಾಂಗ್ಲಾದೇಶದ ಆಟಗಾರರನ್ನು 144 ರನ್​ಗಳಿಗೆ ಕಟ್ಟಿ ಹಾಕಿತ್ತು. 144 ರನ್​ಗಳ ಗುರಿ ಬೆನ್ನಟ್ಟಿದ ನೆದರ್ಲೆಂಡ್​ ತಂಡ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿತು.
ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 144 ರನ್ ಗಳಿಸಿತು. ಈ ಪಂದ್ಯದಲ್ಲಿ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಶಾಕಿಬ್ ಅಲ್ ಹಸನ್ ಹಾಗೂ ಲಿಟನ್ ದಾಸ್​ ವಿಫಲರಾದರು.
ತಂಡದ ಪರ ನಜ್ಮುಲ್ ಹೊಸೈನ್ ಶಾಂಟೊ 25 ರನ್​, ಸೌಮ್ಯ ಸರ್ಕಾರ್ 14 ರನ್​, ಲಿಟನ್ ದಾಸ್ 9 ರನ್​, ನಾಯಕ ಶಕೀಬ್ ಅಲ್ ಹಸನ್ 7 ರನ್​, ಅಫೀಫ್ ಹೊಸೈನ್ 38 ರನ್​, ಯಾಸಿರ್ ಅಲಿ 3, ವಿಕೆಟ್​ ಕೀಪರ್​ ನೂರುಲ್ ಹಸನ್ 13 ರನ್​, ತಸ್ಕಿನ್ ಅಹ್ಮದ್ 0, ಮೊಸದ್ದೆಕ್ ಹೊಸೈನ್ 20 ರನ್​ ಮತ್ತು ಹಸನ್ ಮಹಮೂದ್ ಖಾತೆ ತೆಗೆಯದೇ ಅಜೇಯರಾಗಿ ಉಳಿದರು.
ನೆದರ್ಲೆಂಡ್ ಪರ ಪಾಲ್ ವ್ಯಾನ್ ಮೀಕೆರೆನ್ ಮತ್ತು ಬಾಸ್ ಡಿ ಲೀಡ್ ತಲಾ ಎರಡೆರಡು ವಿಕೆಟ್​ಗಳನ್ನು ಕಬಳಿಸಿದ್ರೆ, ಟಿಮ್ ಪ್ರಿಂಗಲ್, ಶರೀಜ್ ಅಹ್ಮದ್, ಲೋಗನ್ ವ್ಯಾನ್ ಬೀಕ್, ಫ್ರೆಡ್ ಕ್ಲಾಸೆನ್ ತಲಾ ಒಂದೊಂದು ವಿಕೆಟ್​ ಪಡೆದರು.

ಆರಂಭದಲ್ಲೇ ಮುಗ್ಗರಿಸಿದ ನೆದರ್ಲೆಂಡ್​​: ಬಾಂಗ್ಲಾದೇಶ ನೀಡಿದ ಗುರಿಯನ್ನು ಬೆನ್ನಟ್ಟಿದ ನೆದರ್ಲೆಂಡ್ ತಂಡ ಆರಂಭದಿಂದಲೇ ಕುಸಿತಕ್ಕೊಳಗಾಯಿತು. ಪವರ್​ ಪ್ಲೇನಲ್ಲಿ ನಾಲ್ಕು ಪ್ರಮುಖ ನಾಲ್ಕು ವಿಕೆಟ್​ಗಳನ್ನು ಕಳೆದುಕೊಂಡ ನೆದರ್ಲೆಂಡ್ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಕಾಲಿನ್ ಅಕರ್ಮನ್ ಒಂದೆಡೆಯಿಂದ ಬಾಂಗ್ಲಾದೇಶ ಬೌಲರ್​ಗಳನ್ನು ದಂಡಿಸುತ್ತಾ ಬಂದರೆ ಇನ್ನೊಂದೆಡೆ ಇವರಿಗೆ ಸಾಥ್​ ನೀಡದೇ ಆಟಗಾರರು ಪೆವಿಲಿಯನ್​ ಹಾದಿ ಹಿಡಿಯುತ್ತಿದ್ದರು. ಇದರ ಮಧ್ಯಯೂ ಕಾಲಿನ್ ಅಕರ್ಮನ್ ಬಾಂಗ್ಲದೇಶ ವಿರುದ್ಧ ಅರ್ಧ ಶತಕ ಗಳಿಸಿ ಮಿಂಚಿದರು.
