ಕ್ರೀಡೆ

ಏಕದಿನ ವಿಶ್ವಕಪ್‌ ಸೋಲಿಗೆ ಕಾರಣ ತಿಳಿಸಿದ ಕೋಚ್‌ ದ್ರಾವಿಡ್‌!

ಮುಂಬೈ : ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತಕ್ಕೆ ಆಘಾತಕಾರಿ ಸೋಲಾಗಿತ್ತು. ಈ ಸೋಲಿನ ಬಗ್ಗೆ ಐಸಿಸಿ ವಿಶ್ವಕಪ್‌ ಟೂರ್ನಿ ಮುಗಿದ 11 ದಿನಗಳ ನಂತರ ಭಾರತ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಮೌನ ಮುರಿದಿದ್ದು, ಸೋಲಿನ ಬಗ್ಗೆ ಕಾರಣ ತಿಳಿಸಿದ್ದಾರೆ.

ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಅಧಿಕಾರಿಗಳು, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಎಲ್ಲರೂ ವಿಡಿಯೋ ಕಾಲ್‌ ಮೂಲಕ ಸಭೆಯ ನೆಡಿಸಿ, ಚರ್ಚಿಸಿ, ಟೂರ್ನಿಯಲ್ಲಿ ಭಾರತದ ಸಾಧನೆಯ ಪರಾಮರ್ಶೆ ನಡೆಸಿದರು.

ಈ ಸಭೆಯಲ್ಲಿ ಕೋಚ್‌ ದ್ರಾವಿಡ್‌ ಫೈನಲ್‌ ಸೋಲಿಗೆ ಕಾರಣ ತಿಳಿಸಿದ್ದಾರೆ. ಸದ್ಯ ವಿಶ್ರಾಂತಿಗಾಗಿ ನಾಯಕ ಹಿಟ್‌ಮ್ಯಾನ್‌ ಲಂಡನ್‌ ಪ್ರವಾಸದಲ್ಲಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಕೋಶಾಧ್ಯಕ್ಷ ಆಶೀಶ್ ಶೆಲರ್ ಕೂಡಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಸಭೆಯಲ್ಲಿ ಟೂರ್ನಿಯುದ್ದಕ್ಕೂ ಅದ್ಭುತ ಗೆಲುವು ದಾಖಲಿಸಿ ಸತತ 10 ಪಂದ್ಯಗಳನ್ನು ಗೆದ್ದ ಭಾರತ ತಂಡ ಫೈನಲ್‌ನಲ್ಲಿ ತೋರಿದ ನೀರಸ ಪ್ರದರ್ಶನ ಬಗ್ಗೆ ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಂದ ವಿವರಣೆ ಕೇಳಿದ್ದಾರೆ ಎಂದು ದೈನಿಕ್‌ ಜಾಗರಣ್‌ ವರದಿ ಮಾಡಿದೆ.

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಲು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನ ಪಿಚ್‌ ಕಾರಣ ಎಂದು ದ್ರಾವಿಡ್‌ ತಿಳಿಸಿದ್ದಾರೆ. ಈ ಪಿಚ್‌ ನಮಗೆ ಸೋಲು ನೀಡಿದೆ. ಭಾರತೀಯ ಕ್ರಿಕೆಟ್‌ ಮ್ಯಾನೆಜ್‌ಮೆಂಟ್‌ ನಿರೀಕ್ಷಿಸಿದಷ್ಟು ತಿರುವು ಈ ಪಿಚ್‌ ಪಡೆಯಲಿಲ್ಲ. ಇದು ನಮ್ಮ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು ಎಂದು ಕೋಚ್‌ ದ್ರಾವಿಡ್‌ ಹೇಳಿರುವುದಾಗಿ ವರದಿಯಾಗಿದೆ.

ಜೊತೆಗೆ ಸಭೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್‌ ತಂಡ ಆಯ್ಕೆ ಸಂಬಂಧ ಮಾರ್ಗಸೂಚಿ ಬಗ್ಗೆಯೂ ಚರ್ಚಿಸಲಾಯಿತು. ಹಾಗೂ ಬಹಳ ಮುಖ್ಯವಾಗಿ ಭವಿಷ್ಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ವರದಿಯಾಗಿದೆ.

