ಅಡಿಲೇಡ್: ನಿರ್ಣಾಯಕ ಪಂದ್ಯಗಳನ್ನು ಸೋತು ಚೋಕರ್ಸ್ ಎಂದು ಕರೆಸಿಕೊಳ್ಳುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಮತ್ತೊಮ್ಮೆ ಇದೇ ಚಾಳಿ ಪ್ರದರ್ಶಿಸಿ ಮನೆಯ ದಾರಿಯ ಹಿಡಿದಿದೆ.
ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆರಂಭದಲ್ಲಿ ಭರ್ಜರಿ ಪ್ರದರ್ಶನಗಳ ಮೂಲಕ ಈ ಬಾರಿ ಟ್ರೋಫಿ ಗೆಲ್ಲುವ ಭರವಸೆ ಮೂಡಿಸಿದ್ದ ತೆಂಬಾ ಬವೂಮ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಈಗ ಸೂಪರ್-12 ಹಂತದಲ್ಲಿ ಕ್ರಿಕೆಟ್ ಶಿಶು ನೆದರ್ಲೆಂಡ್ ವಿರುದ್ಧ ಸೋತು ಸ್ಪರ್ಧೆಯಿಂದ ಹೊರಬಿದ್ದಿದೆ. ಹರಿಣಗಳು ಹೊರ ಬೀಳುತ್ತಿದ್ದಂತೆಯೇ ಟೀಮ್ ಇಂಡಿಯಾ ‘ಬಿ’ ಗುಂಪಿನ ಅಗ್ರಸ್ಥಾನಿಯಾಗಿ ಸೆಮಿಫೈನಲ್ಸ್‌ಗೆ ಲಗ್ಗೆ ಇಟ್ಟಿದೆ.
ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ಎದುರು ಮುಗ್ಗರಿಸಿದ ದಕ್ಷಿಣ ಆಫ್ರಿಕಾ ತಂಡ 13 ರನ್‌ಗಳ ಸೋಲಿನ ಆಘಾತ ಅನುಭವಿಸತು.ಇದರಿಂದ ಭಾರತ ತಂಡ ಸೆಮಿಫೈನಲ್ಸ್‌ಗೆ ಅರ್ಹತೆ ಪಡೆದರೆ, ಇದೇ ಗುಂಪಿನಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳಿಗೆ ಅವಕಾಶದ ಬಾಗಿಲು ತೆಗೆದುಕೊಂಡಿತು. ಬಾಂಗ್ಲಾ ವಿರುದ್ಧಗೆದ್ದ ಪಾಕ್ ಈಗ ಗುಂಪಿ ನ ಎರಡನೇ ಸ್ಥಾನಿಯಾಗಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.
“ಎ’ ಗುಂಪಿನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್ಸ್‌ಗೆ ಅರ್ಹತೆ ಪಡೆದುಕೊಂಡಿವೆ. ನೆಟ್ ರನ್‌ರೇಟ್‌ನಲ್ಲಿ ಹಿನ್ನಡೆ ಕಂಡ 2021ರ ಚಾಂಪಿಯನ್ಸ್ ಹಾಗೂ ಆತಿಥೇಯ ಆಸ್ಟ್ರೇಲಿಯಾ ತಂಡ ಕೂಡ ಸ್ಪರ್ಧೆಯಿಂದ ಹೊರಬಿದ್ದಿದೆ. ಈಗ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿರುವ ಇಂಗ್ಲೆಂಡ್ ತಂಡ ಸೆಮಿಫೈನಲ್ಸ್‌ನಲ್ಲಿ ಭಾರತ ವಿರುದ್ಧ ಸೆಣಸಲಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿರುವ ನೆದರ್ಲೆಂಡ್ಸ್ ತಂಡ ಚಳಿ ಬಿಟ್ಟು ಆಟವಾಡಿತು. ಸ್ಟೀಫನ್ ಮೈಬರ್ಗ್ (37), ಮ್ಯಾಕ್ಸ್ ಒಡೋವ್ಡ್ (29), ಟಾಮ್ ಕೂಪರ್ (31) ಮತ್ತು ಕಾಲಿನ್ ಅಕೆರ್ಮನ್ (41*) ಭರ್ಜರಿ ಬ್ಯಾಟಿಂಗ್‌ನಿಂದ ನೆದರ್ಲೆಂಡ್ಸ್ 20 ಓವರ್‌ಗಳಲ್ಲಿ 158/4 ರನ್‌ಗಳ ಸವಾಲಿನ ಪೇರಿಸಿತು. ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ (27ಕ್ಕೆ 2) ಉತ್ತಮ ದಾಳಿ ಸಂಘಟಿಸಿದರು.
