ಸಲಾಲ (ಒಮಾನ್): ಭಾರತದ ಕಿರಿಯರ ಹಾಕಿ ತಂಡ ಮತ್ತಮ್ಮೆ ಏಷ್ಯಾ ಮಟ್ಟದಲ್ಲಿ ಕಿಂಗ್ ಎನಿಸಿಕೊಂಡಿದೆ. ಇಲ್ಲಿ ನಡೆದ ಜೂನಿಯರ್ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಬದ್ಧ ಎದುರಾಳಿ ಪಾಕಿಸ್ಥಾನವನ್ನು 2-1 ಗೋಲುಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
13ನೇ ನಿಮಿಷದಲ್ಲಿ ಅಂಗದ್ ಬೀರ್ ಸಿಂಗ್, 20ನೇ ನಿಮಿಷದಲ್ಲಿ ಅರೈಜೀತ್ ಸಿಂಗ್ ಬಾರಿಸಿದ ಗೋಲು ಭಾರತದ ಪಾಲಿಗೆ ವರವಾಗಿ ಪರಣಮಿಸಿತು. ಹಾಗೆಯೇ ಪಾಕ್ ಅಕ್ರಮಣವನ್ನು ತಡೆದು ನಿಂತ ಗೋಲ್‌ಕೀಪರ್ ಶಶಿಕುಮಾರ್ ಮೋಹಿತ್ ಹೊನ್ನೇನಹಳ್ಳಿ ಕೂಡ ಪಂದ್ಯದ ಹೀರೋ ಎನಿಸಿದರು.
ಈ ಜಯದೊಂದಿಗೆ ಭಾರತ ಸರ್ವಾಧಿಕ 4 ಸಲ ಜೂನಿಯರ್ ಏಷ್ಯಾ ಕಪ್ ಪ್ರಶಸ್ತಿ ಜಯಿಸಿದಂತಾಯಿತು. ಇದಕ್ಕೂ ಮುನ್ನ 2004, 2008 ಮತ್ತು 2015ರಲ್ಲಿ ಚಾಂಪಿಯನ್ ಆಗಿತ್ತು. ಪಾಕಿಸ್ಥಾನ 3 ಸಲ ಪ್ರಶಸ್ತಿ ಜಯಿಸಿದೆ (1988, 1992 ಮತ್ತು 1996).
ಅಜೇಯ ಅಭಿಯಾನ: ಉತ್ತಮ್ ಸಿಂಗ್ ನಾಯಕತ್ವದ ಭಾರತ ಅಜೇಯವಾಗಿ ಈ ಕೂಟವನ್ನು ಮುಗಿಸಿತು. “ಪಾಕಿಸ್ಥಾನ ವಿರುದ್ಧದ ಲೀಗ್ ಪಂದ್ಯ 1-1ರಿಂದ ಡ್ರಾ ಆಗಿತ್ತು. ಅಲ್ಲಿನ ಕೊರತೆಗಳನ್ನು ಫೈನಲ್‌ನಲ್ಲಿ ನೀಗಿಸಿಕೊಳ್ಳುವುದು ನಮ್ಮ ಯೋಜನೆ ಆಗಿತ್ತು. ಇದು ಯಶಸ್ವಿಯಾಯಿತು’ ಎಂಬುದು ಉತ್ತಮ್ ಸಿಂಗ್ ಪ್ರತಿಕ್ರಿಯೆ.
ಇದೊಂದು ತಂಡ ಪ್ರಯತ್ನ ಎಂಬುದಾಗಿ ಕೋಚ್ ಸಿ.ಆರ್. ಕುಮಾರ್ ಹೇಳಿದರು. ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾವನ್ನು 9-1 ಗೋಲುಗಳಿಂದ ಭರ್ಜರಿ ಯಾಗಿ ಮಣಿಸುವ ಮೂಲಕ ಭಾರತ ಪ್ರಶಸ್ತಿ ಸುತ್ತಿಗೆ ನೆಗೆದಿತ್ತು.
ವಿಶ್ವಕಪ್‌ಗೆ ಆಯ್ಕೆ: ಈ ಸಾಧನೆಯಿಂದಾಗಿ ಭಾರತವೀಗ ಮಲೇಷ್ಯಾದಲ್ಲಿ ನಡೆಯುವ ಎಫ್‌ಐಎಚ್ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿದೆ. ಜತೆಗೆ ಭಾರತೀಯ ಹಾಕಿ ಫೆಡರೇಶನ್ ಪ್ರತೀ ಹಾಕಿ ಆಟಗಾರರಿಗೆ 2 ಲಕ್ಷ ರೂ. ಹಾಗೂ ಸಹಾಯಕ ಸಿಬಂದಿಗೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದೆ.
ಭಾರತೀಯ ಹಾಕಿ ಫೆಡರೇಶನ್ ಅಧ್ಯಕ್ಷ ದಿಲೀಪ್ ತಿರ್ಕಿ ಕಿರಿಯರ ಸಾಧನೆಯನ್ನು ಕೊಂಡಾಡಿದ್ದಾರೆ. “ಜೂನಿಯರ್ ಹಾಕಿಪಟುಗಳು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಸುಲ್ತಾನ್ ಆಫ್ ಜೊಹರ್ ಕಪ್ ಬಳಿಕ ತಂಡದಲ್ಲಿ ಹೊಸ ಜೋಶ್ ತುಂಬಿದೆ. ವಿಶ್ವಕಪ್‌ನಲ್ಲೂ ಚಾಂಪಿಯನ್ ಆಗುವ ನಂಬಿಕೆ ಇದೆ’ ಎಂದಿದ್ದಾರೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…