ದೋಹಾ (ಕತಾರ್): ಭಾನುವಾರ ಕತಾರ್‌ನ ಲುಸೇಲ್ ಸ್ಟೇಡಿಯಂ ರಣರೋಚಕ ಫುಟ್ಬಾಲ್ ಪಂದ್ಯಕ್ಕೆ ಸಾಕ್ಷಿಯಾಯಿತು. ವಿಶ್ವಕಪ್ ಫೈನಲ್ ಹಣಾಹಣಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಅರ್ಜೆಂಟೀನಾ 36 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಮತ್ತು ಫ್ರಾನ್ಸ್‌ನ ಯುವ ತಾರೆ ಕೈಲಿಯನ್ ಎಂಬಪ್ಪೆ ಅದ್ಭುತ ಆಟ ಪ್ರದರ್ಶಿಸಿದರು. ಮೆಸ್ಸಿ ಎರಡು ಮತ್ತು ಎಂಬಪ್ಪೆ ಮೂರು ಗೋಲು ಗಳಿಸಿ ಅಭಿಮಾನಿಗಳ ಹೃದಯ ಗೆದ್ದರು.
ಲಿಯೋನೆಲ್ ಮೆಸ್ಸಿ 23ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯಲ್ಲಿ ಮೊದಲ ಗೋಲು ಗಳಿಸಿದರು. ಈ ಮೂಲಕ ವಿಶ್ವಕಪ್‌ನ ಎಲ್ಲಾ ನಾಕೌಟ್ ಪಂದ್ಯಗಳಲ್ಲಿ ಸ್ಕೋರ್ ಮಾಡಿದ ವಿಶ್ವದ ಮೊದಲ ಫುಟ್‌ಬಾಲ್ ಆಟಗಾರರೆನಿಸಿದರು. ಅದರ ನಂತರ, ಏಂಜೆಲ್ ಡಿ ಮಾರಿಯಾ 36ನೇ ನಿಮಿಷದಲ್ಲಿ ಗೋಲು ಗಳಿಸಿ ಅರ್ಜೆಂಟೀನಾವನ್ನು 2-0 ಮುನ್ನಡೆಗೆ ತಂದರು. ವಿರಾಮದ ವೇಳೆಗೆ ಅರ್ಜೆಂಟೀನಾ 2-0 ಮುನ್ನಡೆಯಲ್ಲಿತ್ತು. ವಿರಾಮದ ಬಳಿಕ ಉಭಯ ತಂಡಗಳು ಪೈಪೋಟಿ ಮುಂದುವರೆಸಿದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಪಂದ್ಯದ 80ನೇ ನಿಮಿಷದವರೆಗೂ ಪಂದ್ಯವನ್ನು ಅರ್ಜೆಂಟೀನಾ ಸುಲಭವಾಗಿ ಗೆಲ್ಲುತ್ತದೆ ಎಂದೆನಿಸಿತ್ತು. ಆದರೆ ಕೈಲಿಯನ್ ಎಂಬಪ್ಪೆ 80 ಮತ್ತು 81ನೇ ನಿಮಿಷದಲ್ಲಿ ಎರಡು ಗೋಲು ಬಾರಿ ಪಂದ್ಯಕ್ಕೆ ಪಂದ್ಯಕ್ಕೆ ತಿರುವು ನೀಡಿದರು.
ನಿಗದಿತ 90 ನಿಮಿಷಗಳ ನಂತರ ಸ್ಕೋರ್ 2-2ರಲ್ಲಿ ಸಮನಾದ ನಂತರ ಪಂದ್ಯ ಹೆಚ್ಚುವರಿ ಸಮಯದ ಮೊರೆ ಹೋಗಲಾಯಿತು.
108ನೇ ನಿಮಿಷದಲ್ಲಿ ಲಿಯೋನೆಲ್ ಮೆಸ್ಸಿ ಗೋಲು ಬಾರಿಸಿ ಅರ್ಜೆಂಟೀನಾವನ್ನು 3-2 ಗೋಲುಗಳಿಂದ ಮುನ್ನಡೆಸಿದರು. ಮತ್ತೊಮ್ಮೆ ಅರ್ಜೆಂಟೀನಾ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿತು. ಆದರೆ, 117ನೇ ನಿಮಿಷದಲ್ಲಿ ಫ್ರಾನ್ಸ್ ತಂಡ ಗೋಲು ಬಾರಿಸುವ ಮೂಲಕ ಪಂದ್ಯವನ್ನು 3-3ರಲ್ಲಿ ಸಮಬಲಗೊಳಿಸಿದರು. ಇದಾದ ಬಳಿಕ ಪಂದ್ಯ ಪೆನಾಲ್ಟಿ ಶೂಟೌಟ್ ನಡೆಯಿತು.