ಇನ್ನು ಕಾಲಿನ್​ ಅಕರ್ಮನ್​ ಔಟಾದ ಬಳಿಕ ಬೌಲಿಂಗ್​ನಲ್ಲಿ ಮಿಂಚಿದ್ದ ಪಾಲ್ ವ್ಯಾನ್ ಮೀಕೆರೆನ್ ಬಾಂಗ್ಲಾದೇಶಕ್ಕೆ ಸೋಲಿನ ಭೀತಿ ತೊರಿಸಿದರು. 14 ಎಸೆತಗಳಲ್ಲಿ 24 ರನ್​ಗಳಿಸಿ ನೆದರ್ಲೆಂಡ್​ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಆದರೆ ನಿಗದಿತ 20 ಓವರ್​ಗಳಲ್ಲಿ ನೆದರ್ಲ್ಯಾಂಡ್​ ತಂಡ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡ 135 ರನ್​ಗಳನ್ನು ಕಲೆ ಹಾಕುವ ಮೂಲಕ 9 ರನ್​ಗಳ ಸೋಲು ಕಂಡಿತು.
ನೆದರ್ಲೆಂಡ್​ ​ ಪರ ಮ್ಯಾಕ್ಸ್ ಆಡ್ 8 ರನ್​, ವಿಕ್ರಮಜಿತ್ ಸಿಂಗ್ 0, ಬಾಸ್ ಡಿ ಲೀಡ್ 0, ಟಾಮ್ ಕೂಪರ್ 0, ನಾಯಕ ಮತ್ತು ವಿಕೆಟ್​ ಕೀಪರ್​ ಸ್ಕಾಟ್ ಎಡ್ವರ್ಡ್ಸ್ 16 ರನ್​, ಟಿಮ್ ಪ್ರಿಂಗಲ್ 1 ರನ್​, ಲೋಗನ್ ವ್ಯಾನ್ ಬೀಕ್ 2 ರನ್​, ಶರೀಜ್ ಅಹ್ಮದ್ 9 ರನ್​, ಕಾಲಿನ್ ಅಕರ್ಮನ್ 62 ರನ್​, ಫ್ರೆಡ್ ಕ್ಲಾಸೆನ್ 7 ರನ್ ಗಳಿಸಿ ಅಜೇರಾಗಿ ಉಳಿದ್ರೆ, ಪಾಲ್ ವ್ಯಾನ್ ಮೀಕೆರೆನ್ 24 ರನ್​ಗಳಿಸಿ ಔಟಾದರು.
ಬಾಂಗ್ಲಾದೇಶ ಪರ ತಸ್ಕಿನ್ ಅಹ್ಮದ್ 4 ವಿಕೆಟ್​ ಪಡೆದು ಮಿಂಚಿದ್ರೆ, ಹಸನ್ ಮಹಮೂದ್ 2 ವಿಕೆಟ್​ ಕಬಳಿಸಿದರು. ನಾಯಕ ಶಕೀಬ್ ಅಲ್ ಹಸನ್ ಮತ್ತು ಸೌಮ್ಯ ಸರ್ಕಾರ್ ತಲಾ ಒಂದೊಂದು ವಿಕೆಟ್​ ಪಡೆದುಕೊಂಡರು.
ಮೊದಲ ಸುತ್ತಿನಲ್ಲಿ ಆಡಿದ್ದ ನೆದರ್ಲೆಂಡ್ಸ್ ತಂಡ: ಟೂರ್ನಿಯಲ್ಲಿ ಬಾಂಗ್ಲಾದೇಶಕ್ಕೆ ಇದು ಮೊದಲ ಪಂದ್ಯವಾಗಿದೆ. ನೆದರ್ಲೆಂಡ್ ತಂಡವು ಮೊದಲ ಸುತ್ತಿನಲ್ಲಿ ಆಡಿದ ನಂತರ ಸೂಪರ್-12 ತಲುಪಿತ್ತು. ನೆದರ್ಲೆಂಡ್​ ತಂಡ ಯುಎಇ ಮತ್ತು ನಮೀಬಿಯಾವನ್ನು ಸೋಲಿಸಿತ್ತು. ಶ್ರೀಲಂಕಾ ವಿರುದ್ಧದ ಹಿಂದಿನ ಪಂದ್ಯದಲ್ಲಿ ನೆದರ್ಲೆಂಡ್ ಸೋಲನ್ನಪ್ಪಿಕೊಂಡಿತ್ತು. ಈ ಪಂದ್ಯವೂ ಕೈ ಚೆಲ್ಲುವ ಮೂಲಕ ನೆದರ್ಲೆಂಡ್​ಗೆ ಸತತ ಎರಡನೇ ಸೋಲು ಕಂಡಂತಾಗಿದೆ

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago