ಕ್ರೀಡೆ

ಕ್ರಿಕೆಟ್ ವಿಶ್ವಕಪ್: ಇಂಗ್ಲೆಂಡ್ ಗೆಲುವಿಗೆ 285 ರನ್ ಗುರಿ ನೀಡಿದ ಅಫ್ಘಾನಿಸ್ತಾನ

ನವದೆಹಲಿ : ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ 13 ನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡ ಇಂಗ್ಲಂಡ್ ಗೆಲುವಿಗೆ 285 ರನ್ ಗಳ ಗುರಿ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಅಫ್ಘಾನ್ ಭರ್ಜರಿ ಆರಂಭ ಪಡೆಯಿತು. ರಹ್ಮನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝರ್ದಾನ್ ತಂಡಕ್ಕೆ 114 ರನ್ ಗಳ ಉತ್ತಮ ಜೊತೆಯಾಟ ನೀಡಿದರು.  ಇಬ್ರಾಹಿಂ ಝರ್ದಾನ್(28) ಸ್ಪಿನ್ನರ್ ಆದಿಲ್ ರಶೀದ್‌ ವಿಕೆಟ್‌ ಒಪ್ಪಿಸಿದರು. ಇದು ಅಫ್ಘಾನ್ ತನ್ನ ಮೊದಲ ಪತನವಾಯತು..

ರಹ್ಮನುಲ್ಲಾ ಗುರ್ಬಾಝ್ 57 ಎಸೆತಗಳಲ್ಲಿ 8 ಬೌಂಡರಿ 4 ಸಿಕ್ಸರ್ ಸಹಿತ 80 ಸಿಡಿಸಿ ರನೌಟ್ ಅದರು. ಬಳಿಕ ಬಂದ ಯಾವೊಬ್ಬ ಬ್ಯಾಟರ್ ಕೂಡ ಇಂಗ್ಲಂಡ್ ಬಲಿಷ್ಟ ಬೌಲಿಂಗ್ ಎದುರು ಹೆಚ್ಚು ಸಮಯ ಕ್ರೀಸಿನಲ್ಲಿ ನಿಲ್ಲಲು ಸಾಧ್ಯವಾಗದೆ ದಿಢೀರ್ ಕುಸಿತ ಕಂಡರು. ರಹಮತ್ ಶಾ 3 ರನ್ ಗಳಿಸಿ ಆದಿಲ್ ರಶೀದ್ ಬೌಲಿಂಗ್ ನಲ್ಲಿ ಸ್ಟಂಪ್ ಔಟ್ ಆದರೆ, ನಾಯಕ ಹಶ್ಮತುಲ್ಲಾ ಶಾಹಿದಿ 14 ರನ್ ಗಳಿಸಿ ಜೊ ರೂಟ್ ಬೌಲಿಂಗ್ ನಲ್ಲಿ ಚೆಂಡು ವಿಕೆಟ್ ಗೆ ಬಡಿದು ಬೌಲ್ಡ್ ಆಗಿ ನಿರಾಸೆ ಮೂಡಿಸಿದರು.

ಅಝ್ಮತುಲ್ಲಾ ಓಮರ್ಝೈ, ಮೊಹಮ್ಮದ್ ನಬಿ ಕ್ರಮವಾಗಿ 19, 9 ಗಳಿಸಿ ಪೆವಿಲಿಯನ್ ಪರೇಡ್ ಗೆ ಸಾಥ್ ನೀಡಿದರು. ಬಳಿಕ ಕೊಂಚ ಚೇತರಿಸಿಕೊಂಡ ಅಫ್ಘಾನ್ ಇಕ್ರಂ ಅಲಿಖಿಲ್ ಮತ್ತು ರಶೀದ್ ಖಾನ್ ಜೋಡಿ 43 ರನ್ ಗಳ ಜೊತೆಯಾಟ ನೀಡಿ ಮೊತ್ತ ಹೆಚ್ಚಿಸುವ ಯೋಜನೆಯಲ್ಲಿ ಇದ್ದರು. ಆದರೆ ರಶೀದ್ ಖಾನ್ 23 ರನ್ ಗಳಸಿ ಆದಿಲ್ ರಶೀದ್ ಬೌಲಿಂಗ್ ನಲ್ಲಿ ಜೊ ರೂಟ್ ಗೆ ಕ್ಯಾಚ್ ನೀಡಿ ಔಟ್ ಆದರು.

