ದೋಹಾ: ಫಿಫಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ
ಹಾಲಿ ಚಾಂಪಿಯನ್ ಫ್ರಾನ್ಸ್ ತಂಡ ಪ್ರಬಲ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಸೆಮಿಪೈನಲ್ ಪ್ರವೇಶವನ್ನು ಪಡೆದುಕೊಂಡಿದೆ.
ಅಲ್ ಖೊರ್‌ನ ಅಲ್ ಬೈತ್ ಕ್ರೀಡಾಂಗಣದಲ್ಲಿ ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಫ್ರಾನ್ಸ್ 2–1 ಗೋಲುಗಳ ಅಂತರದಲ್ಲಿ ಪ್ರಬಲ ಇಂಗ್ಲೆಂಡ್ ತಂಡವನ್ನು ಮಣಿಸಿತು. ಪಂದ್ಯ ಆರಂಭದಿಂದಲೂ ಸಮಬಲದ ಪೈಪೋಟಿಯನ್ನು ಎರಡು ತಂಡಗಳು ನೀಡಿದವು. ಆದರೆ ಫ್ರಾನ್ಸ್ ತಂಡದ ಸ್ಟ್ರೈಕರ್‌ಗಳು ಇಂಗ್ಲೆಂಡ್‌ನ ಡಿಫೆಂಡರ್‌ಗಳ ರಕ್ಷಣಾ ಕೋಟೆ ಭೇದಿಸಿ ಎರಡು ಗೋಲು ಹೊಡೆದರು. ಆದರೆ ಇಂಗ್ಲೆಂಡ್ ತಂಡ ಒಂದು ಗೋಲು ಗಳಿಸುವಲ್ಲಿ ಮಾತ್ರ ಯಶಸ್ವಿಯಾಯಿತು. ಆಟ ಮುಗಿಯಲು ಕೇವಲ 12 ನಿಮಿಷಗಳಿದ್ದಾಗ ಫ್ರಾನ್ಸ್‌ನ ಅತ್ಯಧಿಕ ಗೋಲುಗಳ ಸರದಾರ ಗಿರಾಡ್ ಗೋಲು ಗಳಿಸಿ ತಂಡವನ್ನು 2-1 ಅಂತರಕ್ಕೇರಿಸಿ ವಿಜಯ ಸಾರಿದರು.
ಇದಕ್ಕೂ ಮುನ್ನ ಇಂಗ್ಲೆಂಡಿನ ಹ್ಯಾರಿ ಕೇನ್ 54ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್ ಮೂಲಕ ಗೋಲು ಗಳಿಸಿದ್ದರು.
ಈ ಮೂಲಕ 1- 1 ಸಮಬಲ ಸಾಧಿಸಿದರು. 17ನೇ ನಿಮಿಷದಲ್ಲೇ ಅರುಲಿನ್ ಚೊಮೇನಿಯ ಬಾರಿಸಿದ ಗೋಲಿನ ಮೂಲಕ ಫ್ರಾನ್ಸ್ 1-0 ಗೋಲಿನ ಖಾತೆ ತೆರೆಯಿತು. ಕೇನ್ ಅವರು ಈ ಪಂದ್ಯದಲ್ಲಿ ಗೋಲು ಬಾರಿಸಿಸುವ ಮೂಲಕ ತಮ್ಮ 53ನೇ ಅಂತಾರಾಷ್ಟ್ರೀಯ ಗೋಲು ದಾಖಲಿಸಿದ ಸಾಧನೆ ಮಾಡಿದರು. ಈ ಮೂಲಕ ಇಂಗ್ಲೆಂಡ್ ಪರ ಅತ್ಯಧಿಕ ಗೋಲು ಗಳಿಸಿದ ವೇನ್ ರೂನಿ ಅವರ ದಾಖಲೆಯನ್ನು ಸರಿಗಟ್ಟಿದರು. ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್ ಅದ್ಭುತ ಪ್ರದರ್ಶನ ತೋರಿದರೂ ಪಂದ್ಯದಲ್ಲಿ ಮೇಲುಗೈ ಸಾಧಿಸುವಲ್ಲಿ ವಿಫಲವಾಯಿತು. ಅನುಭವಿ ಮತ್ತು ಯುವ ಆಟಗಾರರನ್ನು ಒಳಗೊಂಡಿದ್ದರೂ ಇಂಗ್ಲೆಂಡ್ ತಂಡದ ಆಟ ಫ್ರಾನ್ಸ್ ಎದುರು ನಡೆಯಲಿಲ್ಲ. ಅಂತಿಮವಾಗಿ ಹಾಲಿ ಚಾಂಪಿಯನ್ ಎದುರು ಇಂಗ್ಲೆಂಡ್ ಕನಸು ಭಗ್ನಗೊಂಡಿತು.
ಫ್ರಾನ್ಸ್ ತಂಡ ಸೆಮಿಫೈನಲ್‌ನಲ್ಲಿ ಮೊರಕ್ಕೊ ತಂಡವನ್ನು ಎದುರಿಸಲಿದೆ.
ಇಂಗ್ಲೆಂಡ್ ಮತ್ತು ಫ್ರಾನ್ಸ್ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಈ ಹಿಂದೆ ಎರಡು ಸಲ ಎದುರಾಗಿದ್ದು, ಎರಡೂ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಜಯಿಸಿತ್ತು. 1966ರ ಟೂರ್ನಿಯ ಗುಂಪು ಹಂತದ ಪಂದ್ಯವನ್ನು 2–0 ಗೋಲುಗಳಿಂದ ಹಾಗೂ 1982ರ ಟೂರ್ನಿಯ ಪಂದ್ಯವನ್ನು 3–1 ಗೋಲುಗಳಿಂದ ಜಯಿಸಿತ್ತು.
ಸುಂಟಿಕೊಪ್ಪದಲ್ಲಿ ೧೮ ಲಕ್ಷ ರೂ. ವೆಚ್ಚದ ಮಂಟಪ ನಿರ್ಮಾಣ ೩ ದಿನಗಳ ಧಾರ್ಮಿಕ ಕಾರ್ಯಕ್ರಮ ಸುಂಟಿಕೊಪ್ಪ: ಇಲ್ಲಿನ ಶ್ರೀ ಪುರಂ…
ಪಿರಿಯಾಪಟ್ಟಣ: ದೇಸಿ ಬೀಜಗಳನ್ನು ಉಳಿಸಿದರೆ ಮಾತ್ರ ಮುಂದಿನ ಯುವ ಜನಾಂಗಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂದು ಸಾವಯವ ರೈತ…
ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್‌ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ…
ಕೆ.ಬಿ.ರಮೇಶನಾಯಕ ಟಿಎಚ್‌ಒ ಹುದ್ದೆಗೆ ಡಿಎಚ್‌ಒ ವರ್ಗಾವಣೆ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ…
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…