ಸಾಂಪ್ರದಾಯಿಕ ಎದುರಾಳಿಗಳು ಎದುರಾದರೆ ಟಿ& 20 ಪಂದ್ಯ ಮತ್ತಷ್ಟು ರೋಚಕ
ಅಡಿಲೇಡ್: ಈ ಬಾರಿ ಟಿ- 20 ವಿಶ್ವಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಛಲ ತೊಟ್ಟಿರುವ ಭಾರತ ತಂಡ, ಸೂಪರ್ ೧೨ರಲ್ಲಿ ೫ ಪಂದ್ಯಗಳಿಂದ ೮ ಅಂಕಗಳೊಂದಿಗೆ ಗ್ರೂಪ್ ೨ರಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ.
ಗುರುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪ್ರಮುಖ ಪಂ ದ್ಯಕ್ಕಾಗಿ ರೋಹಿತ್ ಶರ್ಮಾ ನಾಯಕತ್ವದ ತಂಡ ಸಜ್ಜಾಗಿದೆ.
ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧ ಟಿ೨೦ ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸೆಣಸಾಡಲಿದ್ದು, ಇಲ್ಲಿ ಗೆದ್ದ ತಂಡ ಪ್ರಶಸ್ತಿ ಸುತ್ತಿಗೆ ಮುನ್ನಡೆಯಲಿದೆ.
2022ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸೂರ್ಯಕುಮಾರ್ ಯಾದವ್ ಅವರು ಮೂರು ಅರ್ಧಶತಕಗಳನ್ನು ದಾಖಲಿಸಿ ಭಾರತದ ಮಹತ್ವದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇನ್ನು ತಂಡದ ವಿಷಯಕ್ಕೆ ಬಂದರೆ ಸ್ಪಿನ್ನರ್‌ಗಳನ್ನು ಎದುರಿಸಲು ಎಡಗೈ ಬ್ಯಾಟ್ಸ್‌ಮನ್‌ಗೆ ಅವಕಾಶವನ್ನು ನೀಡಲು ತಂಡದ ನಾಯಕ ಬಯಸಿದ್ದಾರೆ. ಆದರೆ ವಿಕೆಟ್ ಕೀಪರ್‌ಗಳಿಬ್ಬರೂ ತಂಡದ ಆಯ್ಕೆಯಲ್ಲಿರುತ್ತಾರೆ,
ಮಂಗಳವಾರ ನೆಟ್ಸ್ ಅಭ್ಯಾಸದ ವೇಳೆ ರೋಹಿತ್ ಶರ್ಮಾ ಅವರ ಮುಂಗೈಗೆ ಪೆಟ್ಟು ಬಿದ್ದಿತ್ತು. ಅದರ ಬಗ್ಗೆ ಮಾತನಾಡಿರುವ ರೋಹಿತ್ “” ನನಗೆ ನಿನ್ನೆ ಬಾಲ್ ತಾಗಿದೆ, ಆದರೆ ಇದೀಗ ಚೇತರಿಕೆಯಾಗಿದೆ ಎಂದು ತೋರುತ್ತದೆ, ಸಣ್ಣದಾದ ಏಟು ಕಂಡುಬಂದಿದೆ, ಆದರೆ ಈಗ ಅದು ಸಂಪೂರ್ಣವಾಗಿ ಗುಣಮುಖವಾಗಿದೆʼʼ ಎಂದಿದ್ದಾರೆ.
2013ರಲ್ಲಿ ಭಾರತ ಎಂಎಸ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಇದಕ್ಕೂ ಮುನ್ನ 2007ರಲ್ಲಿ ಟಿ೨೦ ವಿಶ್ವಕಪ್ ಗೆದ್ದು ಬೀಗಿತ್ತು. ಭಾರತ ತಂಡವು ಕೊನೆಯದಾಗಿ ಐಸಿಸಿ ಟೂರ್ನಿಯನ್ನು ಅನ್ನು ಗೆದ್ದು ಒಂಬತ್ತು ವರ್ಷಗಳಾಗಿವೆ. ಅಂದಿನಿಂದ ಐಸಿಸಿ ಪ್ರಶಸ್ತಿಯು ಪ್ರತಿ ಬಾರಿಯೂ ಟೀಂ ಇಂಡಿಯಾಗೆ ಗಗನಕುಸುಮವಾಗಿದೆ. ಆದರೆ ಈ ಬಾರಿ ಸೆಮಿಫೈನಲ್ ಹಂತ ತಲುಪಿದ್ದು, ಮತ್ತೊಂದು ವಿಶ್ವಕಪ್ ಗೆಲ್ಲುವ ಸನಿಹದಲ್ಲಿದೆ.
