ಕ್ರೀಡೆ

ಭಾರತೀಯ ವನಿತೆಯರಿಗೆ ಆಸೀಸ್‌ ವಿರುದ್ಧ ಚೊಚ್ಚಲ ಗೆಲುವು

ಮುಂಬೈ: ಆಸೀಸ್‌ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾರತ ವನಿತೆಯರ ತಂಡ ೮ ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಬ್ಯಾಟಿಂಗ್‌ ಮತು ಬೌಲಿಂಗ್‌ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ ಟೀಂ ಇಂಡಿಯಾ ತಂಡ ತನ್ನ ತವರು ನೆಲದಲ್ಲಿ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಗಿದ್ದಾರೆ.

ಶನಿವಾರದ ಅಂತಿಮ ದಿನದಾಟಕ್ಕೆ ಆಸೀಸ್‌ ೫ ವಿಕೆಟ್‌ ಕಳೆದುಕೊಂಡು ೨೩೩ ರನ್‌ ಕಲೆಹಾಕಿ ೪೭ರನ್‌ ಮುನ್ನಡೆಯೊಂದಿಗೆ ಇಂದು (ಭಾನುವಾರ) ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡ ಕೇವಲ ೨೮ ರನ್‌ ಗಳಿಸಿ ಉಳಿದ ೫ ವಿಕೆಟ್‌ಗಳನ್ನು ಕಳೆದುಕೊಂಡು ಭಾರತಕ್ಕೆ ೭೫ ರನ್‌ಗಳ ಗುರಿ ನೀಡಿತು.

ಅಂತಿಮ ದಿನದಾಟದಲ್ಲಿ ಆಕ್ರಮಣಕಾರಿ ದಾಳಿ ಮಾಡಿದ ಭಾರತ ತಂಡದ ಸ್ಪನ್ನರ್ಸ್‌ಗಳಾದ ಸ್ನೇಹಾ ರಾಣಾ, ರಾಜೇಶ್ವರಿ ಗಾಯಕ್ವಾಡ್‌, ದೀಪ್ತಿ ಶರ್ಮಾ ಆಸೀಸ್‌ ಪಡೆಯನ್ನು ಧೂಳಿಪಟ ಮಾಡಿದರು.

ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡ ಕೇವಲ ೨ ವಿಕೆಟ್‌ ಕಳೆದುಕೊಂಡು ಐತಿಹಾಸಿಕ ಗೆಲುವು ದಾಖಲಿಸಿತು. ಸ್ಮೃತಿ ಮಂದಾನ ೩೮*, ಜೆಮಿಯಾ ರಾಡ್ರಿಗಸ್‌ ೧೨ ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ವರೆಗೆ ೪೦ ಟೆಸ್ಟ್‌ ಪಂದ್ಯಗಳನ್ನಾಡಿರುವ ಭಾರತ ತಂಡ ೭ ರಲ್ಲಿ ಗೆಲುವು ಕಂಡರೆ ೬ ಪಂದ್ಯಗಳನ್ನು ಸೋತಿದೆ. ಇನ್ನುಳಿದ ೨೭ ಪಂದ್ಯಗಳು ಡ್ರಾ ಆಗಿದೆ.

ಭಾರತ ತಂಡದ ವಿರುದ್ಧ ಮೊದಲ ಟೆಸ್ಟ್‌ ಸೋತ ಆಸೀಸ್‌ ತಂಡ ತನ್ನ ಕಳೆದ 10 ವರ್ಷಗಳಲ್ಲಿ ಮೊದಲ ಸೋಲು ಕಂಡಿದೆ. ಭಾರತ ತಂಡ ಆಸೀಸ್‌ ವಿರುದ್ಧ ಮೊದಲ ಗೆಲುವು ದಾಖಲಿಸಿದೆ.

ಪಂದ್ಯ ಶ್ರೇಷ್ಠ: ಸ್ನೇಹ್‌ ರಾಣಾ

ಸಂಕ್ಷಿಪ್ತ ಸ್ಕೋರ್‌:

ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ: 77.4 ಓವರ್‌ಗಳಲ್ಲಿ 219, ಭಾರತ: 126.3 ಓವರ್‌ಗಳಲ್ಲಿ 406.

ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 105.4 ಓವರ್‌ಗಳಲ್ಲಿ 261, ಭಾರತ 18.4 ಓವರ್‌ಗಳಲ್ಲಿ 75/3(ಸ್ಮೃತಿ ಮಂದಾನ 38*, ರಿಚಾ ಘೋಷ್ ಘೋಷ್ 13, ಜೆಮಿಮಾ ರಾಡ್ರಿಗಸ್ 12*)

andolanait

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

3 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

3 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

5 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

7 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

7 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

8 hours ago