ವಿಶ್ವಕಪ್‌ ಟೂರ್ನಿಯ ಆತಿಥ್ಯ ತಂಡ ಭಾರತವು ತಾನಾಡಿದ 9 ಲೀಗ್‌ ಪಂದ್ಯಗಳನ್ನು ನಿರಾಯಾಸವಾಗಿ ಗೆಲ್ಲುವ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಸ್ವೀಕರಿಸಿತ್ತು. ಸೆಮಿಸ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಜಯ ಗಳಿಸಿ ಫೈನಲ್‌ ಎಂಟ್ರಿಕೊಟ್ಟಿತು. ಇತ್ತ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಆಸೀಸ್‌ ಫೈನಲ್‌ ಪ್ರವೇಶಿಸಿತು.

ಫೈನಲ್‌ ಪಂದ್ಯದಲ್ಲಿ ಟಾಸ್‌ ಸೊತು ಬ್ಯಾಟ್‌ ಮಾಡಿದ ಭಾರತ ತಂಡ ಕೇವಲ 240 ರನ್‌ ಗಳಿಸಿ ಸಾಧಾರಣ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಆಸೀಸ್‌ 43.5ಗಳಲ್ಲೇ ಗುರಿ ಬೆನ್ನಟ್ಟಿ ತನ್ನ ವೃತ್ತಿ ಜೀವನದ 6ನೇ ಟ್ರೋಫಿ ಗೆದ್ದು ಬೀಗಿತು.

andolanait

Recent Posts

ಹನೂರು: ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಬಸ್‌ ಸೌಲಭ್ಯ ಕಲ್ಪಿಸಲು ಡಿಪೋ ನಿರ್ಮಾಣ: ಶಾಸಕ ಎಂ.ಆರ್.‌ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಕೆಎಸ್‌ಆರ್‌ಟಿಸಿ ಸೌಲಭ್ಯ ಕಲ್ಪಿಸಲು ತಾಲೂಕು ಕೇಂದ್ರದಲ್ಲಿ…

2 hours ago

ಶ್ರೀರಂಗಪಟ್ಟಣ: ವಿದ್ಯುತ್ ಸ್ಪರ್ಶದಿಂದ ಕರ್ತವ್ಯ ನಿರತ ಲೈನ್‌ಮ್ಯಾನ್ ಸಾವು

‌ಶ್ರೀರಂಗಪಟ್ಟಣ: ವಿದ್ಯುತ್‌ ಸ್ಪರ್ಶದಿಂದ ಕರ್ತವ್ಯ ನಿರತ ಲೈನ್‌ಮ್ಯಾನ್‌ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿ ಗ್ರಾಮದಲ್ಲಿ ನಡೆದಿದೆ.…

2 hours ago

ರಾಜ್ಯದ ಹಲವೆಡೆ ಭಾರೀ ಗಾಳಿ ಮಳೆ: ಜನಜೀವನ ಅಸ್ತವ್ಯಸ್ತ

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಧಾರಾಕಾರ ಮಳೆಯಾಗಿದ್ದು, ಭಾರೀ ಅವಾಂತರ ಸೃಷ್ಟಿ ಮಾಡಿದೆ. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ…

2 hours ago

ಹನೂರು: 153 ದಿನಗಳಿಂದ ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಅಂತ್ಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಾರ್ಟಳ್ಳಿ, ಕೌದಳ್ಳಿ, ಶೆಟ್ಟಳ್ಳಿ, ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ…

3 hours ago

ಮೈಸೂರಿನಲ್ಲಿ ಅವೈಜ್ಞಾನಿಕ ಟ್ರಾಫಿಕ್‌ ಸಿಗ್ನಲ್‌ ಆರೋಪ: ಸಚಿವ ಮಹದೇವಪ್ಪ ಪ್ರತಿಕ್ರಿಯೆ

ಮೈಸೂರು: ಅರಮನೆಗಳ ನಗರಿ ಮೈಸೂರಿನಲ್ಲಿ ಅವೈಜ್ಞಾನಿಕವಾಗಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಲಾಗಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮಹದೇವಪ್ಪ…

3 hours ago

ದೀದಿ ಸರ್ಕಾರದ ವಿರುದ್ಧ ಅಮಿತ್‌ ಶಾ ಚಾರ್ಜ್‌ಶೀಟ್‌ ರಿಲೀಸ್‌

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹ ಸಚಿವ…

3 hours ago