ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಾಲ ಅವರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರು, ಹಿರಿಯ ನಾಯಕರು, ಸೆಲೆಬ್ರೆಟಿಸ್, ಕ್ರೀಡಾಪಟುಗಳ ಸಹಿತ ಸುಮಾರು 7 ಸಾವಿರ ಮಂದಿಗೆ ಆಹ್ವಾನ ನೀಡಲಾಗಿದೆ.
ಕ್ರೀಡಾ ದಿಗ್ಗಜರಾದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್, ‘ಸ್ಪ್ರಿಂಟ್ ಕ್ವೀನ್’ ಪಿಟಿ ಉಷಾ ಮತ್ತು ಸ್ಟಾರ್ ಫುಟ್‌ಬಾಲ್ ಆಟಗಾರ ಭೈಚುಂಗ್ ಭುಟಿಯಾ ಸೇರಿದಂತೆ ಅನೇಕ ಸ್ಟಾರ್ ಆಟಗಾರರಿಗೆ ಆಹ್ವಾನಿಸಲಾಗಿದೆ.
ರಾಮಮಂದಿರ ಉದ್ಘಾಟನೆಗೆ ಆಹ್ವಾನಿತ ಕ್ರಿಕೆಟಿಗರ ಪಟ್ಟಿ ಇಲ್ಲಿದೆ:
ಸಚಿನ್ ತೆಂಡೂಲ್ಕರ್
ಎಂಎಸ್ ಧೋನಿ
ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ
ಸುನಿಲ್ ಗವಾಸ್ಕರ್
ಕಪಿಲ್ ದೇವ್
ರಾಹುಲ್ ದ್ರಾವಿಡ್
ವೀರೇಂದ್ರ ಸೆಹ್ವಾಗ್
ಸೌರವ್ ಗಂಗೂಲಿ
ಅನಿಲ್ ಕುಂಬ್ಳೆ
ರವೀಂದ್ರ ಜಡೇಜಾ
ರವಿಚಂದ್ರನ್ ಅಶ್ವಿನ್
ಮಿಥಾಲಿ ರಾಜ್
ಹರ್ಮನ್‌ಪ್ರೀತ್ ಕೌರ್
ಗೌತಮ್ ಗಂಭೀರ್
ಹರ್ಭಜನ್ ಸಿಂಗ್
ಜನವರಿ 25 ರಿಂದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗಲಿದ್ದು, ಈ ಹಿನ್ನಲೆಯಲ್ಲಿ ಟೀಮ್ ಇಂಡಿಯಾದ ಯಾವೆಲ್ಲಾ ಆಟಗಾರರು ಅಯೋಧ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ, ಯಾವೆಲ್ಲಾ ಆಟಗಾರರು ಬರುವುದಿಲ್ಲ ಎಂಬುದನ್ನು ನೋಡಬೇಕಿದೆ.
ವಿವಿಧ ಕ್ರೀಡಾ ಆಟಗಾರರ ಪಟ್ಟಿ: ಕ್ರಿಕೆಟ್ ಹೊರತುಪಡಿಸಿ, ವೇಟ್‌ಲಿಫ್ಟರ್ ಕರ್ಣಂ ಮಲ್ಲೇಶ್ವರಿ, ಫುಟ್‌ಬಾಲ್ ಆಟಗಾರ ಕಲ್ಯಾಣ್ ಚೌಬೆ, ಓಟಗಾರ್ತಿ ಕವಿತಾ ರಾವುತ್ ಮತ್ತು ಪ್ಯಾರಾಲಿಂಪಿಕ್ ಜಾವೆಲಿನ್ ಎಸೆತಗಾರ ದೇವೇಂದ್ರ ಝಜಾರಿಯಾ ಅವರಿಗೂ ಆಹ್ವಾನ ಕಳುಹಿಸಲಾಗಿದೆ. ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಹರ್ಮನ್‌ಪ್ರೀತ್ ಕೌರ್, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಮತ್ತು ಅವರ ತರಬೇತುದಾರ ಪುಲ್ಲೇಲ ಗೋಪಿಚಂದ್‌ಗೆ ಆಹ್ವಾನ ನೀಡಲಾಗಿದೆ.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…