ಲಾಹೋರ್: ಸಂಘಟಿತ ಬ್ಯಾಟಿಂಗ್ ಹಾಗೂ ಬೌಲಿಂಗ್ ಬಲದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಎರಡನೇ ಸೆಮಿ ಫೈನಲ್ಸ್ ಪಂದ್ಯದಲ್ಲಿ ದಕ್ಷಿಣಾ ಆಫ್ರಿಕಾ ವಿರುದ್ಧ 50 ರನ್‌ಗಳ ಅಂತರದಿಂದ ಗೆಲುವು ದಾಖಲಿಸಿದ ನ್ಯೂಜಿಲೆಂಡ್ ತಂಡ ಫೈನಲ್ಸ್‌ಗೆ ಎಂಟ್ರಿ ಕೊಟ್ಟಿದೆ. ಇದೇ ಮಾ.9 ರಂದು ನಡೆಯಲಿರುವ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಟ್ರೋಫಿಗಾಗಿ ಕಿವೀಸ್ ಹೋರಾಟ ನಡೆಸಲಿದೆ.
ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ದಕ್ಷಿಣಾ ಆಫ್ರಿಕಾ ತಂಡಗಳ ನಡುವಣ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿವೀಸ್ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 362 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ದಕ್ಷಿಣಾ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 312 ರನ್ ಗಳಿಸಿ ರನ್‌ಗಳ 50 ಅಂತರದಿಂದ ಹೀನಾಯ ಸೋಲುಂಡಿತು.
ಕಿವೀಸ್ ಇನ್ನಿಂಗ್ಸ್: ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್‌ಗೆ ಆರಂಭಿಕ ಆಘಾತ ಎದುರಾಯಿತು. ವಿಲ್ ಯಂಗ್ 21 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ವಿಲ್ ಯಂಗ್ ವಿಕೆಟ್ ಬಳಿಕ ಕಿವೀಸ್ ಆಟಗಾರರ ವಿಕೆಟ್ ಪಡೆಯಲು ಹರಿಣ ಪಡೆ ಪರದಾಡಿದರು.
ರಚಿನ್ ರವೀಂದ್ರ ಜೊತೆಯಾಗಿ ಬ್ಯಾಟ್ ಬೀಸಿದ ಕೇನ್ ವಿಲಿಯಮ್ಸನ್ ದ.ಆಫ್ರಿಕಾ ಬೌಲರ್‌ಗಳನ್ನು ಮನಬಂದಂತೆ ಕಾಡಿದರು. ರಚಿನ್ ರವೀಂದ್ರ 101 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ಸಹಿತ 108 ರನ್ ಗಳಿಸಿದರೇ, ಕೇನ್ 94 ಎಸೆತಗಳಲ್ಲಿ 10 ಫೋರ್ಸ್ ಮತ್ತು 2 ಸಿಕ್ಸರ್ ಸೇರಿ 102 ರನ್ ಬಾರಿಸಿದರು. ಟಾಮ್ ಲಾಥಮ್ 4 ರನ್ ಗಳಿಸಿ ಔಟಾದರು.
ಕೊನೆಯಲ್ಲಿ ಅಬ್ಬರಿಸಿದ ಡೇರಿಯಲ್ ಮಿಚೆಲ್ 49(37) ಹಾಗೂ ಗ್ಲೇನ್ ಫಿಲಿಪ್ಸ್ ಔಟಾಗದೇ 49(27) ರನ್ ಚಚ್ಚಿ ತಂಡದ ಮೊತ್ತ 350ರ ಗಡಿ ದಾಟಲು ಸಹಕರಿಸಿದರು. ಉಳಿದಂತೆ ಬ್ರೇಸ್‌ವೆಲ್ 16, ಸ್ಯಾಂಟ್ನರ್ ಔಟಾಗದೇ 2 ರನ್ ಕಲೆಹಾಕಿದರು.
