ಕೋಲ್ಕತಾ : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಅವರು ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಗೆ ತಮ್ಮದೇ ಆಯ್ಕೆಯ 15 ಸದಸ್ಯರನ್ನು ಒಳಗೊಂಡ ಟೀಮ್ ಇಂಡಿಯಾವನ್ನು ಹೆಸರಿಸಿದ್ದಾರೆ. ಇದರಲ್ಲಿ ಕೆಲವು ಆಟಗಾರರನ್ನು ಅವರು ಹೊರಗಿಟ್ಟಿದ್ದಾರೆ.
ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ ಹಾಗೂ ತಿಲಕ್ ವರ್ಮಾ ಮೂವರನ್ನೂ ಸೇರಿಸಿಕೊಳ್ಳದಿರಲು ಗಂಗುಲಿ ನಿರ್ಧರಿಸಿದ್ದಾರೆ . ಈ ಮೂವರು ಏಶ್ಯಕಪ್ 2023 ಗೆ ಆಯ್ಕೆಯಾಗಿದ್ದಾರೆ..
ತಂಡದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್. ರಾಹುಲ್ ಇದ್ದಾರೆ. ಈ ಇಬ್ಬರು ಗಾಯದಿಂದ ಮರಳುತ್ತಿದ್ದಾರೆ ಹಾಗೂ ಏಶ್ಯಕಪ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಭಾರತವು ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯ ವಿರುದ್ಧ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಅವರನ್ನು ಸೂಕ್ತ ಬ್ಯಾಟಿಂಗ್ ಆಯ್ಕೆಗಳಾಗಿ ಆಯ್ಕೆ ಮಾಡಿದ್ದಾರೆ. ತಂಡದಲ್ಲಿ ಇಶಾನ್ ಕಿಶನ್ ಮಾತ್ರ ವಿಶೇಷ ವಿಕೆಟ್ ಕೀಪರ್ ಆಗಿದ್ದು, ಭಾರತವು ತಮ್ಮ ತಂಡದಲ್ಲಿ ಹೆಚ್ಚುವರಿ ಬ್ಯಾಟರ್ ಆಡಲು ಬಯಸಿದರೆ ರಾಹುಲ್ ಪರ್ಯಾಯ ಆಯ್ಕೆಯಾಗಿದ್ದಾರೆ.
ಆಲ್ ರೌಂಡರ್ ಗಳಲ್ಲಿ ಗಂಗುಲಿ ಅವರು ಹಾರ್ದಿಕ್ ಪಾಂಡ್ಯ ಮತ್ತು ಎಡಗೈ ಸ್ಪಿನ್ ಜೋಡಿಯಾದ ರವೀಂದ್ರ ಜಡೇಜ ಮತ್ತು ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿದರು. ಗಂಗುಲಿ ಆಯ್ಕೆ ಮಾಡಿದ ತಂಡದಲ್ಲಿ ಕುಲದೀಪ್ ಯಾದವ್ ಇದ್ದಾರೆ.
ವೇಗದ ಬೌಲಿಂಗ್ ವಿಭಾಗದಲ್ಲಿ, ಗಂಗುಲಿ ಅವರು ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ, ಮುಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ರನ್ನು ಆಯ್ಕೆ ಮಾಡಿದ್ದಾರೆ.
ಈ ಆಟಗಾರರಲ್ಲಿ ಯಾರಾದರೂ ಯಾವುದೇ ಕಾರಣಕ್ಕಾಗಿ ಹೊರಗುಳಿದರೆ ಅಗತ್ಯವಿರುವ ಮೂರು ಬ್ಯಾಕ್-ಅಪ್ ಆಯ್ಕೆಗಳನ್ನು ಹೆಸರಿಸಿದ್ದಾರೆ.
“ಬ್ಯಾಟರ್ಗಳಲ್ಲಿ ಒಬ್ಬರು ಗಾಯಗೊಂಡರೆ ನಂತರ ತಿಲಕ್ ವರ್ಮಾ ಪ್ರವೇಶಿಸಬಹುದು, ಆದರೆ ವೇಗಿ ಗಾಯಗೊಂಡರೆ ಪ್ರಸಿದ್ಧ್ ಕೃಷ್ಠ ಅವಕಾಶ ಪಡೆಯುತ್ತಾರೆ., ಆದರೆ ಸ್ಪಿನ್ನರ್ ವಿಷಯದಲ್ಲಿ ಯಜುವೇಂದ್ರ ಚಹಾಲ್ ಬದಲಿ ಆಯ್ಕೆಯಾಗುತ್ತಾರೆ” ಎಂದು ಗಂಗುಲಿ ಸ್ಟಾರ್ ಸ್ಪೋರ್ಟ್ಸ್ ಗೆ ತಿಳಿಸಿದರು.
ಐಸಿಸಿ ವಿಶ್ವಕಪ್ 2023ಕ್ಕೆ ಸೌರವ್ ಗಂಗುಲಿ ಆಯ್ಕೆ ಮಾಡಿದ ಭಾರತ ತಂಡ:
ರೋಹಿತ್ ಶರ್ಮಾ, ಶುಭಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ .ರಾಹುಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ, ಮುಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…