Harith Noah
ಬೆಂಗಳೂರು : 2025 ಡಕಾರ್ ರ‍್ಯಾಲ್ಲಿ ಕೈ ಮುರಿದುಕೊಂಡು ಸ್ಪರ್ಧೆಯಿಂದ ಹೊರಗುಳಿದ ಭಾರತದ ಅಗ್ರಸ್ಥಾನದಲ್ಲಿರುವ ರ‍್ಯಾಲಿ ರೈಡರ್ ಹರಿತ್ ನೋಹ್ ಮತ್ತೆ ಸ್ಪರ್ಧೆಗೆ ಮರಳಿದ್ದಾರೆ. 2024ರ ಡಕಾರ್ ರ‍್ಯಾಲಿ ರೇಸ್ ಅನ್ನು ಗೆದ್ದಿದ್ದ ಹರಿತ್ ಇದೀಗ ದಕ್ಷಿಣ ಆಫ್ರಿಕಾದ ಸಫಾರಿ ರ‍್ಯಾಲಿಯಲ್ಲಿ ಮತ್ತೆ ಪಾಲ್ಗೊಳ್ಳಲಿದ್ದಾರೆ.
ಎಫ್ಐಎ ಎಫ್ಐಎಂ ವರ್ಲ್ಡ್ ರ‍್ಯಾಲಿ-ರೇಡ್ ಚಾಂಪಿಯನ್ಶಿಪ್ (W2RC) 2025ರ ಮೂರನೇ ಸುತ್ತಾಗಿ ನಡೆಯುವ ದಕ್ಷಿಣ ಆಫ್ರಿಕಾದ ಸಫಾರಿ ರ‍್ಯಾಲಿಯಲ್ಲಿ, ಭಾರತದ ಹರಿತ್ ನೋಹ್ ಸ್ಪರ್ಧಿಸುತ್ತಿದ್ದಾರೆ. ಮೇ 18 ರಿಂದ 24 ರವರೆಗೆ ಸನ್ ಸಿಟಿ ರಿಸಾರ್ಟ್ನಿಂದ ರ‍್ಯಾಲಿ ಆರಂಭವಾಗಲಿದೆ.
ಶೆರ್ಕೋ ಟಿವಿಎಸ್ ರ‍್ಯಾಲಿ ಫ್ಯಾಕ್ಟರಿ ತಂಡದ ಸದಸ್ಯರಾದ ಹರಿತ್, ಡಕಾರ್ 2025ರ ಪ್ರೊಲೋಗ್ ಹಂತದಲ್ಲಿ ಬಿದ್ದ ಪರಿಣಾಮ ಕೈ ಮುರಿದುಕೊಂಡಿದ್ದರು, ಆ ಹಂತವನ್ನು ಪೂರ್ಣಗೊಳಿಸಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹರಿತ್ ಈಗ, ನಾಲ್ಕು ತಿಂಗಳ ಚಿಕಿತ್ಸೆಯ ನಂತರ ಮತ್ತೆ ಸ್ಪರ್ಧೆಗೆ ಮರಳಿದ್ದು, 2026ರ ಡಕಾರ್ ರ‍್ಯಾಲಿ ತೀವ್ರ ಪೈಪೋಟಿ ನೀಡಲಿದ್ದಾರೆ.
ಈ ಬಗ್ಗೆ ಮಾತನಾಡಿದ ಹರಿತ್ ‘ಡಕಾರ್ನ ನಂತರ ನಾನೊಂದು ವಿಶ್ರಾಂತಿ ತೆಗೆದುಕೊಂಡೆ, ಆದರೆ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಮತ್ತು ನಾನು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಈ ರೇಸ್ ನನ್ನ ಪುನಃಪ್ರವೇಶ, ಆದ್ದರಿಂದ ಸ್ವಲ್ಪ ಆತಂಕ ಇದ್ದೇ ಇರುತ್ತದೆ, ಅದು ಸಹಜ. ದಕ್ಷಿಣ ಆಫ್ರಿಕಾದ ಸಫಾರಿ ರ‍್ಯಾಲಿ ಎಲ್ಲರಿಗೂ ಹೊಸದು, ಮಾರ್ಗವು ಎಲ್ಲರಿಗೂ ಅಪರಿಚಿತ. ಪ್ರತಿಯೊಂದು ಕಿಲೋಮೀಟರ್ ಅನ್ನು ಗಮನದಿಂದ ತೆಗೆದುಕೊಳ್ಳುವುದು ನನ್ನ ತಂತ್ರ’ ಎಂದು ಹೇಳಿದ್ದಾರೆ.
ಹರಿತ್ ನೋಹ್ ಅವರ ಈ ಮರಳಿಕೆಯು ವೈಯಕ್ತಿಕ ಸಾಧನೆಗೆ ಮಾತ್ರವಲ್ಲ, ಭಾರತೀಯ ಮೋಟಾರ್ಸ್ಪೋರ್ಟಿಗೂ ಮಹತ್ವದ್ದಾಗಿದೆ. ಇಂತಹ ವಿಶ್ವಮಟ್ಟದ ಸ್ಪರ್ಧೆಗಳಲ್ಲಿ ಭಾರತೀಯರು ಪಾಲ್ಗೊಳ್ಳುವುದು, ದೇಶದ
ರ‍್ಯಾಲಿ-ರೇಡ್ ಸ್ಪರ್ಧೆಯ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡಯ್ಯುತ್ತದೆ.
ರಾಮನಗರ: ದೇವರ ದರ್ಶನಕ್ಕೆಂದು ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗಲೇ ವ್ಯಕ್ತಿಯೋರ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಕೆಂಪನಹಳ್ಳಿ…
ಬೆಂಗಳೂರು: ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗುವ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ ಆಯೋಜಿಸಲಾಗಿದೆ. ಸುಮಾರು ಆರು…
ನವದೆಹಲಿ: ಉತ್ತರ ಗೋವಾದ ಬಾಗಾ ಬೀಚ್ ಬಳಿಯ ಅರ್ಪೊರಾದ ನೈಟ್‌ಕ್ಲಬ್ ಬೀರ್ಚ್ ಬೈ ರೋಮಿಯೋ ಲೇನ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ…
ಮೈಸೂರು: ಕಣ್ಣಿಗೆ ಕಾರದಪುಡಿ ಎರಚಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಅಪಹರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ ಮೂರನೇ ಹಂತದಲ್ಲಿ ಈ…
ಗೋವಾ: ಇಲ್ಲಿನ ನೈಟ್ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25 ಜನ ಸಾವನ್ನಪ್ಪಿದ್ದಾರೆ. ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್…
ಮೈಸೂರಿನ ಶ್ರೀರಾಂಪುರದ ಮಾರ್ಗದಲ್ಲಿ ಬರುವ ಅಮೃತ್ ಬೇಕರಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ತಂಗುದಾಣ ಹಾಳಾಗಿದ್ದು, ಬಸ್‌ಗಾಗಿ ಕಾಯುವವರು ರಸ್ತೆಯಲ್ಲಿ ನಿಲ್ಲಬೇಕಾದ…