ಕ್ರೀಡೆ

ಪಂಜಾಬ್ ವಿರುದ್ಧ ಗೆದ್ದು ಬೀಗಿದ ಹೈದರಾಬಾದ್

ಹೈದರಾಬಾದ್‌: ಅಭಿಷೇಕ್‌ ಶರ್ಮಾ ಅವರ ಅಮೋಘ ಶತಕ, ಟ್ರಾವಿಸ್‌ ಹೆಡ್‌ ಅವರ ಅರ್ಧಶತಕದ ಬಲದಿಂದಾಗಿ ಪಂಜಾಬ್‌ ಕಿಂಗ್ಸ್‌ ವಿರುದ್ಧ 245 ರನ್‌ ಚೇಸ್‌ ಮಾಡಿದ ಹೈದರಾಬಾದ್‌ ಐಪಿಎಲ್‌ ಇತಿಹಾಸದಲ್ಲಿಯೇ ಅತೀಹೆಚ್ಚು ರನ್‌ ಚೇಸ್‌ ಮಾಡಿದ ಹೆಗ್ಗಳಿಕೆಗೆ ಪಾತ್ರವಾಯಿತು.

ಇಲ್ಲಿನ ರಾಜೀವ್‌ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಪಂಜಾಬ್‌ ಕಿಂಗ್ಸ್‌ ನಡುವಣ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 245 ರನ್‌ ಬಾರಿಸಿತು. ಈ ಮೊತ್ತ ಬೆನ್ನತ್ತಿದ ಹೈದರಾಬಾದ್‌ 18.3 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 247 ರನ್‌ ಬಾರಿಸಿ 8 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.

ಪಂಜಾಬ್‌ ಇನ್ನಿಂಗ್ಸ್‌: ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ಗೆ ಉತ್ತಮ ಆರಂಭ ದೊರೆಯಿತು. ಪ್ರಿಯಾಂಶ್‌ ಆರ್ಯ 36(13), ಪ್ರಭ್‌ಸಿಮ್ರಾನ್‌ 42(23) ರನ್‌ ಗಳಿಸಿದರು. ನಾಯಕ ಶ್ರೇಯಸ್‌ ಅಯ್ಯರ್‌ 82(36) ರನ್‌ ಗಳಿಸಿದರೇ, ನೇಹಲ್‌ ವಧೇರಾ 27(22) ರನ್‌ ಗಳಿಸಿದರು.

ಉಳಿದಂತೆ ಶಶಾಂಕ್‌ ಸಿಂಗ್‌ 2(3), ಮ್ಯಾಕ್ಸ್‌ವೆಲ್‌ 3(7) ರನ್‌ ಬಾರಿಸಿದರು. ಸ್ಟೋಯ್ನಿಸ್‌ ಔಟಾಗದೆ 34(11) ರನ್‌ ಗಳಿಸಿದರೇ, ಏನ್ಸನ್‌ ಔಟಾಗದೇ 5(5) ರನ್‌ ಗಳಿಸಿ ಉಳಿದರು.

ಪಂಜಾಬ್‌ ಪರ ಹರ್ಷಲ್‌ ಪಟೇಲ್‌ ಪ್ರಮುಖ ನಾಲ್ಕು ವಿಕೆಟ್‌ ಪಡೆದರೆ, ಮಲಿಂಗಾ ಎರಡು ವಿಕೆಟ್‌ ಪಡೆದು ಮಿಂಚಿದರು.

ಎಸ್‌ಆರ್‌ಎಚ್‌ ಇನ್ನಿಂಗ್ಸ್‌: ಬೃಹತ್‌ ಮೊತ್ತ ಬೆನ್ನತ್ತಿದ ಹೈದರಾಬಾದ್‌ಗೆ ಭರ್ಜರಿ ಆರಂಭ ದೊರೆಯಿತು. ಆರಂಭಿಕರಾಗಿ ಬಂದ ಟ್ರಾವಿಸ್‌ ಹೆಡ್‌ 66(37) ರನ್‌ ಬಾರಿಸಿ ಔಟಾದರೇ, ಅಭಿಷೇಕ್‌ ಶರ್ಮಾ 55 ಎಸೆತಗಳಲ್ಲಿ 14 ಬೌಂಡರಿ, ಭರ್ಜರಿ 10 ಸಿಕ್ಸರ್‌ ಸಹಿತ 141 ರನ್‌ ಚಚ್ಚಿ ಪೆವಿಲಿಯನ್‌ ಸೇರಿದರು.

