ಕ್ರೀಡೆ

42ನೇ ಹುಟ್ಟುಹಬ್ಬ ಆಚರಿಸಿಕೊಂಡ ಕ್ಯಾಪ್ಟನ್‌ ಕೂಲ್‌ ಮಾಹಿ.!

ಬೆಂಗಳೂರು: ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಜುಲೈ 7ಕ್ಕೆ ವಿಶೇಷ ಸ್ಥಾನಮಾನವಿದೆ. ಏಕೆಂದರೆ ಅಂದು ಕ್ರಿಕೆಟ್‌ ಲೋಕದ ದಿಗ್ಗಜ ಆಟಗಾರನು ಹುಟ್ಟಿದ ದಿನ. ಕ್ಯಾಪ್ಟನ್‌ ಕೂಲ್‌ ಎಂದೇ ಖಾತಿ ಪಡೆದ ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿ, ಶುಕ್ರವಾರ (ಜುಲೈ 7) ತಮ್ಮ 42ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಕ್ರಿಕೆಟಿಗರ ವೃತ್ತಿಬದುಕು 36-38ರ ಒಳಗೆ ಅಂತ್ಯವಾಗಿಬಿಡುತ್ತದೆ. ಅದರಲ್ಲೂ ವಿಕೆಟ್‌ಕೀಪರ್‌ಗಳು 35ರ ಬಳಿಕ ಆಟ ಮುಂದುವರಿಸುವುದು ಬಹಳಾ ಕಷ್ಟ. ಆದರೆ, ಸ್ಪರ್ಧಾತ್ಮ ಕ್ರಿಕೆಟ್‌ನಲ್ಲಿ ಮುಂದುವರಿಯುವ ತುಡಿತ ಹೊಂದಿರುವ ಎಂಎಸ್‌ಡಿ ಇದೇ ವರ್ಷ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ 5ನೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟ್ರೋಫಿ ಗೆದ್ದುಕೊಟ್ಟು, ನಿವೃತ್ತಿ ಸದ್ಯಕ್ಕಿಲ್ಲ ಎಂದೇ ಸಂದೇಶ ರವಾನಿಸಿದ್ದರು.

