ಕ್ರೀಡೆ

ಕೋಟ್ಯಂತರ ರೂಪಾಯಿ ಕರೆಂಟ್‌ ಬಿಲ್ ಕಟ್ಟದ ಸ್ಟೇಡಿಯಂ; ಭಾರತ vs ಆಸ್ಟ್ರೇಲಿಯಾ 4ನೇ ಟಿ20 ಪಂದ್ಯ ನಡೆಯುತ್ತಾ, ಇಲ್ವಾ?

ಇಂದು ( ಡಿಸೆಂಬರ್‌ 1 ) ಸಂಜೆ 7 ಗಂಟೆಗೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕನೇ ಟಿ ಟ್ವೆಂಟಿ ಪಂದ್ಯ ಚತ್ತೀಸ್‌ಗಢದ ಶಹೀದ್‌ ವೀರ್‌ ನಾರಾಯಣ್‌ ಸಿಂಗ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಜರುಗಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಇಲ್ಲಿಯವರೆಗೂ 3 ಪಂದ್ಯಗಳು ಜರುಗಿದ್ದು, ಎರಡರಲ್ಲಿ ಟೀಮ್‌ ಇಂಡಿಯಾ ಗೆದ್ದಿದ್ದರೆ, ಇನ್ನುಳಿದ ಒಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿದೆ. ಹೀಗಾಗಿ ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ ಗೆದ್ದರೆ ಸರಣಿ ಜಯ ಸಾಧಿಸಲಿದ್ದು, ಈ ಮಹತ್ವದ ಪಂದ್ಯಕ್ಕೆ ಇದೀಗ ಕರೆಂಟ್‌ ಬಿಲ್‌ ಕಂಟಕ ಎದುರಾಗಿದೆ.

ಹೌದು, 2009ರಿಂದ ಈ ಕ್ರೀಡಾಂಗಣದ ಕರೆಂಟ್‌ ಬಿಲ್‌ ಪಾವತಿಸಿಲ್ಲ ಎಂಬ ಕಾರಣಕ್ಕೆ ಐದು ವರ್ಷಗಳ ಹಿಂದೆಯೇ ಇಲ್ಲಿನ ಕರೆಂಟ್‌ ಕನೆಕ್ಷನ್‌ ಅನ್ನು ವಿದ್ಯುತ್‌ ಸರಬರಾಜು ಕಂಪನಿ ಕಟ್‌ ಮಾಡಿದೆ. ಅಲ್ಲದೇ ಸಂಬಂಧಿಸಿದ ಇಲಾಖೆಗಳಿಗೆ ನೋಟಿಸ್‌ ಸಹ ನೀಡಲಾಗಿದೆ. ಆದರೂ ಸಹ ಈ ಬಗ್ಗೆ ಯಾವುದೇ ಪಾವತಿ ಬಾರದ ಕಾರಣ ಸ್ಟೇಡಿಯಂಗೆ ವಿದ್ಯುತ್‌ ಸರಬರಾಜನ್ನು ಮತ್ತೆ ಆರಂಭಿಸಲಾಗಿಲ್ಲ. ಒಟ್ಟು 3.16 ಕೋಟಿ ರೂಪಾಯಿಗಳಷ್ಟು ಕರೆಂಟ್‌ ಬಿಲ್‌ ಅನ್ನು ಸ್ಟೇಡಿಯಂ ಕಟ್ಟಬೇಕಿದೆ.

ಹೀಗಾಗಿ ಈ ಇಂದು ನಡೆಯಲಿರುವ ಪಂದ್ಯಕ್ಕೆ ವಿದ್ಯುತ್‌ ಸರಬರಾಜನ್ನು ಹೇಗೆ ಮಾಡಲಾಗುತ್ತದೆ, ಇದರಿಂದ ಪಂದ್ಯಕ್ಕೆ ಅಡ್ಡಿಯಾಗುತ್ತಾ ಎಂಬ ಪ್ರಶ್ನೆಗಳು ಎದ್ದಿವೆ. ಇನ್ನು ಈ ಕ್ರೀಡಾಂಗಣದ ನಿರ್ಮಾಣದ ನಂತರದ ನಿರ್ವಹಣೆಯನ್ನು ಇಲಾಖೆಗೆ ಹಸ್ತಾಂತರಿಸಲಾಗಿದ್ದು ಉಳಿದ ವೆಚ್ಚವನ್ನು ಕ್ರೀಡಾ ಇಲಾಖೆ ಪಾವತಿಸಬೇಕಿತ್ತು. ಆದರೆ ಈ ಕುರಿತು ಎರಡೂ ಇಲಾಖೆಗಳು ಪರಸ್ಪರ ಆರೋಪ ಮಾಡಿಕೊಳ್ಳುತ್ತಿವೆ. ಇನ್ನು ವಿದ್ಯುತ್‌ ಕಡಿತಗೊಂಡ ನಂತರ ಇಲ್ಲಿ 3 ಅಂತಾರಾಷ್ಟ್ರೀಯ ಪಂದ್ಯಗಳು ಜರುಗಿದ್ದು ಈ ಎಲ್ಲಾ ಪಂದ್ಯಗಳನ್ನು ನಡೆಸಲು ಜನರೇಟರ್‌ ಬಳಸಲಾಗಿತ್ತು ಎನ್ನಲಾಗಿದೆ. ಅದೇ ರೀತಿ ಇಂದಿನ ಪಂದ್ಯಕ್ಕೂ ಜನರೇಟರ್‌ ಬಳಸಿಯೇ ಜನರೇಟರ್‌ ಓಡಿಸಲಾಗುತ್ತೆ ಎನ್ನಲಾಗುತ್ತಿದೆ.

andolana

Recent Posts

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

11 hours ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

11 hours ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

11 hours ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

11 hours ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

11 hours ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

12 hours ago