ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ
ನವದೆಹಲಿ : ನೆದರ್ಲೆಂಡ್ಸ್ ಹಾಗೂ ಸ್ಪೇನ್ನಲ್ಲಿ ಜುಲೈ 1ರಿಂದ 17ರ ವರೆಗೆ ನಡೆಯಲಿರುವ ಮಹಿಳಾ ಹಾಕಿ ವಿಶ್ವಕಪ್ಗೆ 20 ಮಂದಿಯ ಭಾರತ ತಂಡ ಪ್ರಕಟಿಸಲಾಗಿದ್ದು, ಸವಿತಾ ಪೂನಿಯಾ ನಾಯಕಿಯಾಗಿ ನೇಮಕಗೊಂಡಿದ್ದಾರೆ. ದೀಪ್ ಗ್ರೇಸ್ ಅವರು ಉಪನಾಯಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಖಾಯಂ ನಾಯಕಿ ರಾಣಿ ರಾಂಪಾಲ್ ಇನ್ನಷ್ಟೇ ಗಾಯದಿಂದ ಚೇತರಿಸಿಕೊಳ್ಳಬೇಕಿದ್ದು, ಅವರು ತಂಡದಿಂದ ಹೊರಗುಳಿದಿದ್ದಾರೆ.
ಉಳಿದಂತೆ ಮೋನಿಕಾ, ನೇಹಾ, ಜ್ಯೋತಿ, ಸಲೀಮಾ ಟೆಟೆ, ನವ್ಜೋತ್ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಾಣಿ ಹೊರತುಪಡಿಸಿ ಕಳೆದ ವರ್ಷ ಟೋಕಿಯೋ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಎಲ್ಲಾ ಆಟಗಾರರು ವಿಶ್ವಕಪ್ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭಾರತ ಲೀಗ್ನಲ್ಲಿ ‘ಬಿ’ ಗುಂಪಿನಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ಚೀನಾ ಜೊತೆ ಸ್ಥಾನ ಪಡೆದಿದ್ದು, ಜುಲೈ 3ಕ್ಕೆ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯ ಅಡಲಿದೆ.