Categories: ಕ್ರೀಡೆ

ನಿವೃತ್ತಿಯ ಸುಳಿವು ನೀಡಿದ ಬಾಕ್ಸರ್‌ ಮೈಕ್‌ ಟೈಸನ್‌

ಅರ್ಲಿಂಗ್ಟನ್‌: ಅಮೇರಿಕಾದ ಟೆಕ್ಸಾಸ್‌ನಲ್ಲಿ ಶನಿವಾರ(ನ.16) ನಡೆದ ಬಾಕ್ಸಿಂಗ್‌ ಪಂದ್ಯದಲ್ಲಿ 27 ವರ್ಷದ ಜಾಕ್‌ ಪೌಲ್‌ ವಿರುದ್ಧ ಮೈಕ್‌ ಟೈಸನ್‌ ಸೋತುಹೋದರು. ಬಳಿಕ ಲೆಜೆಂಡರಿ ಬಾಕ್ಸರ್‌ ಮೈಕ್‌ ಟೈಸನ್‌ ತಮ್ಮ ವೃತ್ತಿಯ ವಿದಾಯದ ಬಗ್ಗೆ ಮಾತನಾಡಿದ್ದಾರೆ.

ಈ ವರ್ಷದ ಜುಲೈ 20 ರಂದು ಮೈಕ್‌ ಟೈಸನ್‌ ಮತ್ತು ಜಾಕ್‌ ಪೌಲ್ ನಡುವೆ ನಡೆಯಬೇಕಿದ್ದ ಪಂದ್ಯ ಟೈಸನ್ ಅನಾರೋಗ್ಯದ ಕಾರಣ ಮುಂದೂಡಲಾಗಿತ್ತು. ಆ ಸಮಯದಲ್ಲಿ ನಾನು ಸಾಯುವ ಅಂತ ತಲುಪಿದ್ದೆ, ಅನೇಕ ಬಾರಿ ರಕ್ತ ವರ್ಗಾವಣೆಯ ಕಾರಣದಿಂದ ಎಲ್ಲವನ್ನು ಕಳೆದುಕೊಳ್ಳಬೇಕಾಯಿತು ಎಂದು ಜಾಕ್‌ ಪೌಲ್‌ ವಿರುದ್ಧ ಸೋತ ನಂತರ ಸಾಮಾಜಿಕ ಜಾಲತಾಣದಲ್ಲಿ‌ ಟೈಸನ್‌ ಹೇಳಿಕೊಂಡಿದ್ದಾರೆ.

ಮೇ ತಿಂಗಳಲ್ಲಿ ನಾನು ಸರಿಯಾದ ದೈಹಿಕ ಆಕಾರದಲ್ಲಿದ್ದೆ. ಹುಣ್ಣು ಇದೆ ಎಂದು ಗೊತ್ತಾದ ನಂತರ ಎಲ್ಲವನ್ನೂ ಕಳೆದುಕೊಂಡೆ. ಎಂಟು ಬಾರಿ ರಕ್ತ ವರ್ಗಾವಣೆ ಆಗಿದೆ. ರಕ್ತ ಮತ್ತು 25 ಪೌಂಡುಗಳನ್ನು ಕಳೆದುಕೊಂಡೆ. ಆದರೂ ನನ್ನ ಅರ್ಧಪ್ರಾಯದ ಜಾಕ್‌ ಪೌಲ್‌ ಜೊತೆ ಹೊರಾಡಿ ಎಂಟು ಸುತ್ತು ಬಂದಿದ್ದಕ್ಕೆ ಖುಷಿಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ ; ಬಿಜೆಪಿಗೆ ತಮಿಳುನಾಡು, ಪಶ್ಚಿಮ ಬಂಗಾಳವೇ ತಲೆನೋವು

ದೆಹಲಿ ಕಣ್ಣೋಟ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಕಳೆದ ಒಂದೂವರೆ ತಿಂಗಳಿಂದ ನಡೆಸುತ್ತಿರುವ ಯುದ್ಧದಿಂದ ಉಂಟಾಗಿರುವ ಇಂಧನ ಮತ್ತು ಅನಿಲ…

10 mins ago

ನನ್ನ ಮೊದಲ ಕವಿತೆಯ ಕಥೆ….

ಕನ್ನಡದ ನಾಲ್ವರು ಖ್ಯಾತ ಕವಿಗಳು ತಮ್ಮ ಮೊದಲ ಕವಿತೆಯ ನೆನಪಲ್ಲಿ ಹೇಗೆ ಕಳೆದು ಹೋಗಿದ್ದಾರೆ ನೋಡಿ. ಬಹುಶಃ, ಮೊದಲ ಕವಿತೆ…

36 mins ago

ಅಣ್ಣಯ್ಯ ಸೇರಿ ಐವರಿಗೆ ಅಂಬೇಡ್ಕರ್‌ ಪ್ರಶಸ್ತಿ

ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್…

1 hour ago

ಮೂಡದ ಒಮ್ಮತ : ಅಮೆರಿಕ-ಇರಾನ್ 21 ಗಂಟೆಗಳ ಮಾತುಕತೆ ವಿಫಲ

ಇಸ್ಲಾಮಾಬಾದ್ : ಪಶ್ಚಿಮ ಏಷ್ಯಾ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ 21…

1 hour ago

ಬಿರುಗಾಳಿ ಸಹಿತ ಭಾರಿ ಮಳೆ : ಧರೆಗುರುಳಿದ ತೆಂಗಿನ ಮರಗಳು.

ಮಂಡ್ಯ : ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಭಾರೀ ಬಿರುಗಾಳಿ ಸಹಿತ ಮಳೆಯಿಂದ ಹೊಳಲು ಗ್ರಾಮದ ವೃತ್ತದಲ್ಲಿ…

2 hours ago

ಅಡಿಯ ಜನಾಂಗದ ಕಾಡಿನ ಮಕ್ಕಳು ನನ್ನ ಕಾಪಾಡಿದರು….

ಕೊಡಗಿನಲ್ಲಿ ಕಾಡುಪಾಲಾಗಿದ್ದ ಕೇರಳದ ಶರಣ್ಯ ಅನುಭವ ಕಥನ ನಾನು ಶರಣ್ಯ. ಕೇರಳದ ಕೋಝಿಕೋಡ್ ಜಿಲ್ಲೆಯ ನಾದಾಪುರಂನ ಯುವತಿ. ಕೊಚ್ಚಿಯಲ್ಲಿ ಐಟಿ…

4 hours ago