ನವದೆಹಲಿ: 2021 ರ ಟಿ10 ಲೀಗ್ ನಲ್ಲಿ ಭ್ರಷ್ಟ ಚಟುವಟಿಕೆ ನಡೆಸಲಾಗಿದೆ ಎಂದು ಐಸಿಸಿ, ಕ್ರೀಡಾಪಟುಗಳು, ಅಧಿಕಾರಿಗಳು ಹಾಗೂ ಒಂದಷ್ಟು ಮಂದಿ ಭಾರತ ತಂಡಗಳ ಮಾಲಿಕರು ಸೇರಿ 8 ಮಂದಿ ವಿರುದ್ಧ ದೋಷಾರೋಪಣೆ ಹೊರಿಸಿದೆ.
ಭಾರತೀಯ ತಂಡಗಳ ಮಾಲಿಕರಾದ ಪರಾಗ್ ಸಂಘ್ವಿ, ಕೃಷನ್ ಕುಮಾರ್ ಚೌಧರಿ ಅವರುಗಳ ವಿರುದ್ಧವೂ ಎಮಿರೇಟ್ಸ್ ಟಿ10 ಲೀಗ್ ನ 2021 ನೇ ಆವೃತ್ತಿಯಲ್ಲಿ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪ ಹೊರಿಸಲಾಗಿದೆ.
ಇಬ್ಬರು ಭಾರತೀಯರು ಪುಣೆ ಡೆವಿಲ್ಸ್ ನ ಸಹ ಮಾಲಿಕರಾಗಿದ್ದು, ಓರ್ವ ಕ್ರೀಡಾಪಟು ಬಾಂಗ್ಲಾದೇಶದ ಮಾಜಿ ಬ್ಯಾಟ್ಸ್ಮನ್ ನಾಸಿಸ್ ಹುಸೇನ್ ವಿರುದ್ಧವೂ ಭ್ರಷ್ಟಾಚಾರ ಚಟುವಟಿಕೆಗಳ ಆರೋಪ ಕೇಳಿ ಬಂದಿದೆ. ಪ್ರಕರಣದ ಮೂರನೇ ಆರೋಪಿಯನ್ನಾಗಿ ಭಾರತದ ಬ್ಯಾಟಿಂಗ್ ಕೋಚ್ ಆಗಿದ್ದ ಸನ್ನಿ ಧಿಲ್ಲೋನ್ ಅವರನ್ನು ಉಲ್ಲೇಖಿಸಲಾಗಿದೆ.
“2021 ರ ಅಬುಧಾಬಿ T10 ಕ್ರಿಕೆಟ್ ಲೀಗ್‌ಗೆ ಸಂಬಂಧಿಸಿದ ಆರೋಪಗಳು ಮತ್ತು ಆ ಪಂದ್ಯಾವಳಿಯಲ್ಲಿನ ಪಂದ್ಯಗಳನ್ನು ಭ್ರಷ್ಟಗೊಳಿಸುವ ಪ್ರಯತ್ನಗಳು ನಡೆದಿದ್ದವು – ಈ ಪ್ರಯತ್ನಗಳನ್ನು ವಿಫಲಗೊಳಿಸಲಾಗಿತ್ತು.
ಟೂರ್ನಮೆಂಟ್ ನಲ್ಲಿ ಇಸಿಬಿಯ ನೀತಿ ಸಂಹಿತೆಯ ಪಾಲನೆಗಾಗಿ ಐಸಿಸಿಯನ್ನು ಭ್ರಷ್ಟಾಚಾರ ವಿರೋಧಿ ಅಧಿಕಾರಿ (ಡಿಎಸಿಒ)ಯನ್ನಾಗಿ ನೇಮಕ ಮಾಡಲಾಗಿತ್ತು ಎಂದು ಐಸಿಸಿ ಹೇಳಿದೆ.
ಮೂವರು ಭಾರತೀಯರು ಸೇರಿದಂತೆ ಆರು ಮಂದಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಮತ್ತು ಆರೋಪಗಳಿಗೆ ಪ್ರತಿಕ್ರಿಯಿಸಲು ಮಂಗಳವಾರದಿಂದ 14 ದಿನಗಳ ಕಾಲಾವಕಾಶ ನೀಡಲಾಗಿದೆ.
‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…
ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…
ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…
ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…
ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…
ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…