ಕಳೆದ ಕೆಲ ದಿನಗಳ ಹಿಂದಷ್ಟೇ ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ನಟಿ ಪಾಯಲ್ ಘೋಷ್ ಇದೀಗ ಕ್ರಿಕೆಟಿಗರ ಬಗ್ಗೆಯೂ ಸಹ ಕಾಮೆಂಟ್ ಮಾಡಿದ್ದಾರೆ. ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಪಾಯಲ್ ಘೋಷ್ ಗೌತಮ್ ಗಂಭೀರ್ ತನ್ನ ಹಿಂದೆ ಬಿದ್ದಿದ್ದರು ಎಂಬುದಾಗಿ ಹೇಳಿಕೊಂಡಿದ್ದಾರೆ.
“ನಾನು 2011ರಿಂದ ಇರ್ಫಾನ್ ಪಠಾಣ್ ಜತೆ ಐದು ವರ್ಷಗಳ ಕಾಲ ಡೇಟ್ ಮಾಡಿದ್ದೆ. ಆ ಸಮಯದಲ್ಲಿ ನನ್ನ ಹಿಂದೆ ಗೌತಮ್ ಗಂಭೀರ್ ಹಾಗೂ ಅಕ್ಷಯ್ ಕುಮಾರ್ ಬಿದ್ದಿದ್ದರು. ಆದರೆ ನಾನು ಇರ್ಫಾನ್ ಪಠಾಣ್ ಅವರನ್ನು ಮಾತ್ರ ಪ್ರೀತಿಸಿದ್ದೆ. ನಾನು ಆತನನ್ನು ಬಿಟ್ಟು ಬೇರೆ ಯಾರನ್ನೂ ಸಹ ಇಷ್ಟಪಡಲಿಲ್ಲ. ನಾನು ಇರ್ಫಾನ್ ಪಠಾಣ್‌ಗೆ ಎಲ್ಲವನ್ನೂ ಹೇಳಿದ್ದೆ. ಗೌತಮ್ ಗಂಭೀರ್ ನನಗೆ ಕೊಟ್ಟಿದ್ದ ಮಿಸ್ ಕಾಲ್‌ಗಳನ್ನೂ ಸಹ ತೋರಿಸಿದ್ದೆ. ಇರ್ಫಾನ್ ಪಠಾಣ್‌ಗೂ ಸಹ ಇದು ಗೊತ್ತಿತ್ತು ಹಾಗೂ ಅವರು ಆಗಾಗ ನನ್ನ ಮೊಬೈಲ್ ಚೆಕ್ ಮಾಡುತ್ತಿದ್ದರು. ಪುಣೆಯಲ್ಲಿ ಒಂದು ದೇಶಿ ಕ್ರಿಕೆಟ್ ಪಂದ್ಯ ನಡೆಯುವಾಗ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಹಾಗೂ ಯೂಸುಫ್ ಪಠಾಣ್ ಎದುರಿಗೆ ಇರ್ಫಾನ್ ಪಠಾಣ್ ಈ ಬಗ್ಗೆ ಮಾತನಾಡಿದ್ದರು. ಅಕ್ಷಯ್ ಕುಮಾರ್ ನನ್ನ ಜತೆ ಯಾವತ್ತೂ ಅನುಚಿತವಾಗಿ ವರ್ತಿಸಿಲ್ಲ, ಅವರು ದೊಡ್ಡ ಸ್ಟಾರ್. ಅವರ ಬಗ್ಗೆ ನನಗೆ ಗೌರವವಿದೆ” ಎಂದು ಪಾಯಲ್ ಘೋಷ್ ಬರೆದುಕೊಂಡಿದ್ದಾರೆ.
ಹೊಸದಿಲ್ಲಿ : ಇಂದಿನಿಂದಲೇ ದೇಶದದ್ಯಾಂತ ಜಾರಿಯಾಗುವಂತೆ ರೈಲು ಪ್ರಯಾಣ ದರ ಏರಿಕೆಯಾಗಿದೆ. ಕಳೆದ ವಾರ ರೈಲ್ವೆ ಇಲಾಖೆ ಪ್ರಯಾಣ ದರವನ್ನು…
ಚಿತ್ರದುರ್ಗಾ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಹೊತ್ತಿ ಉರಿದ…
ಮೈಸೂರು : ಮೈಸೂರು ಅರಮನೆ ಮುಂಭಾಗದಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು…
ಮೈಸೂರು : ಮೈಸೂರಿನ ಅರಮನೆ ಬಳಿ ಹಿಲೀಯಂ ಗ್ಯಾಸ್ ಸಿಲಿಂಡರ್ ಸ್ಪೋಟ ದುರಂತ ಪ್ರಕರಣ ಸಂಬಂಧ ಶುಕ್ರವಾರ ಜಿಲ್ಲಾ ಉಸ್ತುವಾರಿ…
ಮೈಸೂರು : ದೇಶ-ವಿದೇಶದ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳವಾದ ಅರಮನೆಯ ಜಯಮಾರ್ತಾಂಡ ಬಳಿ ಸಂಭವಿಸಿದ ಹೀಲಿಯಂ…
ಓದುಗರ ಪತ್ರ: ಜಾತಿ ಅಳಿಯಲಿ ಜೀವ ಉಳಿಯಲಿ ಈ ಅಮಾನವೀಯ ಕ್ರೂರ ಕೃತ್ಯಕ್ಕೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುತ್ತಿದೆ…