ದೋಹಾ: ಫಿಫಾ ವಿಶ್ವಕಪ್ ಟೂರ್ನಿ ಕೊನೆಯ ಹಂತ ತಲುಪಿದೆ. ಬುಧವಾರ ತಡರಾತ್ರಿ ನಡೆದ 2ನೇ ಸೆಮಿ ಫೈನಲ್ ನಲ್ಲಿ ಮೊರಾಕೊ ತಂಡವನ್ನು ಬಲಿಷ್ಠ ಫ್ರಾನ್ಸ್ ತಂಡ 2-0 ಅಂತರದ ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ.
ಕತಾರ್‌ನ ಅಲ್ ಬಯಾತ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಫ್ರಾನ್ಸ್‌ನ ಥಿಯೊ ಹರ್ನಾಂಡಿಸ್ 5ನೇ ನಿಮಿಷದಲ್ಲಿ ಮೊದಲ ಗೋಲು ಹೊಡೆದರು. ನಂತರ 79ನೇ ನಿಮಿಷದಲ್ಲಿ ರಾಂಡಲ್ ಕೊಲೊ ಮುವಾನಿ ಎರಡನೇ ಗೋಲು ಹೊಡೆಯುವ ಮೂಲಕ ಫ್ರಾನ್ಸ್ ಗೆಲುವನ್ನು ಸ್ಪಷ್ಟಗೊಳಿಸಿದರು. ಪಂದ್ಯದ ಆರಂಭದಿಂದಲೂ ಫ್ರಾನ್ಸ್ ಆಕ್ರಮಣಕಾರಿ ಆಟವಾಡಿತು.
ಪಂದ್ಯ ಆರಂಭವಾದ 5ನೇ ನಿಮಿಷದಲ್ಲೇ ಫ್ರಾನ್ಸ್ ಪರ ಥಿಯೋ ಹೆರ್ನಾಂಡೆಜ್ ಮೊದಲ ಗೋಲು ಹೊಡೆದರು. ಇದು ಮೊರಾಕ್ಕೊ ತಂಡವು ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬಿಟ್ಟುಕೊಟ್ಟ ಮೊದಲ ಗೋಲು ಎನಿಸಿಕೊಂಡಿತು.
ತದನಂತರ ಮೊರಾಕ್ಕೊ ಗೋಲು ಗಳಿಸಲು ನಿರಂತರ ಪ್ರಯತ್ನಿಸಿದರೂ ಫ್ರಾನ್ಸ್ ರಕ್ಷಣಗಾರರ ಗೋಡೆ ಭೇದಿಸಲು ಮೊರಾಕೊ ತಂಡಕ್ಕೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. 1-0 ಅಂತರದಲ್ಲೇ ಪಂದ್ಯವನ್ನು ಫ್ರಾನ್ಸ್ ಕೊನೆಯ ಹಂತಕ್ಕೆ ಸಾಗಿಸಿತು. ಈ ವೇಳೆ ಫ್ರಾನ್ಸ್ ಪರ ಬದಲಿ ಆಟಗಾರನಾಗಿ ಕಣಕ್ಕಿಳಿದ ರಾಂಡಲ್ ಕೊಲೊ ಮುವಾನಿ 79ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡದ ಗೆಲುವನ್ನು ಸ್ಪಷ್ಟಪಡಿಸಿದರು. ಉಸ್ಮಾನ್ ಡೆಂಬೆಲೆಗೆ ಬದಲಾಗಿ ಕಣಕ್ಕಿಳಿದ ರಾಂಡಲ್ ಕೊಲೊ ಮುವಾನಿ ಎಂಬಪ್ಪೆ ನೀಡಿದ ರೀಬೌಂಡ್ ಪಾಸ್ ಸ್ವೀಕರಿಸಿ ತಡ ಮಾಡದೇ ಮೊರಾಕ್ಕೋ ಗೋಲ್ ಕೀಪರ್ ರನ್ನು ವಂಚಿಸಿ ಗೋಲು ಗಳಿಸಿದರು.
ಪಂದ್ಯದ ನಿಗದಿತ ಅವಧಿಯಲ್ಲಿ ಫ್ರಾನ್ಸ್ ಮುನ್ನಡೆ ಸಾಧಿಸಿತು.
ಇದೇ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಲಿಯೋನಲ್ ಮೆಸ್ಸಿ ನೇತೃತ್ವದ ಬಲಿಷ್ಟ ತಂಡ ಅರ್ಜೆಂಟಿನಾ ತಂಡವನ್ನು ಎದುರಿಸಲಿದೆ.ಫ್ರಾನ್ಸ್ ತಂಡವು ನಾಲ್ಕನೇ ಬಾರಿಗೆ ಫಿಫಾ ವಿಶ್ವಕಪ್ ಫೈನಲ್‌ಗೇರಿದಂತಾಗಿದೆ. ಫೈನಲ್‌ನಲ್ಲಿ ಫ್ರಾನ್ಸ್ ತಂಡವು ಅರ್ಜೆಂಟೀನಾ ಎದುರು ಜಯ ಗಳಿಸಿದರೆ, 60 ವರ್ಷಗಳ ನಂತರ ಸತತ ಎರಡು ಫಿಫಾ ವಿಶ್ವಕಪ್ ಜಯಿಸಿದ ಎರಡನೇ ತಂಡ ಎನ್ನುವ ಹಿರಿಮೆಗೆ ಪಾತ್ರವಾಗಲಿದೆ. ಈ ಮೊದಲು ಬ್ರೆಜಿಲ್ ತಂಡವು 1958 ಹಾಗೂ 1962ರಲ್ಲಿ ಸತತ ಎರಡು ಬಾರಿಗೆ ಫಿಫಾ ವಿಶ್ವಕಪ್ ಜಯಿಸಿ ದಾಖಲೆ ನಿರ್ಮಿಸಿತ್ತು.
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…