ಕ್ರೀಡೆ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್‌ಗಳ ಸ್ಮರಣೀಯ ಸಾಧನೆ ಮಾಡಿದ ಬುಮ್ರಾ

ಮೆಲ್ಬೋರ್ನ್‌: ಭಾರತದ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಜಸ್ಪ್ರೀತ್‌ ಬುಮ್ರಾ ತಮ್ಮ 44ನೇ ಟೆಸ್ಟ್‌ ಪಂದ್ಯದಲ್ಲಿ 200 ವಿಕೆಟ್‌ಗಳ ಸ್ಮರಣೀಯ ಸಾಧನೆ ಮಾಡಿದ್ದಾರೆ.

ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್‌ ಟ್ರಾವಿಸ್‌ ಹೆಡ್‌ ಅವರ ವಿಕೆಟ್‌ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್‌ಗಳ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಬೌಲರ್‌ ಎಂಬ ಗೌರವಕ್ಕೆ ಜಸ್ಪ್ರೀತ್‌ ಬುಮ್ರಾ ಭಾಜನರಾದರು. ಹಾಗೇಯೇ ಟೆಸ್ಟ್‌ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಗಳಿಸಿದ ಭಾರತದ 12ನೇ ಬೌಲರ್‌ ಎನಿಸಿದ್ದಾರೆ.

ಕಡಿಮೆ ಎಸೆತಗಳಲ್ಲಿ 200 ವಿಕೆಟ್‌ಗಳ ಸಾಧನೆ ಮಾಡಿದ ಬೌಲರ್‌ಗಳು

ವಕಾರ್‌ ಯೂನಿಸ್‌: 7,725 ಎಸೆತಗಳು

ಡೇಲ್‌ ಸ್ಟೇನ್‌: 7,948 ಎಸೆತಗಳು

ಕಗಿಸೊ ರಬಾಡ: 8,153 ಎಸೆತಗಳು

ಜಸ್ಪ್ರಿತ್‌ ಬುಮ್ರಾ: 8,484 ಎಸೆತಗಳು

ಮಾಲ್ಕಮ್‌ ಮಾರ್ಷಲ್‌: 9,234 ಎಸೆತಗಳು

ಆಂದೋಲನ ಡೆಸ್ಕ್

Recent Posts

ಇನ್ಫೋಸಿಸ್‌ ಆವರಣದಲ್ಲಿ ಚಿರತೆ ಪ್ರಕರಣ: ಇಂದು ಕೂಡ ಸಿಬ್ಬಂದಿಗಳಿಗೆ ವರ್ಕ್‌ ಫ್ರಮ್‌ ಹೋಮ್‌

ಮೈಸೂರು: ನಗರದ ಇನ್ಫೋಸಿಸ್‌ ಕ್ಯಾಂಪಸ್‌ ಆವರಣದಲ್ಲಿ ನಿನ್ನೆ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಚಿರತೆ ಸೆರೆಗೆ ಅರಣ್ಯಾಧಿಕಾರಿಗಳಿಂದ ಕಾರ್ಯಾಚರಣೆ ಮುಂದುವರೆದಿದ್ದು, ಇಂದು…

1 min ago

ಮಾರಕ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌

ವಾಷಿಂಗ್ಟನ್:‌ ಅನಾರೋಗ್ಯದ ನಿಮಿತ್ತ ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ಇದೇ ಮೊದಲ ಬಾರಿಗೆ…

15 mins ago

ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಅನಗತ್ಯ ಆರೋಪ ಸರಿಯಲ್ಲ: ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಬಿಜೆಪಿ ನಾಯಕರು ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಕಿಡಿಕಾರಿದ್ದಾರೆ.…

29 mins ago

2025ರ ಹೊಸ ವರ್ಷಾಚರಣೆಯಲ್ಲಿ ಯಾವುದೇ ಅಹಿಕತರ ಘಟನೆ ನಡೆದಿಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌

ಬೆಂಗಳೂರು: ಈ ಬಾರಿಯ ಹೊಸ ವರ್ಷಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸಾರ್ವಜನಿಕರು ಶಾಂತಿಯುತವಾಗಿ ಹೊಸ ವರ್ಷಾಚರಣೆಯನ್ನು ಸಂಭ್ರಮಿಸಿದ್ದಾರೆ ಎಂದು…

39 mins ago

ಹೊಸ ವರ್ಷಾಚರಣೆಗೆ ಶುಭಾಶಯ ಕೋರಿದ ಯದುವೀರ್‌

ಮೈಸೂರು: ಇಂದಿನಿಂದ 2025ರ ಹೊಸ ವರ್ಷ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಶುಭಾಶಯ ಕೋರಿದ್ದಾರೆ.…

1 hour ago

ಐದು ವರ್ಷಗಳ ಹಿಂದಿನ ‘ತಲ್ವಾರ್’ಗೆ ಈಗ ಬಿಡುಗಡೆಯ ಭಾಗ್ಯ

ಧರ್ಮ ಕೀರ್ತಿರಾಜ್‍ ಅಭಿನಯದ ‘ತಲ್ವಾರ್’ ಎಂಬ ಚಿತ್ರವು ಸುಮಾರು ಐದು ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಚಿತ್ರದ ಮುಹೂರ್ತಕ್ಕೆ ದರ್ಶನ್‍ ಆಗಮಿಸಿ…

1 hour ago