ಇಕ್ರಂ ಅಲಿಖಿಲ್ 3 ಬೌಂಡರಿ 2 ಸಿಕ್ಸರ್ ಸಹಿತ 58 ಗಳಸಿ ಅರ್ಧಶತಕ ಬಾರಿಸಿ ಟೊಪ್ಲಿ ಗೆ ವಿಕೆಟ್ ನೀಡಿದರೆ ಮುಜೀಬ್ ಉರ್ ರಹ್ಮಾನ್ 28 ರನ್ ಗಳ ಉಪಯುಕ್ತ ಕೊಡುಗೆ ನೀಡಿದರು. ಅಂತಿಮ ಜೋಡಿಯಾದ ನವೀನ್ 5 ರನ್ ಗೆ ಜೋಸ್ ಬಟ್ಲರ್ ಗೆ ರನೌಟ್ ಆದರು. ಫಝಲ್ ಹಕ್ ಫಾರೂಕಿ 2 ರನ್ ಗಳಿಸಿದರು.

ಇಂಗ್ಲಂಡ್ ಪರ ಆದಿಲ್ ರಶೀದ್ 3 ವಿಕೆಟ್ ಪಡೆದರೆ, ಮಾರ್ಕ್ ವುಡ್ 2, ಲಿಯಾಮ್ ಲಿವಿಂಗ್ ಸ್ಟೋನ್‌, ಜೋ ರೂಟ್, ರೀಸ್ ಟೋಪ್ಲಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.

andolanait

Recent Posts

ನಾಳೆ ದೆಹಲಿಗೆ ತೆರಳಲಿದ್ದಾರೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಅವರು ನಾಳೆ ದೆಹಲಿಗೆ ತೆರಳಲಿದ್ದಾರೆ. ಡಿಸೆಂಬರ್‌.27ರಂದು ದೆಹಲಿಯ ಇಂದಿರಾ…

5 mins ago

ಚಾಮರಾಜನಗರದಲ್ಲಿ ಬೋನಿಗೆ ಬಿದ್ದ ಹುಲಿ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು, ದೇಪಾಪುರ ಗ್ರಾಮದ ಹೊರವಲಯದಲ್ಲಿ ಹುಲಿಯೊಂದು ಬೋನಿಗೆ ಬಿದ್ದಿದೆ. ಹುಲಿಯನ್ನು ನೋಡಲು…

54 mins ago

ರಾಜ್ಯದಲ್ಲಿ ಬೆಳಗಿನ ವೇಳೆ ದಟ್ಟ ಮಂಜು: ಹವಾಮಾನ ತಜ್ಞರು ಹೇಳಿದ್ದಿಷ್ಟು.!

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚಳಿ, ಶೀತಗಾಳಿಯ ಜೊತೆಗೆ ಬೆಳಗಿನ ವೇಳೆ ಕೆಲವೆಡೆ ದಟ್ಟವಾದ ಮಂಜು ಆವರಿಸುತ್ತಿದೆ. ಬೆಳಗಿನ ವೇಳೆಯಲ್ಲಿ ದಟ್ಟವಾದ…

1 hour ago

ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣ: ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಿಷ್ಟು.!

ತಿರುವನಂತಪುರಂ: ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ಆರೋಪಿಗಳ ಜೊತೆಗೆ ಸೋನಿಯಾ ಗಾಂಧಿ ನಂಟಿದೆ ಎಂದು ಸಿಎಂ ಪಿಣರಾಯಿ ವಿಜಯನ್‌…

2 hours ago

ಬಹುನಿರೀಕ್ಷಿತ ಮಾರ್ಕ್‌ ಹಾಗೂ 45 ಸಿನಿಮಾ ಬಿಡುಗಡೆ

ಸ್ಯಾಂಡಲ್‌ವುಡ್‌ನಲ್ಲಿ ಇಂದು ಕ್ರಿಸ್‌ಮಸ್‌ ಹಬ್ಬದ ಸಡಗರದ ನಡುವೆ ಎರಡು ಬಹುನಿರೀಕ್ಷಿತ ಸಿನಿಮಾಗಳು ಅಬ್ಬರದಿಂದ ತೆರೆಗೆ ಬಂದಿವೆ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌,…

2 hours ago

ಕಾಡಾನೆಗಳು ಊರಿಗೆ ಬರದಂತೆ ಎಐ ಆಧಾರಿತ ಕ್ಯಾಮರಾ ಅಳವಡಿಕೆ

ಮೈಸೂರು: ಕಾಡಾನೆಗಳು ಊರಿಗೆ ಬರದಂತೆ ಅರಣ್ಯ ಇಲಾಖೆಯು ಎಐ ಆಧಾರಿರ ಕೂಗು ಕ್ಯಾಮರಾವನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅಳವಡಿಸಿದೆ.…

3 hours ago