ಕೊನೆಯಲ್ಲಿ ಒಂದಾದ ಕ್ಲಾಸೆನ್‌ ಮತ್ತು ಇಶಾನ್‌ ಕಿಸಾನ್‌ ಔಟಾಗದೇ ಕ್ರಮವಾಗಿ 21(14), 9(6) ರನ್‌ ಕೆಲಹಾಕಿ ಗೆಲುವಿನ ನಗೆ ಬೀರಿದರು.

ಪಂಜಾಬ್‌ ಪರ ಅರ್ಶ್‌ದೀಪ್‌ ಸಿಂಗ್‌ ಮತ್ತು ಚಾಹಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಪಂದ್ಯಶ್ರೇಷ್ಠ: ಅಭಿಷೇಕ್‌ ಶರ್ಮಾ

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

IPL 2025 | ಸೂಪರ್‌ ಓವರ್‌ನಲ್ಲಿ ರಾಜಸ್ಥಾನ್‌ ಮಣಿಸಿದ ಡೆಲ್ಲಿ

ಹೊಸದಿಲ್ಲಿ : 2025ನೇ ಸಾಲಿನ ಐಪಿಎಲ್‌ನ 18ನೇ ಆವೃತ್ತಿಯ 32ನೇ ಪಂದ್ಯ ಸೂಪರ್‌ ಓವರ್‌ನಲ್ಲಿ ಅಂತ್ಯ ಕಂಡಿದ್ದು, ಈ ಪಂದ್ಯದಲ್ಲಿ…

3 hours ago

ರಾಜ್ಯ ದಿವಾಳಿಯಾಗಿಲ್ಲ, ಆರ್ಥಿಕವಾಗಿ ಸದೃಢ : ಸಿಎಂ ಸಿದ್ದರಾಮಯ್ಯ

ಕರ್ನಾಟಕದ ಮುಕುಟ ‘ಬೀದರ್’ ನಲ್ಲಿ 2025ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಿಎಂ ಗ್ಯಾರಂಟಿಗಳನ್ನು ಜಾರಿ ಮಾಡಿ…

3 hours ago

ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 3.26 ಕೋಟಿ ದಾಖಲೆಯ ಮೊತ್ತ ಸಂಗ್ರಹ!

ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಇತಿಹಾಸದಲ್ಲಿಯೇ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ…

3 hours ago

ನಮ್ಮ ಸರ್ಕಾರ ತೆಗೆಯಲು ಯೋಜನೆ ನಡೆದಿದೆ, ಒಗ್ಗಟ್ಟಾಗಿ ಇರಿ : ಖರ್ಗೆ ಎಚ್ಚರಿಕೆ

ಕಲಬುರಗಿ : ರಾಜ್ಯದಲ್ಲಿನ ನಮ್ಮ ಸರ್ಕಾರ ತೆಗೆಯಲು ಯೋಜನೆ ನಡೆದಿದೆ. ಒಗ್ಗಾಟ್ಟಾಗಿ ಇರದೇ ಹೋದರೆ ಸರ್ಕಾರ ಉರುಳಬಹುದು ಎನ್ನುವ ಮೂಲಕ…

4 hours ago

ಮೈಸೂರು | ತಂಪೆರೆದ ಮಳೆ

ಮೈಸೂರು: ಬಿಸಿಲ ತಾಪದಿಂದ ಕಾದು ಕೆಂಡದಂತಾಗಿದ್ದ ಇಳೆಗೆ ಬುಧವಾರ ರಾತ್ರಿ ಸುರಿದ ಅಶ್ವಿನಿ ಮಳೆ ತಂಪೆರೆದಿದೆ. ಜಿಲ್ಲೆಯ ವಿವಿಧೆಡೆ ಉತ್ತಮ…

4 hours ago

ಪಿಡಿಒ ಸೇರಿ ಇತರ ನೌಕರರ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಅಧಿಸೂಚನೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು : ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ 1 ಮತ್ತು 2…

5 hours ago