ಶೂಟೌಟ್‌ನಲ್ಲಿ ಗೆದ್ದ ಅರ್ಜೆಂಟೀನಾ: ಅರ್ಜೆಂಟೀನಾದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಶೂಟೌಟ್‌ನ ಹೀರೋ ಆಗಿ ಹೊರಹೊಮ್ಮಿದರು. ಎಂಬಪ್ಪೆ ಫ್ರಾನ್ಸ್‌ಗೆ ಮೊದಲ ಪೆನಾಲ್ಟಿಯ ಲಾಭ ಪಡೆದರು. ನಂತರ ಮೆಸ್ಸಿ ಅರ್ಜೆಂಟೀನಾ ಪರ ಗೋಲು ಗಳಿಸಿದರು. ಆ ಬಳಿಕ ಕೋಮನ್ (ಎರಡನೇ ಪೆನಾಲ್ಟಿ) ಮತ್ತು ಚೌಮಾನಿ (ಮೂರನೇ ಪೆನಾಲ್ಟಿ) ಸತತ ವಿಫಲವಾದಾಗ ಅರ್ಜೆಂಟೀನಾ ಅಭಿಮಾನಿಗಳು ಸಂಭ್ರಮಿಸಿದರು. ಅರ್ಜೆಂಟೀನಾ ಪರ ಎರಡು ಮತ್ತು ಮೂರನೇ ಪ್ರಯತ್ನಗಳಲ್ಲಿ ಡೈಬಾಲಾ ಮತ್ತು ಪರೆಡೆಸ್ ಯಶಸ್ವಿಯಾಗಿದ್ದರಿಂದ ತಂಡವು 3-1ರ ಮುನ್ನಡೆ ಸಾಧಿಸಿತು. ಕೊಲೊ ಮೌನಿ ನಾಲ್ಕನೇ ಪೆನಾಲ್ಟಿಯ ಲಾಭ (2-3) ಪಡೆಯುವ ಮೂಲಕ ಫ್ರಾನ್ಸ್‌ನ ಭರವಸೆಯನ್ನು ಜೀವಂತವಾಗಿಟ್ಟರು. ಆದರೆ ನಂತರ ಮೊಂಟಿಯೆಲ್ ಒದ್ದ ಚೆಂಡನ್ನು ಫ್ರಾನ್ಸ್‌ನ ಗೋಲ್ ಕೀಪರ್ ತಡೆಯುವಲ್ಲಿ ವಿಫಲರಾದರು. ಹೀಗಾಗಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ 4-2ರಿಂದ ಪಂದ್ಯ ಗೆದ್ದು ವಿಶ್ವಕಪ್ಗೆ ಮುತ್ತಿಕ್ಕಿದೆ
ಬೆಂಗಳೂರು: ಮೈಸೂರು ಸಮಗ್ರ ಅಭಿವೃದ್ಧಿಯ ಮುನ್ನೋಟ ಕಾರ್ಯಕ್ರಮದಲ್ಲಿ ಮುಡಾದ ಬಡಾವಣೆಗಳ ಬಗೆಗಿನ ಅವ್ಯವಸ್ಥೆಯ ಕುರಿತು ಎಲ್ಲಾ ಪಕ್ಷದ ಶಾಸಕರನ್ನು ಪ್ರಶ್ನಿಸಿ…
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಅಂತಿಮ…
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿರುವ ನಟ ದರ್ಶನ್ ಮೈಸೂರಿಗೆ ಹಾಗೂ ಪವಿತ್ರಾ ಗೌಡ ಅವರು ದೆಹಲಿಗೆ ತೆರಳಲು…
ನವದೆಹಲಿ: ಇಲ್ಲಿನ 23 ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಯನ್ನು ಬಂಧಿಸಿ ಪೊಲೀಸರು ಬಂಧಿಸಿ ವಿಚಾರಣೆಗೆ…
ಬೆಂಗಳೂರು: ಬೆಂಬಲ ಬೆಲೆ ಶೇಂಗಾ ಖರೀದಿಯ ನೋಂದಣಿ ಹಾಗೂ ಖರೀದಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.…
ಬೆಂಗಳೂರು: ನನಗೆ ಧರ್ಮ ಹಾಗೂ ದೇವರ ಮೇಲೆ ನಂಬಿಕೆಯಿದ್ದು, ನಾನು ಮನಸ್ಸಿನ ನೆಮ್ಮದಿ, ರಕ್ಷಣೆ ಮತ್ತು ಸಮಾಧಾನಕ್ಕಾಗಿ ಹೋಮ ಮಾಡಿಸಿದ್ದೇನೆ.…