ಕ್ರೀಡೆ

ಹೈಜಂಪ್‌ನಲ್ಲಿ ಚಿನ್ನದ ಪದಕ: ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತ

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ 2024ರಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ. ಪುರುಷರ ಹೈಜಂಪ್‌ ಟಿ64 ಸ್ಪರ್ಧೆಯಲ್ಲಿ ಪ್ರವೀಣ್‌ ಕುಮಾರ್‌ ಚಿನ್ನದ ಪದಕ ಗೆಲ್ಲುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಮೂರು ವರ್ಷಗಳ ಹಿಂದೆ ಟೋಕಿಯೊ ಕೂಟದಲ್ಲಿ ಬೆಳ್ಳಿ ಗೆದ್ದಿದ್ದ ಪ್ರವೀಣ್‌, ಇದೀಗ ಸುಧಾರಿತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

21ವರ್ಷ ವಯಸ್ಸಿನ ಪ್ರವೀಣ್‌, ಆರು ಮಂದಿ ಇದ್ದ ಫೈನಲ್‌ ಕಣದಲ್ಲಿ 2.08ಮೀಟರ್‌ ಜಿಗಿದು ಅಗ್ರಸ್ಥಾನ ಪಡೆದರು. ಅಮೆರಿಕಾದ ಡೆರೆಕ್‌ ಲೊಸಿಡೆಂಟ್‌ ಅವರು 2.06ಮೀಟರ್‌ ಜಿಗಿದು ಬೆಳ್ಳಿ ಪದಕ ಪಡೆದರೆ, ಉಜ್ಬೇಜಿಸ್ತಾನದ ಟೆಮುರ್ಬೆಕ್‌ ಗಿಯಾಝೋವ್‌ ಅವರು 2.03ಮೀ.ನೊಡನೆ ಕಂಚಿನ ಪದಕವನ್ನು ತಮ್ಮ ಕೊರಳಿಗೆ ಹಾಕಿಕೊಂಡರು.

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಬಂಗಾಳ-ಕೇರಳದಲ್ಲಿ ಬದಲಾವಣೆಯ ಸುಳಿವು?

ಅಧಿಕಾರ ಹಿಡಿಯಲು ದಿನದ ಇಪ್ಪತ್ನಾಲ್ಕು ಗಂಟೆಯೂ ರಾಜಕೀಯ ಲೆಕ್ಕಾಚಾರ ಹಾಕುವುದರಲ್ಲಿ ನಿಪುಣರೆಂದೇ ಖ್ಯಾತಿ ಪಡೆದಿದ್ದ ಜನತಾದಳದ ಅಗ್ರಗಣ್ಯ ನಾಯಕ ಎಚ್.ಡಿ.…

20 mins ago

ಪೊದೆಗಳ ನಡುವೆ ಮರೆಯಾಗಿರುವ ಚನ್ನಕೇಶವ ದೇವಾಲಯ

ಚಿತ್ರಾ ವೆಂಕಟರಾಜು ಪಿರಿಯಾಪಟ್ಟಣದಲ್ಲಿ ಅಷ್ಟು ಪ್ರಸಿದ್ಧಿ ಪಡೆಯದ ಹೊಯ್ಸಳರ ಕಾಲದ ಚನ್ನಕೇಶವ ದೇವಾಲಯವಿದೆ. ಹೊಯ್ಸಳರ ಶೈಲಿಯ ವಾಸ್ತುಶಿಲ್ಪ ದಲ್ಲಿರುವ ಈ…

27 mins ago

ಮಂಗಳಮುಖಿಯರ ‘ಮನೆ ನ್ಯಾಯ!’

ಅಕ್ಷತಾ ತೃತೀಯ ಲಿಂಗಿಗಳ ಮೇಲೆ ದೌರ್ಜನ್ಯ, ಕಿರುಕುಳ, ಅಪಹರಣ ದಂತಹ ಪ್ರಕರಣಗಳು ದಿನೇದಿನೇ ಕೇಳಿ ಬರುತ್ತಿವೆ. ಪ್ರತೀ ಸಲ ಇಂತಹ…

29 mins ago

ನಳಂದ ಅಕಾಡೆಮಿ

ಗೋವಿಂದರಾಜು ದಲಿತ ವಿದ್ಯಾರ್ಥಿಗಳ ಉನ್ನತ ಓದಿಗೆ ಆಸರೆಯಾಗಿರುವ ಅವ್ವ  ಅದು ಉತ್ತರಪ್ರದೇಶದ ಒಂದು ಇಂಜಿನಿಯರಿಂಗ್ ಕಾಲೇಜ್. ಪದವಿ ಕಲಿತು ಬದುಕನ್ನು…

33 mins ago

ಎರಡೇ ದಿನಕ್ಕೆ 168 ಹೆಕ್ಟೇರ್ ಬಾಳೆ ಬೆಳೆ ನಾಶ

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ಬಿರುಗಾಳಿ ಮಳೆಗೆ ಕಮರಿದ ರೈತರ ಕನಸು ಗುಂಡ್ಲುಪೇಟೆ: ರೈತರು ಒಂದಷ್ಟು ಕನಸು ಕಟ್ಟಿಕೊಂಡು ಬೆಳೆಸಿ ಕಟಾವಿಗೆ…

42 mins ago

ಭಾರೀ ಗಾಳಿ-ಮಳೆಯಿಂದ ಬೆಳೆ, ಮನೆಗಳಿಗೆ ಹಾನಿ

ಮಂಜು ಕೋಟೆ ಕೋಟೆ: ಅಂದಾಜು ೫ ಕೋಟಿ ರೂ. ನಷ್ಟ; ಕಂಗಾಲಾದ ರೈತರು, ಸಾರ್ವಜನಿಕರು ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ…

46 mins ago