ಕ್ರೀಡೆ

ಕಾಮನ್​ವೆಲ್ತ್​ ಗೇಮ್ಸ್: ಟೇಬಲ್​ ಟೆನ್ನಿಸ್‌ ಸಿಂಗಲ್‌ನಲ್ಲಿ ಕಂಚಿನ ಪದಕ ಗೆದ್ದ ಸತ್ಯಜಿತ್‌

ಬರ್ಮಿಂಗ್‌ಹ್ಯಾಮ್‌: ಕಾಮನ್​ವೆಲ್ತ್​ ಗೇಮ್ಸ್​ನ ಪುರುಷ ಟೇಬಲ್​ ಟೆನ್ನಿಸ್​ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಜ್ಞಾನಶೇಖರನ್  ಸತ್ಯಜಿತ್ ಕಂಚಿನ ಪದಕ ಗೆದ್ದಿದ್ದಾರೆ.

ಆತಿಥೇಯ ಇಂಗ್ಲೆಂಡ್‌ನ ಪೌಲ್ ಡ್ರಿಂಕ್‌ಹಾಲ್ ಅವರನ್ನು 4-3 (11-9, 11-3, 11-5, 11-8, 11-9, 10-12, 11-9) ಸೋಲಿಸುವ ಮೂಲಕ ಜಿ. ಸತ್ಯಜಿತ್ ಮೂರನೇ ಸ್ಥಾನ ಪಡೆದರು.

ಇದಕ್ಕೂ ಮುನ್ನ ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡೆದಿದ್ದ ಅವರು ಮಧ್ಯದಲ್ಲಿ ಪಾಯಿಂಟ್​ಗಳನ್ನು ಕೈಚೆಲ್ಲಿದ್ದರು. ಆದರೆ, ನಿರ್ಣಾಯಕ ಗೇಮ್‌ನಲ್ಲಿ ತಿರುಗೇಟು ನೀಡುವ ಮೂಲ ಅಮೋಘ ಆಟ ಪ್ರದರ್ಶಿಸಿದರು. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕವನ್ನು ತಂದುಕೊಟ್ಟಿದ್ದಾರೆ.

ಪೌಲ್ ಡ್ರಿಂಕ್‌ಹಾಲ್ ವಿರುದ್ದ ಅದ್ಭುತ ಆಟ ಪ್ರದರ್ಶಿಸಿದ ಸತ್ಯನ್, ಆರಂಭದಲ್ಲೇ ಸತತ ಮೂರು ಸೆಟ್​ಗಳನ್ನು ಗೆದ್ದರು. ಆದರೆ ಆ ಬಳಿಕ ಕಂಬ್ಯಾಕ್ ಮಾಡಿದ ಪೌಲ್ ಕೂಡ ಮೂರು ಸೆಟ್​ಗಳನ್ನು ಗೆದ್ದರು. ಈ ಮೂಲಕ  3-3  ಅಂತರದಿಂದ ಸಮಬಲ ಸಾಧಿಸಿದರು.

ಇದರಿಂದ ಪಂದ್ಯವು 7ನೇ ಸುತ್ತಿನತ್ತ ಸಾಗಿತು. ಇಲ್ಲಿ ಸತ್ಯನ್ ಉತ್ತಮ ಆರಂಭ ಪಡೆದು 7-1 ಮುನ್ನಡೆ ಪಡೆದರು. ಆದರೆ ಮತ್ತೊಮ್ಮೆ ಕಂಬ್ಯಾಕ್ ಮಾಡಿದ ಪೌಲ್ ಸ್ಕೋರ್ ಅನ್ನು 8-8 ಸಮಬಲಗೊಳಿಸಿದರು. ಅದಾಗ್ಯೂ ರೋಚಕ ಹೋರಾಟದಲ್ಲಿ ಅಂತಿಮವಾಗಿ ಕೇವಲ 2 ಪಾಯಿಂಟ್​ಗಳ ಮುನ್ನಡೆಯೊಂದಿಗೆ ಸತ್ಯನ್ 11-9 ಅಂಕಗಳ ಮೂಲಕ ಜಯ ಸಾಧಿಸಿದರು. ಈ ಮೂಲಕ 4-3 ಅಂತರದಿಂದ ಗೆಲ್ಲುವ ಮೂಲಕ ಕಂಚಿನ ಪದಕಕ್ಕೆ ಕೊರೊಳ್ಳೊಡ್ಡಿದ್ದಾರೆ.

andolana

Recent Posts

ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…

6 hours ago

ಹನೂರು | ಅಲಗುಮೂಲೆ ಅರಣ್ಯದಲ್ಲಿ ಬೆಂಕಿ ; ಧಗಧಗಿಸಿದ ಕಾಡು

ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…

7 hours ago

ತಂಬಾಕು ಮುಕ್ತ ಗ್ರಾಮಕ್ಕಾಗಿ ಗುಲಾಬಿ ಚಳುವಳಿ

ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…

8 hours ago

ಆಂಬುಲೆನ್ಸ್‌ ತುರ್ತು ಮೀಸಲು ಮಾರ್ಗಕ್ಕೆ ಜಯಾ ಬಚ್ಚನ್‌ ಒತ್ತಾಯ

ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…

8 hours ago

ಗುಂಡ್ಲುಪೇಟೆ | ದನಗಾಹಿ ಮೇಲೆ ಹುಲಿ ದಾಳಿ ; ಪ್ರಾಣಾಪಾಯದಿಂದ ಪಾರು

ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…

8 hours ago

ಏಕತಾ ಮಾಲ್‌ ನಿರ್ಮಾಣಕ್ಕೆ ಹೈಕೋರ್ಟ್ ತಡೆ‌

ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…

8 hours ago