ಸೂರ್ಯಕುಮಾರ್ ತನ್ನದೇ ಶೈಲಿಯಲ್ಲಿ ಆಡಲು ಇಷ್ಟಪಡುತ್ತಾನೆ. ಅದು ಬಹುಶಃ ಸೂರ್ಯಕುಮಾರ್ ಯಾದವ್ ಸ್ವಭಾವ. ಅವನು ನಿರ್ಭೀತಿಯಿಂದ ಆಡುತ್ತಾನೆ. ಪಂದ್ಯದ ಪರಿಸ್ಥಿತಿಗನುಗುಣವಾಗಿ ತಂಡದ ಒತ್ತಡವನ್ನು ಬ್ಯಾಟಿಂಗ್ ಮೂಲಕ ನಿಭಾಯಿಸುತ್ತಾನೆ. ಇದು ತಂಡಕ್ಕೆ ವರದಾನವಾಗಿದೆ. ಸೂರ್ಯಕುಮಾರ್ ತನ್ನದೇ ಶೈಲಿಯಲ್ಲಿ ಆಡಲು ಇಷ್ಟಪಡುತ್ತಾನೆ. ಅದು 10 ರನ್‌ಗೆ 2 ವಿಕೆಟ್ ಬಿದ್ದಿರಬಹುದು ಅಥವಾ 100ಕ್ಕೆ 2 ವಿಕೆಟ್ ಆಗಿರಬಹುದು—
–ರೋಹಿತ್ ಶರ್ಮಾ, ತಂಡದ ನಾಯಕ
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿಲ್ಲಿ ಬುಧವಾರ ಸಂಜೆ ಏಕಾಏಕಿ ಮಳೆ ಸುರಿದು ಬಿರು ಬಿಸಿಲಿನಿಂದ ಬಳಲಿದ್ದ ನಗರವನ್ನು ಸ್ವಲ್ಪ…
ಮೈಸೂರು : ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಹಬ್ಬದ ಕಳೆಗಟ್ಟಿದೆ. ಅರಮನೆಯಲ್ಲಿ ವಿಶೇಷ ಸಾಂಸ್ಕೃತಿಕ…
ಮುಂಬೈ : ಆದಿತ್ಯ ಧರ್ ನಿರ್ದೇಶನದ, ರಣವೀರ್ ನಟನೆಯ ಧುರಂಧರ್-2 ಚಿತ್ರದ ಎರಡನೇ ಭಾಗವು ನಾಳೆ(ಮಾರ್ಚ್.19) ಬಿಡುಗಡೆಯಾಗಲಿದೆ. ಕಳೆದ ವರ್ಷ…
ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳಿರುವಾಗ, ನಟ-ರಾಜಕಾರಣಿ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ…
ವಾಷಿಂಗ್ಟನ್ : ಅಮೆರಿಕದ ಬೆಂಬಲಕ್ಕೆ ನಿಲ್ಲಬೇಕಿದ್ದ ನ್ಯಾಟೋ ದೇಶಗಳು ಈಗ ಹಿಂದೆ ಸರಿದಿರುವುದು ಟ್ರಂಪ್ ಆಡಳಿತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಪಶ್ಚಿಮ…
ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳನ್ನು ಪೆನ್‌ಡ್ರೈವ್ ಮೂಲಕ ಹಂಚಿಕೆ ಮಾಡಿದ ಪ್ರಕರಣದಲ್ಲಿ…