ದಕ್ಷಿಣ ಆಫ್ರಿಕಾ
ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ನಿತಂತರವಾಗಿ ವಿಕೆಟ್‌ಗಳನ್ನು ಕೈಚೆಲ್ಲುವ ಮೂಲಕ ಒತ್ತಡಕ್ಕೆ ಸಿಲುಕಿ ಜಯದ ದಡ ಮುಟ್ಟಲು ವಿಫಲವಾಯಿತು. ತೆಂಬಾ ಬವೂಮ (20), ರೈಲೀ ರೊಸೋವ್ (25) ಮತ್ತು ಎನ್ರಿಚ್ ಕ್ಲಾಸೆನ್ (21) ಆರಂಭ ಪಡೆದರೂ ದೊಡ್ಡ ಇನಿಂಗ್ಸ್ ಆಡದೇ ಇದ್ದ ಕಾರಣ ಜೊತೆಯಾಟ ಕಟ್ಟಲು ವಿಫಲವಾಯಿತು. ಕೊನೆಯಲ್ಲಿ ನಿರ್ಮಿಸಲು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 145 ರನ್ ಗಳಿಸಲಷ್ಟೇ ಶಕ್ತವಾಗಿ ಟೂರ್ನಿಯಿಂದ ಹೊರ ಬಿದ್ದಿತು. ನೆದರ್ಲೆಂಡ್ ಪರ ಬ್ರಾಂಡನ್ ಗ್ಲೊವರ್ (9ಕ್ಕೆ 3) ಮೂರು ವಿಕೆಟ್ ಕಿತ್ತು ಹರಿಣ ಪಡೆಗೆ ಮಾರಕವಾದರು.
ಸಂಕ್ಷಿಪ್ತ ಸ್ಕೋರ್
ನೆದರ್ಲೆಂಡ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 158 ರನ್ (ಸ್ಟೀಫನ್ ಮೈಬರ್ಗ್ 37, ಮ್ಯಾಕ್ಸ್ ಒಡೋವ್ಡ್ 29, ಟಾಮ್ ಕೂಪರ್ 31, ಕಾಲಿನ್ ಅಕೆರ್ಮನ್ 41*; ಕೇಶವ್ ಮಹಾರಾಜ್ 27ಕ್ಕೆ 2).
ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 145 ರನ್ (ತೆಂಬಾ ಬವೂಮ 20, ರೈಲೀ ರೊಸೋವ್ 25, ಎನ್ರಿಚ್ ಕ್ಲಾಸೆನ್ 21; ಬ್ರಾಂಡನ್ ಗ್ಲೊವರ್ 9ಕ್ಕೆ 3, ಫ್ರೆಡ್ ಕ್ಲಾಸೆನ್ 20ಕ್ಕೆ 2, ಬಾಸ್ ಡೆ ಲೀಡೆ 25ಕ್ಕೆ 2).
ಪಂದ್ಯಶ್ರೇಷ್ಠ: ಕಾಲಿನ್ ಅಕೆರ್ಮನ್
ಉಡುಪಿ: ಇಲ್ಲಿನ ಮಲ್ಪೆ ಕೋಡಿಬೆಂಗ್ರೆ ಬೀಷಚ್ ಸಮೀಪ ಪ್ರವಾಸಿ ದೋಣಿ ಮುಗುಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಮೈಸೂರಿನ ಇಬ್ಬರು ಮೃತಪಟ್ಟಿರುವ…
ಹಾಸನ: ನಾನು ಜೆಡಿಎಸ್ ಬಿಟ್ಟು ಹೋದರೆ ದ್ರೋಹ ಹೇಗಾಗುತ್ತದೆ? ನಾನು ಅಲ್ಲಿದ್ದರೆ ಇನ್ನೊಂದು ಸೀಟ್ ಜಾಸ್ತಿ ಆಗೋದು ಅಷ್ಟೇ. ಏನು…
ಬೆಂಗಳೂರು: ವಿಧಾನಮಂಡಲ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಾಂಗ್ರೆಸ್ ಸದಸ್ಯರು…
ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ…
ಮಂಡ್ಯ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ಗಾಂಧಿ ಭವನದಲ್ಲಿ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ…
ಮಂಡ್ಯ: ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಗ್ರಾಮ ಪಂಚಾಯತ್ಗಳಲ್ಲಿ ದಿನಾಂಕ:31-10-2017ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯತ್ ನಿಂದ ನೇಮಕಗೊಂಡು ನೀರುಗಂಟಿ, ಸ್ವಚ್ಛತಗಾರ, ಅಟೆಂಡರ್…