ಚಾಂಪಿಯನ್‌ ಕ್ಯಾಪ್ಟನ್‌, ಕ್ರಿಕೆಟ್‌ ಜಗತ್ತು ಕಂಡ ಶ್ರೇಷ್ಠ ಫಿನಿಷರ್‌, ಒತ್ತಡದ ಸಮಯದಲ್ಲಿ ಅದ್ಭುತ ನಿರ್ಧಾರಗಳನ್ನು ತೆಗೆದುಕೊಳ್ಳುವ ಚಾಣಕ್ಯ ಹೀಗೆ ಕ್ರಿಕೆಟ್‌ನಲ್ಲಿ ಧೋನಿ ತಮ್ಮದೇ ಛಾಪನ್ನು ಅಚ್ಚಳಿಯದಂತೆ ಮೂಡಿಸಿದ್ದಾರೆ. 2004ರಲ್ಲಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕು ಆರಂಭಿಸಿದ ಎಂಎಸ್‌ ಧೋನಿ, ನೋಡ ನೋಡುತ್ತಿದ್ದಂತೆಯೇ ದೈತ್ಯ ತಾರೆಯಾಗಿ ಬೆಳೆದುನಿಂತರು.
ಕ್ಯಾಪ್ಟನ್‌ ಕೂಲ್‌ ಮತ್ತು ಬೆಸ್ಟ್ ಫಿನಿಷರ್‌
2007ರ ಒಡಿಐ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಲೀಗ್‌ ಹಂತದಲ್ಲೇ ಸೋತು ಕಂಗಾಲಾಗಿತ್ತು. ಇದರ ಬೆನ್ನಲ್ಲೇ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಬಿಸಿಸಿಐ ಯುವ ನಾಯಕನನ್ನ ಆಯ್ಕೆ ಮಾಡಲು ಮುಂದಾದಾಗ, ತಂಡದಲ್ಲಿದ್ದ ಮ್ಯಾಚ್‌ ವಿನ್ನರ್‌ ಯುವರಾಜ್‌ ಸಿಂಗ್‌ ಬದಲು ಎಂಎಸ್‌ ಧೋನಿಗೆ ಕ್ಯಾಪ್ಟನ್‌ ಪಟ್ಟ ಕಟ್ಟಿತ್ತು. ನಂತರ ನಡೆದದ್ದು ಈಗ ಇತಿಹಾಸ.
ಧೋನಿ ಸಾರಥ್ಯದಲ್ಲಿ ಫೈನಲ್‌ ತಲುಪಿದ್ದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಫೈನಲ್‌ ಗೆದ್ದು ಟ್ರೋಫಿ ಎತ್ತಿ ಹಿಡಿದಿತ್ತು. ಆ ರೋಚಕ ಫೈನಲ್‌ನಲ್ಲಿ ಧೋನಿ ತಮ್ಮ ಮೇಲಿನ ಒತ್ತಡ ನಿಭಾಯಿಸಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಕ್ಯಾಪ್ಟನ್‌ ಕೂಲ್‌ ಎಂಬ ಬಿರುದನ್ನು ಸಂಪಾದಿಸಿದ್ದರು. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡರು.
ಟ್ರೋಫಿಗಳನ್ನು ಗೆಲ್ಲಬೇಕಾದರೆ ಕೆಲ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂಥದ್ದೇ ನಡೆ ಕೈಗೊಂಡ ಎಂಎಸ್‌ಡಿ 2011ರ ಏಕದಿನ ಕ್ರಿಕೆಟ್‌ ವಿರ್ಶವಕಪ್‌ ಟೂರ್ನಿಗೂ ಮುನ್ನ ತಂಡದಲ್ಲಿದ್ದ ಕೆಲ ಹಿರಿಯ ಆಟಗಾರರನ್ನು ಕೈಬಿಟ್ಟರು. ಇದರಿಂದ ಸಾಕಷ್ಟು ಟೀಕೆ ಎದುರಸಿದ್ದರೂ, 2011ರ ವಿಶ್ವಕಪ್‌ ಗೆದ್ದುಕೊಟ್ಟು ಎಲ್ಲರ ಬಾಯಿ ಮುಚ್ಚಿಸಿದರು.
ಫೈನಲ್‌ನಲ್ಲಿ ಶ್ರೀಲಂಕಾದ ವೇಗಿ ನುವಾನ್‌ ಕುಲಶೇಖರ ಎದುರು ಲಾಂಗ್‌ ಆನ್‌ ಕಡೆಗೆ ಸಿಕ್ಸರ್‌ ಬಾರಿಸಿ ಅವಿಸ್ಮರಣೀಯ ಜಯ ತಂದುರು. ಧೋನಿ ಸಿಕ್ಸರ್‌ ಬಾರಿಸಿ ಪಂದ್ಯ ಮುಗಿಸುವುದನ್ನು ರೂಢಿಯನ್ನಾಗಿಸಿಕೊಂಡು ಬೆಸ್ಟ್‌ ಫಿನಿಷರ್‌ ಎಂದೇ ಜನಪ್ರಿಯರಾದರು. ರನ್‌ ಚೇಸಿಂಗ್‌ನಲ್ಲಿ ಟೀಮ್ ಇಂಡಿಯಾ ದೈತ್ಯ ಎನಿಸಿಕೊಂಡಿತು.
ಐಪಿಎಲ್‌ನಲ್ಲಿ ಸಿಎಸ್‌ಕೆಗೆ ಯಶಸ್ಸು ತಂದ ಕ್ಯಾಪ್ಟನ್‌
ಇಂಡಿಯನ್ ಪ್ರೀಮಿಯರ್‌ ಲೀಗ್‌ ಅಖಾಡದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸುವ ಎಂಎಸ್‌ ಧೋನಿ, ಲೀಗ್‌ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ತಂಡವನ್ನು ನಾಕ್‌ಔಟ್‌ ಮತ್ತು ಫೈನಲ್‌ ಹಂತಕ್ಕೆ ಮುನ್ನಡೆಸಿದ ದಾಖಲೆ ಹೊಂದಿದ್ದಾರೆ. 2010ರಲ್ಲಿ ಮೊದಲ ಬಾರಿ ಸಿಎಸ್‌ಕೆಗೆ ಟ್ರೋಫಿ ಗೆದ್ದುಕೊಟ್ಟ ಧೋನಿ, ಐಪಿಎಲ್‌ 2023 ಟೂರ್ನಿಯಲ್ಲಿ ದಾಖಲೆಯ 5ನೇ ಟ್ರೋಫಿ ಎತ್ತಿ ಹಿಡಿದರು. ಇದಲ್ಲದೆ ಸಿಎಸ್‌ಕೆ ತಂಡಕ್ಕೆ ಚಾಂಪಿಯನ್ಸ್‌ ಲೀಗ್‌ ಟೂರ್ನಿಯಲ್ಲೂ 2 ಬಾರಿ ಟ್ರೋಫಿ ಗೆದ್ದುಕೊಟ್ಟಿದ್ದಾರೆ.
ಪ್ರತಿಭಾ ಪೋಷಕ ಧೋನಿ
ಧೋನಿ ಸಾರಥ್ಯದ ಅಡಿಯಲ್ಲಿ ಇಂದು ಹಲವು ಸೂಪರ್‌ ಸ್ಟಾರ್‌ ಆಟಗಾರರು ಬೆಳೆದುನಿಂತಿದ್ದಾರೆ. ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಕೂಡ ಧೋನಿ ನಾಯಕತ್ವದ ಅಡಿಯಲ್ಲಿ ಬೆಳೆದ ದೈತ್ಯರು. ಐಪಿಎಲ್‌ನಲ್ಲೂ ಸಿಎಸ್‌ಕೆ ತಂಡದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಕಾರ್ಯವನ್ನು ಎಂಎಸ್‌ಡಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಆಟ ಇನ್ನೂ ಬಾಕಿಯಿದೆ
ಅಂದಹಾಗೆ ಐಪಿಎಲ್‌ 2023 ಟೂರ್ನಿಯು ಎಂಎಸ್‌ ಧೋನಿ ಅವರ ಕೊನೇ ಐಪಿಎಲ್‌ ಟೂರ್ನಿ ಎಂದೇ ಲೆಕ್ಕಾಚಾರ ಮಾಡಲಾಗಿತ್ತು. ಆದರೆ, ಫೈನಲ್‌ನಲ್ಲಿ ಗುಜರಾತ್‌ ಟೈಟನ್ಸ್‌ ತಂಡವನ್ನು ಮಣಿಸಿ ಮಾತನಾಡಿದ್ದ ಧೋನಿ, ಇಲ್ಲಿಗೇ ವಿದಾಯ ಹೇಳುವುದು ಸುಲಭ. ಆದರೆ ಅಭಿಮಾನಿಗಳ ಪ್ರೀತಿಗೆ ಗೌರವ ತರಲು ಆಟ ಮುಂದುವರಿಸುತ್ತೇನೆ ಎಂದಿದ್ದರು.

