ಕ್ರೀಡೆ

ಕ್ರಿಶ್ಚಿಯಾನೊ ರೊನಾಲ್ಡೊಗೆ ಫಿಫಾ ವಿಶೇಷ ಗೌರವ

ದೋಹಾ(ಕತಾರ್​): ಕ್ರಿಶ್ಚಿಯಾನೊ ರೊನಾಲ್ಡೊ ಈ ಪೀಳಿಗೆಯ ವಿಶ್ವಶ್ರೇಷ್ಠ ಫುಟ್ಬಾಲಿಗ. ಚಿರತೆ ವೇಗವೇ ಆತನ ಬಲ. ಮೈದಾನದಲ್ಲಿ ಪಾದರಸದಂತೆ ಓಡಾಡಿ ಅಸಾಧ್ಯವೆಂಬ ಗೋಲುಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದ ಆಟಗಾರನಿಗೆ ಫಿಫಾ ವಿಶೇಷ ರೀತಿಯಲ್ಲಿ ಧನ್ಯವಾದ ಹೇಳಿದೆ.

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರೊನಾಲ್ಡೊ, ತಾವಾಡಿದ 5 ವಿಶ್ವಕಪ್​ಗಳಲ್ಲಿ ಗಳಿಸಿದ 8 ಗೋಲುಗಳ ವಿಡಿಯೋವನ್ನು ಫಿಫಾ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು ಒಬ್ರಿಗಾಡ್​(ಧನ್ಯವಾದ) ಅರ್ಪಿಸಿತು. ರೊನಾಲ್ಡೊ 2006 ರಲ್ಲಿ ತಾವಾಡಿದ ಮೊದಲ ವಿಶ್ವಕಪ್​ನಲ್ಲಿ ಇರಾನ್​ ವಿರುದ್ಧ ಪ್ರಥಮ ಗೋಲು ಗಳಿಸಿದ್ದರು.

2014 ರಲ್ಲಿ ಘಾನಾ ವಿರುದ್ಧ ಒಂದು ಗೋಲು ಬಾರಿಸಿದ್ದರು. ಇದಾದ ಬಳಿಕ 2018 ರಲ್ಲಿ ನಡೆದ ವಿಶ್ವಕಪ್​ ರೊನಾಲ್ಡೊರ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಸ್ಪೇನ್​ ವಿರುದ್ಧ ಹ್ಯಾಟ್ರಿಕ್​​ ಗೋಲು ಮತ್ತು ಮೊರಾಕ್ಕೊ ವಿರುದ್ಧ ಹೆಡ್ಡರ್​ ಮೂಲಕ ದಾಖಲಾದ ವಿಶ್ವದಾಖಲೆಯ ಗೋಲೂ ಒಂದಾಗಿದೆ. 2022 ರ ಈ ಸಲದ ವಿಶ್ವಕಪ್​ನಲ್ಲಿ ರೊನಾಲ್ಡೊ ಘಾನಾ ವಿರುದ್ಧ ಒಂದು ಗೋಲು ಮಾತ್ರ ಗಳಿಸಿದ್ದಾರೆ.

ಬಹುತೇಕ ಕೊನೆಯ ವಿಶ್ವಕಪ್​ ಆಡುತ್ತಿರುವ ರೊನಾಲ್ಡೊ ವೃತ್ತಿಜೀವನದಲ್ಲಿ ಅತಿಹೆಚ್ಚು ಸವಾಲನ್ನು ಎದುರಿಸುತ್ತಿದ್ದಾರೆ. ಮ್ಯಾಂಚೆಸ್ಟರ್​ ಫುಟ್ಬಾಲ್​ ಸಂಸ್ಥೆಯಿಂದ ಹೊರಕ್ಕೆ, ಪೋರ್ಚುಗಲ್​ ತಂಡದ ಕೋಚ್​ ಫೆರ್ನಾಂಡೋ ಸ್ಯಾಂಟೋಸ್​ರ ಅವಕೃಪೆಗೆ ಒಳಗಾಗಿ ವಿಶ್ವಕಪ್​ನ ಪಂದ್ಯಗಳಿಂದ ಹೊರಗುಳಿದಿರುವುದು ರೊನಾಲ್ಡೊರನ್ನು ಕುಗ್ಗಿಸಿದೆ.

ನಿವೃತ್ತಿಯ ಅಂಚಿನಲ್ಲಿರುವ ರೊನಾಲ್ಡೊಗೆ ಗಾಯದ ಮೇಲೆ ಬರೆ ಎಳೆದಂತೆ ಶನಿವಾರ ರಾತ್ರಿ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ ಪೋರ್ಚುಗಲ್​ 1-0 ಗೋಲಿನಿಂದ ಸೋತು ವಿಶ್ವಕಪ್​ನಿಂದ ಹೊರಬಿತ್ತು. ಹೀಗಾಗಿ ವಿಶ್ವಕಪ್​ ಗೆಲ್ಲದೇ ರೊನಾಲ್ಡೊ ವೃತ್ತಿಜೀವನ ಮುಗಿಸುವ ಸಾಧ್ಯತೆಗಳಿವೆ.

andolanait

Recent Posts

ಶಿವಾನಂದಪುರಿ ಶ್ರೀಗಳಿಗೆ ಕನಕ ಭವನ ನಿರ್ವಹಣೆ ಹೊಣೆ

ಮಂಜು ಕೋಟೆ ಕುರುಬ ಸಮಾಜದ ಎರಡು ಬಣಗಳ ನಡುವೆ ಉಂಟಾಗಿದ್ದ ಗೊಂದಲ; ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕ್ರಮ ಎಚ್.ಡಿ.ಕೋಟೆ: ಮುಖ್ಯಮಂತ್ರಿ…

2 hours ago

ರಿಂಗ್ ರಸ್ತೆಯಲ್ಲಿ ಸಿಗ್ನಲ್ ಲೈಟ್‌ಗಳ ಅಳವಡಿಕೆ

೩೫ ಕಡೆಗಳಲ್ಲಿ ಹೈಬ್ರಿಡ್ ಸಿಗ್ನಲ್ ಲೈಟ್; ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಮೈಸೂರು: ಭವಿಷ್ಯದಲ್ಲಿ ರಿಂಗ್…

3 hours ago

ಹುಲಿ ಸೆರೆಗೆ ಬಂತು ಥರ್ಮಲ್ ಡ್ರೋನ್‌

ಕಾಡಂಚಿನ ವ್ಯಾಘ್ರ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ಚಿರತೆ ಸೆರೆಗೆ ತಂತ್ರಜ್ಞಾನ ಬಳಕೆ ಮಾಡಿದ್ದ ಅರಣ್ಯ ಇಲಾS ಮೈಸೂರು: ಕಳೆದ ಎರಡು…

3 hours ago

ಕೃಷಿ ಮೇಳಕ್ಕೆ 10 ಲಕ್ಷ ಜನ ಭೇಟಿ

ಹೇಮಂತ್‌ಕುಮಾರ್ ದಾಖಲೆ ಸೃಷ್ಟಿ ; ಹಲವು ಅಚ್ಚರಿಗಳ ತಾಣವಾದ ಮೂರು ದಿನಗಳ ಮೇಳ  ಮಂಡ್ಯ: ಮೂರು ದಿನಗಳ ಕಾಲ ವಿ.ಸಿ.ಫಾರಂನಲ್ಲಿ…

3 hours ago

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ಮಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

12 hours ago