೨೦೨೨ರ ಐಪಿಎಲ್‌ನ ಲಕ್ನೋ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ೨೦೨೪ರ ಐಪಿಎಲ್‌ನಲ್ಲಿ ಕೆಕೆಆರ್ ಪ್ರಾಂಚೈಸಿಗೆ ಮತ್ತೆ ಮರಳಿದ್ದಾರೆ. ೨೦೧೨ ಮತ್ತು ೨೦೧೪ ರಲ್ಲಿ ಕೊಲ್ಕತ್ತಾ ತಂಡ ಚಾಂಪಿಯನ್ ಆಗಿದ್ದಾಗ ಆ ತಂಡದ ನಾಯಕರಾಗಿದ್ದ ಗೌತಮ್ ಗಂಭೀರ್ ಮತ್ತೆ ತಂಡಕ್ಕೆ ಮರಳಿದ್ದಾರೆ.
ಈ ಬಗ್ಗೆ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರು ಮಾತನಾಡಿದ್ದು, ಗಂಭೀರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. “ಗೌತಮ್ ಯಾವಾಗಲೂ ನಮ್ಮ ಕುಟುಂಬದ ಭಾಗವಾಗಿದ್ದಾರೆ ಮತ್ತು ಇದು ನಮ್ಮ ಕ್ಯಾಪ್ಟನ್ ಬೇರೆ ಅವತಾರದಲ್ಲಿ ‘ಮೆಂಟರ್’ ಆಗಿ ಮನೆಗೆ ಮರಳುತ್ತಿದ್ದಾರೆ. ಅವರನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆವು ಮತ್ತು ಈಗ ನಾವೆಲ್ಲರೂ ಚಂದು (ಚಂದ್ರಕಾಂತ್ ಪಂಡಿತ್) ಸರ್ ಮತ್ತು ಗೌತಮ್ ಅವರು ಕೆಕೆಆರ್ ತಂಡದೊಂದಿಗೆ ಮ್ಯಾಜಿಕ್ ಮಾಡುವುದನ್ನು ಎದುರು ನೋಡುತ್ತಿದ್ದೇವೆ. ಅವರಿಂದಾಗಿ ತಂಡದಲ್ಲಿ ಎಂದೂ ಬತ್ತದ ಉತ್ಸಾಹ ಮತ್ತು ಕ್ರೀಡಾ ಮನೋಭಾವ ಹುಟ್ಟುಹಾಕಲು ನಿರೀಕ್ಷಿಸುತ್ತಿದ್ದೇವೆ’ ಎಂದು ತಂಡದ ಸಹ-ಮಾಲೀಕ ಶಾರುಖ್ ಖಾನ್ ತಿಳಿಸಿದ್ದಾರೆ.
ನೈಟ್ ರೈಡರ್ಸ್ ಸಹಾಯಕ ಸಿಬ್ಬಂದಿಯನ್ನು ಮುನ್ನಡೆಸುವ ಕಾರ್ಯಕ್ಕೆ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ನೇತೃತ್ವ ವಹಿಸಿದ್ದಾರೆ. ಅಭಿಷೇಕ್ ನಾಯರ್ (ಸಹಾಯಕ ಕೋಚ್), ಜೇಮ್ಸ್ ಫೋಸ್ಟರ್ (ಸಹಾಯಕ ಕೋಚ್), ಭರತ್ ಅರುಣ್ (ಬೌಲಿಂಗ್ ಕೋಚ್) ಮತ್ತು ರಿಯಾನ್ ಟೆನ್ ಡೋಸ್ಚೇಟ್ (ಫೀಲ್ಡಿಂಗ್ ಕೋಚ್) ತಂಡವನ್ನು ಮುನ್ನಡೆಸಲ್ಲಿದ್ದಾರೆ.
೨೦೧೨ ಮತ್ತು ೨೦೧೪ರಲ್ಲಿ ತಂಡ ಗೆದ್ದಾಗ ಗಂಭೀರ್ ನಾಯಕರಾಗಿದ್ದರು. ೨೦೨೧ರಲ್ಲಿ ರನ್ನರ್ ಅಪ್ ಆಗಿ ಸ್ಥಾನ ಪಡೆದಿತ್ತು. ಒಟ್ಟಾರೆ ಗೌತಮ್ ಗಂಭಿರ್ ಕೆಕೆಆರ್ ಪರ ಆಡಿರುವ ೨೦೧೧ ರಿಂದ ೨೦೧೭ ವರೆಗೆ ಕಪ್ ಗೆದ್ದಿರುವುದನ್ನು ಸೇರಿ ಐದು ಬಾರಿ ಪ್ಲೇ ಆಫ್‌ಗೆ ಅರ್ಹತೆ ಪಡೆದಿತ್ತು. ಸಂಸದರಾಗಿರುವ ಗೌತಮ್ ಗಂಭಿರ್ ಫ್ರಾಂಚೈಸಿ ಮೆಂಟರ್ ಆಗಿದ್ದ ಇವರು ಗ್ಲೋಬಲ್ ಮೆಂಟರ್ ಹುದ್ದೆಗೆ ಏರಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ SA20 ಲೀಗ್‌ನಲ್ಲಿ ಡರ್ಬನ್ ಸೂಪರ್ ಜೈಂಟ್ಸ್‌ನ ಭಾಗವಾಗಿದ್ದರು.
ಗಂಭೀರ್ ಹೇಳಿದ್ದೇನು? : “ನಾನು ಭಾವನಾತ್ಮಕ ವ್ಯಕ್ತಿಯಲ್ಲ ಮತ್ತು ಹೆಚ್ಚಿನ ವಿಷಯಗಳು ನನ್ನನ್ನು ವಿಚಲಿತವಾಗುವಂತೆ ಮಾಡುವುದಿಲ್ಲ. ಆದರೆ, ಇದು ವಿಭಿನ್ನವಾಗಿದೆ. ಎಲ್ಲಿಂದ ಆರಂಭವಾಯಿತೋ, ಅಲ್ಲಿಗೆ ಹಿಂತಿರುಗುತ್ತಿದ್ದೇನೆ. ಇಂದು, ನನ್ನ ಮಾತಿನಲ್ಲಿ ಉತ್ಸಾಹ ಮತ್ತು ನನ್ನ ಹೃದಯದಲ್ಲಿ ಬೆಂಕಿಯಿದೆ. ನಾನು ಮತ್ತೊಮ್ಮೆ ಆ ನೇರಳೆ ಮತ್ತು ಚಿನ್ನದ ಜರ್ಸಿಗೆ ಜಾರಿಕೊಳ್ಳುತ್ತಿದ್ದೇನೆ'”ಎಂದು ಗಂಭೀರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್…
ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…
ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…
ಚೆನ್ನೈ : ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…
ಬೆಂಗಳೂರು : ಕಾಂಗ್ರೆಸ್ ಎಂದರೆ ಕೇವಲ ಒಂದು ರಾಜಕೀಯ ಪಕ್ಷವಲ್ಲ. ಇದೊಂದು ಚಳುವಳಿ ಮತ್ತು ಸಿದ್ಧಾಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಗೋಣಿಕೊಪ್ಪ : ಪಟ್ಟಣದಲ್ಲಿ ಬೀದಿನಾಯಿ ದಾಳಿಗೆ ಇಬ್ಬರು ವಿದ್ಯಾರ್ಥಿಗಳೂ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ಎಚ್ಚೆತ್ತ ಸ್ಥಳೀಯರು ಮತ್ತಷ್ಟು…