ಜೂನ್. 29ರ ಶನಿವಾರ ಟಿ20 ವಿಶ್ವಕಪ್ ನ ಫೈನಲ್ ನಡೆದು, ಭಾರತ ತಂಡ ರೋಚಕ ಜಯದೊಂದಿಗೆ ಎರಡನೇ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದುತ್ತು. ಪಂದ್ಯದಲ್ಲಿನ ಪ್ರತಿ ಎಸೆತವೂ ಆಟದ ಗತಿ ಬದಲಿಸುವಂತಿದ್ದುದ್ದರಿಂದ ಇಡೀ ದೇಶವೇ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗಾಗಿ ಕಾಯುತ್ತ ಕುಳಿತಿತ್ತು.
ಮೂರು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ 9.30ರ ವಿಮಾನ ಹತ್ತಿ ಬೆಂಗಳೂರಿಗೆ ವಾಪಾಸಾಗಬೇಕಿತ್ತು. ಒತ್ತಡಗಳ ನಡುವೆ ಅವರಿಗೆ ಸಿಕ್ಕಿದ್ದು ಕೆಲವೇ ಕೆಲವು ನಿಮಿಷಗಳು ಮಾತ್ರ, ಅದೇ ಅವರ ಒತ್ತಡಗಳನ್ನೆಲ್ಲಾ ಬದಿಗಿಟ್ಟು ವಿಮಾನದ ಬಾಗಿಲಲ್ಲಿ ನಿಂತು ವಿಶ್ವಕಪ್ ಟಿ20 ಫೈನಲ್ ಪಂದ್ಯ ವೀಕ್ಷಿಸಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಅವರು ಹಂಚಿಕೊಂಡಿದ್ದರು. ಅದರ ಜೊತೆಗೆ ಭಾರತವು ಸಂಘಟಿತ ಪ್ರದರ್ಶನದ ಮೂಲಕ ವಿಶ್ವಕಪ್ ಗೆದ್ದು ಬರಲಿ ಎಂದು ಮನದುಂಬಿ ಹಾರೈಸಿದ್ದರು.
ಈ ರೀತಿ ಸಿದ್ದರಾಮಯ್ಯನವರು ಶೇರ್ ಮಾಡಿದ್ದ ವೀಡಿಯೋ ಇದೀಗ ಜಾಲತಾಣದಲ್ಲಿ ಭಾರೀ ಹವಾ ಸೃಷ್ಟಿಸಿದೆ. ಈ ವರೆಗೆ ವೀಡಿಯೋವನ್ನು 70 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ, 1,30,000 ಮಂದಿ ಸಿದ್ದರಾಮಯ್ಯನವರ ಕ್ರಿಕೆಟ್ ಪ್ರೇಮಕ್ಕೆ ಲೈಕ್ ಒತ್ತಿ ಮೆಚ್ಚಿದ್ದಾರೆ. ಸಾವಿರಾರು ಮಂದಿ ಕಮೆಂಟ್ ಗಳ ಸುರಿಮಳೆಗೈದು ನಿಮ್ಮ ಕ್ರೀಡಾ ಪ್ರೀತಿಗೆ ನಾವು ಅಭಿಮಾನಿಯಾಗಿದ್ದೇವೆಂದು ಕೊಂಡಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ರಾಜಕಾರಣಿಯೊಬ್ಬರ ಸಾಮಾಜಿಕ ಜಾಲತಾಣದಲ್ಲಿ ಹಾಕಲ್ಪಟ್ಟ ಯಾವೊಂದು ವೀಡಿಯೋ ಕೂಡ ಇಷ್ಟು ವೈರಲ್ ಆಗಿಲ್ಲ ಎಂಬುದು ಗಮನಾರ್ಹ.
ಆಗಾಗ್ಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಹೋಗಿ ಪಂದ್ಯ ವೀಕ್ಷಿಸಿ ಆಟಗಾರರಿಗೆ ಚಪ್ಪಾಳೆಯ ಮೂಲಕ ಹುರಿದುಂಬಿಸುತ್ತಿದ್ದ ಸಿದ್ದರಾಮಯ್ಯನವರು ಬಿಡುವಿರದ ದಿನಚರಿಯ ಕಾರಣಕ್ಕೆ ವಿಮಾನದ ಬಾಗಿಲಲ್ಲಿ ನಿಂತು ಕ್ರಿಕೆಟ್ ವೀಕ್ಷಿಸಿದ್ದಕ್ಕೆ ಕರುನಾಡು ಕೊಂಡಾಡುತ್ತಿದೆ.
ಒಂದೆಡೆ ಭಾರತ ವಿಶ್ವಕಪ್ ಗೆದ್ದಿದೆ, ಇನ್ನೊಂದೆಡೆ ಸಿದ್ದರಾಮಯ್ಯನವರು ನಾಡಿನ ಕ್ರಿಕೆಟ್ ಪ್ರಿಯರ ಮನ ಗೆದ್ದಿದ್ದಾರೆ.
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…