“ಉತ್ತರ ಹುಡುಕುತ್ತಿದ್ದೇನೆ? ಟ್ರೋಫಿ ಗೆದ್ದಾಗ ನಿವೃತ್ತಿ ಹೇಳಲು ಸೂಕ್ತ ಸಮಯವಾಗಿರುತ್ತದೆ. ಆದರೆ, ಎಲ್ಲೆಡೆ ನನಗೆ ಸಿಕ್ಕಿರುವ ಪ್ರೀತಿಗೆ ಪ್ರತಿಯಾಗಿ ಏನಾದರೂ ಕೊಡಬೇಕಲ್ಲವೆ. ಇಲ್ಲಿಂದ ಆಟ ನಿಲ್ಲಿಸಿ ಹೊರ ನಡೆಯುವುದು ಸುಲಭ. ಆದರೆ, ಕಠಿಣ ಹಾದಿ ಏನೆಂದರೆ ಮುಂದಿನ 9 ತಿಂಗಳು ಕಷ್ಟ ಪಟ್ಟು ಮುಂದಿನ ಐಪಿಎಲ್‌ ಆಡುವುದು. ಇದು ಅಭಿಮಾನಿಗಳಿಗೆ ನಾನು ನೀಡಲಿರುವ ಉಡುಗೊರೆ, ನನ್ನ ದೇಹಕ್ಕೆ ಇದು ಕಷ್ಟವಾದರೂ ಖಂಡಿತಾ ಪ್ರಯತ್ನಿಸಲಿದ್ದೇನೆ,” ಎಂದು ಐಪಿಎಲ್ 2023 ಫೈನಲ್‌ ಬಳಿಕ ಧೋನಿ ಹೇಳಿದ್ದರು.

ಮಂಡಿ ನೋವಿನ ಗಾಯದ ಸಮಸ್ಯೆ ಎದುರಿಸಿರುವ ಎಂಎಸ್‌ ಧೋನಿ, ಸಂಪೂರ್ಣ ಚೇತರಿಕೆ ಕಂಡರೆ ಮಾತ್ರವೇ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲವಾದರೆ ಸಿಎಸ್‌ಕೆ ಕೋಚಿಂಗ್‌ ಬಳಗ ಸೇರಿಕೊಳ್ಳಲಿದ್ದಾರೆ.

andolanait

Recent Posts

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

14 mins ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

30 mins ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

53 mins ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

1 hour ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

1 hour ago

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ: ಆರು ನಿರ್ಣಯಗಳನ್ನು ಮಂಡಿಸಿದ ಕಸಾಪ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…

2 hours ago