ಅಸ್ಸಾಂ : ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಇಂದು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ವಿಜೇತೆ ನಯನಮೋನಿ ಸೈಕಿಯಾ ಅವರನ್ನು ಗುವಾಹಟಿಯಲ್ಲಿ ಸನ್ಮಾನಿಸಿದರು.

ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಲಾನ್ ಬೌಲ್ಗಳಲ್ಲಿ ಅವರ ತಂಡದ ಐತಿಹಾಸಿಕ ಚಿನ್ನವು ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ. ನಮ್ಮ ಸರ್ಕಾರದಿಂದ ಎಲ್ಲಾ ಬೆಂಬಲವನ್ನು ಅವರಿಗೆ ಭರವಸೆ ನೀಡಿದೆ” ಎಂದು ಸಿಎಂ ಶರ್ಮಾ ಟ್ವೀಟ್ ಮಾಡಿದ್ದಾರೆ.

ಕಾಮನ್ವೆಲ್ತ್ ಕ್ರೀಡಾಕೂಟ 2022 ರಲ್ಲಿ ಲಾನ್ ಬೌಲ್ಸ್ ಸ್ಪರ್ಧೆಯಲ್ಲಿ ಭಾರತದ ಮಹಿಳೆಯರ ತಂಡವು ಚಿನ್ನವನ್ನು ಗೆಲ್ಲುವುದರ ಮೂಲಕ ಇತಿಹಾಸ ಬರೆದಿದ್ದರು. ಲಾನ್ ಬೌಲ್ಸ್ ಸ್ಪರ್ಧೆಯಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತ ದಕ್ಕಿಸಿಕೊಂಡ ಮೊದಲ ಗೆಲುವು ಕಂಡಿತು.
ದಕ್ಷಿಣ ಆಫ್ರಿಕಾದ ವಿರುದ್ಧ ಭಾರತದ ಮಹಿಳೆಯರ ತಂಡವು 17 – 10 ಅಂತರದಿಂದ ಗೆಲುವನ್ನು ಸಾಧಿಸಿತ್ತು. ಈ ತಂಡದಲ್ಲಿ ನಯನಮೋನಿ ಸೈಕಿಯಾ ಅವರು ಉತ್ತಮ ಪ್ರದರ್ಶನವನ್ನು ನೀಡಿದ್ದರು.