ಕ್ರೀಡೆ

ಹಾಶೀಂ ಆಮ್ಲಾ, ಶಿಖರ್ ಧವನ್ ದಾಖಲೆ ಮುರಿದ ಪಾಕ್ ನಾಯಕ ಬಾಬರ್ ಅಜಂ

ಕರಾಚಿ: ಪಾಕಿಸ್ಥಾನ ತಂಡವು ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯನ್ನು ಗೆದ್ದು ಬೀಗಿದೆ. ಕೊನೆಯ ಪಂದ್ಯದಲ್ಲಿ ಸೋತರೂ 4-1 ಅಂತರದಿಂದ ಪಾಕ್ ತಂಡವು ಸರಣಿ ವಶಪಡಿಸಿಕೊಂಡಿದೆ.

ಈ ಪಂದ್ಯದ ವೇಳೆ ಪಾಕಿಸ್ಥಾನದ ನಾಯಕ ಬಾಬರ್ ಅಜಂ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಭಾನುವಾರ ನೂರನೇ ಏಕದಿನ ಪಂದ್ಯವಾಡಿದ ಬಾಬರ್ ಮೊದಲ ನೂರು ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ರವಿವಾರದ ಪಂದ್ಯದಲ್ಲಿ ಬಾಬರ್ ಕೇವಲ ಒಂದು ರನ್ ಗೆ ಔಟಾದರು. ಒಟ್ಟು ನೂರು ಏಕದಿನ ಪಂದ್ಯದಲ್ಲಿ ಬಾಬರ್ 5089 ರನ್ ಗಳಿಸಿದ್ದಾರೆ. ನೂರು ಪಂದ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಬಾಬರ್.

100 ಏಕದಿನ ಪಂದ್ಯಗಳ ನಂತರ ಗಳಿಸಿದ ರನ್‌ ಗಳ ವಿಷಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾಬರ್‌ನ ದಾಖಲೆಗಿಂತ ಬಹಳ ಹಿಂದಿದ್ದಾರೆ. ಕೊಹ್ಲಿ 100 ಪಂದ್ಯಗಳ ನಂತರ 48.89 ಸರಾಸರಿಯಲ್ಲಿ 4,107 ರನ್ ಗಳಿಸಿದ್ದರು.

ಒಟ್ಟಾರೆಯಾಗಿ ಕೊಹ್ಲಿ ಈಗ 274 ಏಕದಿನ ಪಂದ್ಯಗಳಲ್ಲಿ 57.32 ಸರಾಸರಿಯಲ್ಲಿ 46 ಶತಕಗಳು ಮತ್ತು 65 ಅರ್ಧಶತಕಗಳೊಂದಿಗೆ 12,898 ರನ್ ಗಳಿಸಿದ್ದಾರೆ. ಬಾಬರ್ 100 ಏಕದಿನ ಪಂದ್ಯಗಳಲ್ಲಿ 18 ಶತಕ ಮತ್ತು 26 ಅರ್ಧಶತಕಗಳೊಂದಿಗೆ 5,089 ರನ್ ಗಳಿಸಿದ್ದಾರೆ.

100 ಪಂದ್ಯಗಳ ನಂತರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ…

  1. ಬಾಬರ್ ಆಜಮ್ – 5,089 ರನ್
  2. ಹಾಶಿಮ್ ಆಮ್ಲ – 4,808 ರನ್
  3. ಶಿಖರ್ ಧವನ್ – 4,309 ರನ್
  4. ಡೇವಿಡ್ ವಾರ್ನರ್ – 4,217 ರನ್
  5. ಶಾಯ್ ಹೋಪ್ – 4,193 ರನ್
  6. ಗಾರ್ಡನ್ ಗ್ರೀನಿಡ್ಜ್ – 4,177 ರನ್
andolanait

Recent Posts

ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬೆಂಡರವಾಡಿ ಕೆರೆಗೆ ಹಾರಿ ಮಂಡ್ಯ ಜಿಲ್ಲೆಯ ವ್ಯಕ್ತಿ ಆತ್ಮಹತ್ಯೆ ಚಾಮರಾಜನಗರ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ…

3 hours ago

ಹೈದರಾಬಾದ್‌ನಲ್ಲಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಬಂಗಲೆಗೆ ಬೀಗ

ಹೈದರಾಬಾದ್:‌ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಹೈದರಾಬಾದ್‌ನಲ್ಲಿ ಅವರ ಮನೆಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. 2016ರಲ್ಲಿ ನಿಧನರಾದ ಜಯಲಲಿತಾ…

6 hours ago

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಪಕ್ಕಾ: ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ

ಬೆಂಗಳೂರು: ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಪಕ್ಕಾ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ…

7 hours ago

ಬೆಂಗಳೂರು| 2 ಕೋಟಿ ರೂ ಮೌಲ್ಯದ ಡ್ರಗ್ಸ್‌ ಜಪ್ತಿ: ವಿದೇಶಿ ಪ್ರಜೆ ಬಂಧನ

ಬೆಂಗಳೂರು: ಇಲ್ಲಿನ ಯಲಹಂಕ ಠಾಣೆ ಪೊಲೀಸರು, ಸುಮಾರು 2 ಕೋಟಿ ರೂ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದು, ನೈಜೀರಿಯಾ ಮೂಲದ…

7 hours ago

ಕೋಲ್ಕತ್ತಾ: ಟೆನಿಸ್‌ ದಂತಕಥೆ ಲಿಯಾಂಡರ್‌ ಪೇಸ್‌ ಬಿಜೆಪಿ ಸೇರ್ಪಡೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಭಾರತೀಯ ಟೆನಿಸ್‌ ಐಕಾನ್‌ ಲಿಯಾಂಡರ್‌ ಪೇಸ್‌ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.…

7 hours ago

ಖಾಸಗಿ ಶಾಲೆಗಳಿಂದ ಶುಲ್ಕ ಏರಿಕೆ: ಮಧ್ಯಮ ವರ್ಗದ ಪೋಷಕರಿಗೆ ಸಂಕಷ್ಟ

ಬೆಂಗಳೂರು: ಖಾಸಗಿ ಶಾಲೆಗಳು ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ 2026-27ನೇ ಸಾಲಿನ ಶುಲ್ಕವನ್ನು 5-10%, ಮತ್ತೆ ಕೆಲವು 10-15% ವರೆಗೆ ಏರಿಕೆ ಮಾಡಿವೆ.…

7 hours ago