ಪಲ್ಲೆಕೆಲೆ : ಭಾರತ ಹಾಗೂ ಪಾಕಿಸ್ತಾನ ನಡುವಿನ ಏಶ್ಯಕಪ್ ನ ಪಂದ್ಯವು ಮಳೆಗಾಹುತಿಯಾದ ಕಾರಣ ಫಲಿತಾಂಶ ದಾಖಲಾಗಲಿಲ್ಲ, ಎರಡು ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿವೆ.
ಶನಿವಾರ ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರೀ ಮಳೆ ಸುರಿಯುತ್ತಿದ್ದಾಗ ಭಾರತ ಹಾಗೂ ಪಾಕಿಸ್ತಾನಿ ಆಟಗಾರರು ಪರಸ್ಪರ ಸೌಹಾರ್ದಯುತ ಮಾತುಕತೆಯಲ್ಲಿ ತೊಡಗಿರುವುದು ಕಂಡುಬಂತು. ವಿವಿಧ ತಂಡಗಳ ಆಟಗಾರರ ನಡುವೆ ಸ್ನೇಹ ಸಹಜವಾಗಿದ್ದರೂ, ಕ್ರಿಕೆಟ್ ಪಂದ್ಯಗಳ ಸಮಯದಲ್ಲಿ ಆಟಗಾರರ ನಡುವೆ ಅಂತಹ ಸೌಹಾರ್ದತೆಯನ್ನು ಪ್ರದರ್ಶಿಸುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಿಡ್-ಗೇಮ್ ಶೋನಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾಟ್ ನಲ್ಲಿ ಮಾತನಾಡಿದ ಗಂಭೀರ್, ಭಾರತ ಕ್ರಿಕೆಟ್ ತಂಡವು 140 ಕೋಟಿ ಜನರನ್ನು ಪ್ರತಿನಿಧಿಸುತ್ತಿದೆ ಹಾಗೂ ಕ್ರೀಡಾಂಗಣದೊಳಗೆ ಸ್ನೇಹವನ್ನು ಪ್ರದರ್ಶಿಸಬಾರದು. ಅಂತಹ ಸ್ನೇಹ ಯಾವಾಗಲೂ ಮೈದಾನದಿಂದ ಹೊರಗೆ ಉಳಿಯಬೇಕು ಎಂದರು.
“ನೀವು ನಿಮ್ಮ ರಾಷ್ಟ್ರೀಯ ತಂಡಕ್ಕಾಗಿ ಮೈದಾನದಲ್ಲಿ ಆಡುವಾಗ, ನೀವು ಬೌಂಡರಿ ಗೆರೆಯ ಹೊರಗೆ ನಿಮ್ಮ ಸ್ನೇಹವನ್ನು ಬಿಡಬೇಕು. ಆಟ ಅತ್ಯಂತ ಮುಖ್ಯ. ದೋಸ್ತಿ ಮೈದಾನದಿಂದ ಹೊರಗಿರಬೇಕು.. ಎರಡೂ ತಂಡಗಳ ಆಟಗಾರರ ಕಣ್ಣಿನಲ್ಲಿ ಆಕ್ರಮಣಶೀಲತೆ ಇರಬೇಕು. ಆ ಆರು ಅಥವಾ ಏಳು ಗಂಟೆಗಳ ಕ್ರಿಕೆಟ್ ನ ನಂತರ ನಿಮಗೆ ಬೇಕಾದಷ್ಟು ಸ್ನೇಹಪರರಾಗಿರಿ. ಆ ಸಮಯ ಬಹಳ ಮುಖ್ಯ, ಏಕೆಂದರೆ ನೀವು ನಿಮ್ಮನ್ನು ಪ್ರತಿನಿಧಿಸುತ್ತಿಲ್ಲ, ನೀವು ಒಂದು ಶತಕೋಟಿಗೂ ಹೆಚ್ಚು ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದೀರಿ” ಎಂದು ಗಂಭೀರ್ ಹೇಳಿದರು.
ಈ ದಿನಗಳಲ್ಲಿ ಪ್ರತಿಸ್ಪರ್ಧಿ ತಂಡಗಳ ಆಟಗಾರರು ಪಂದ್ಯದ ಸಮಯದಲ್ಲಿ ಪರಸ್ಪರ ಬೆನ್ನು ತಟ್ಟುವುದನ್ನು ಹಾಗೂ ಹಸ್ತಲಾಘವ ಮಾಡಿಕೊಳ್ಳುವುದನ್ನು ನೀವು ನೋಡುತ್ತೀರಿ. ಕೆಲವು ವರ್ಷಗಳ ಹಿಂದೆ ನೀವು ಅದನ್ನು ಎಂದಿಗೂ ನೋಡಲು ಸಾಧ್ಯವಿರಲಿಲ್ಲ’’ ಎಂದು ಗಂಭೀರ್ ಹೇಳಿದರು.
ಕ್ರಿಕೆಟಿಗ ಹಾಗೂ ರಾಜಕಾರಣಿಯಾಗಿರುವ ಗಂಭೀರ್, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಅವರೊಂದಿಗಿನ ತನ್ನ ಸ್ನೇಹವನ್ನು ಉಲ್ಲೇಖಿಸಿದ್ದಾರೆ.
“ನಾವು ತುಂಬಾ ಒಳ್ಳೆಯ ಸ್ನೇಹಿತರು. ವಾಸ್ತವವಾಗಿ, ನಾನು ಅವರಿಗೆ ಬ್ಯಾಟ್ ನೀಡಿದ್ದೇನೆ ಮತ್ತು ಅವರು ನನಗೆ ಬ್ಯಾಟ್ ಕೊಟ್ಟಿದ್ದಾರೆ. ಕಮ್ರಾನ್ ನನಗೆ ನೀಡಿದ ಬ್ಯಾಟ್ ನೊಂದಿಗೆ ನಾನು ಇಡೀ ಸೀಸನ್ ಅನ್ನು ಆಡಿದ್ದೇನೆ. ನಾವು ಇತ್ತೀಚೆಗೆ ಒಂದು ಗಂಟೆ ಮಾತನಾಡಿದ್ದೇವೆ” ಎಂದು ಗಂಭೀರ್ ಹೇಳಿದರು.
ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್…
ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…
ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ನೀಡಿ…
ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…
ಬೆಳಗಾವಿ: ಎಂಎಲ್‌ಸಿ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪೊಲೀಸರ ವಿರುದ್ಧ ಫೇಕ್ ಎನ್‌ಕೌಂಟರ್ ಹೇಳಿಕೆ…