ದಕ್ಷಿಣಾ ಆಫ್ರಿಕಾ ಪರ ಲುಂಗಿ ಎನ್‌ಗಿಡಿ ಮೂರು, ರಬಾಡ ಎರಡು ವಿಕೆಟ್ ಹಾಗೂ ಮುಲ್ಡರ್ ಒಂದು ವಿಕೆಟ್ ಉರುಳಿಸಿದರು.
ದಕ್ಷಿಣಾ ಆಫ್ರಿಕಾ ಇನ್ನಿಂಗ್ಸ್: ಬೃಹತ್ ಮೊತ್ತ ಬೆನ್ನತ್ತಲು ಮುಂದಾದ ಹರಿಣ ಪಡೆಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ರಯಾನ್ ರಿಕೆಲ್ಟನ್ 17 ರನ್ ಗಳಿಸಿ ಔಟಾದರು. ನಾಯಕ ತೆಂಬಾ ಬವುಮಾ 56(71), ವ್ಯಾನ್ ಡರ್ ಡುಸೇನ್ 69(66) ಸ್ವಲ್ಪ ಕಾಡಿದರು. ಉಳಿದಂತೆ ಬೇರಾರಿಂದಲೂ ನಿರೀಕ್ಷಿತ ಆಟ ಕಂಡುಬರಲಿಲ್ಲ.
ಡೆವಿಡ್ ಮಿಲ್ಲರ್ ಅರ್ಧಶತಕ ಗಳಿಸಿ ಏಕಾಂಗಿ ಹೋರಾಟ ನಡೆಸಿದರು ತಂಡವನ್ನು ಗೆಲ್ಲಿಸಿಕೊಡಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ಮಿಲ್ಲರ್ 67 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 100 ರನ್ ಗಳಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
ಉಳಿದಂತೆ ಮಾರ್ಕ್ರಂ 31, ಕ್ಲಾಸೆನ್ 3, ಮುಲ್ಡರ್ 8, ಮಾರ್ಕೋ ಯಾನ್ಸನ್ 3, ಕೇಶವ್ ಮಹಾರಾಜ್ 1, ರಬಾಡ 16, ಎನ್‌ಗಿಡಿ ಔಟಾಗದೇ 1 ರನ್ ಗಳಿಸಿದರು.
ನ್ಯೂಜಿಲೆಂಡ್ ಪರ ನಾಯಕ ಸ್ಯಾಂಟ್ನರ್ ಮೂರು, ಮ್ಯಾಟ್ ಹೆನ್ರಿ, ಫಿಲಿಪ್ಸ್ ತಲಾ ಎರಡೆರೆಡು ವಿಕೆಟ್ ವಿಕೆಟ್ ಪಡೆದು ಮಿಂಚಿದರು.
ಚೆನ್ನೈ : ನಟ, ರಾಜಕಾರಣಿ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಚುನಾವಣಾ ಆಯೋಗವು ಗುರುವಾರ ಚಿಹ್ನೆ…
ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತಾಳು ಬೆಟ್ಟದಿಂದ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…
ಬೆಂಗಳೂರು : ಮೊದಲ ವರ್ಷದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘನೆ…
ಸುತ್ತೂರು : ಕೇವಲ 1 ಎಕರೆ ಪ್ರದೇಶದಲ್ಲಿ ಸುಮಾರು 102 ಮಾದರಿಯ ವಿವಿಧ ತಳಿಯ ಬೆಳೆಗಳನ್ನು ಬೆಳೆಯಬಹುದೆಂಬುದನ್ನು ಸಾಬೀತು ಪಡಿಸಲಾಗಿದೆ.…
ದಕ್ಷಿಣ ಕನ್ನಡ: ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣು ದೇವಸ್ಥಾನದ ಆದಾಯ 2025ರ ನವೆಂಬರ್ ಹಾಗೂ…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ದ್ವೇಷ ರಾಜಕಾರಣ ಮಾಡಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ…