ಬಿಸಿಸಿಐ ಮೂವರು ಅಧಿಕಾರಿಗಳಿಗೆ ಕೊರೋನಾ : ಕಚೇರಿಗೆ ಬೀಗ

ಮುಂಬೈ: ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ಮತ್ತೆ ಶುರುವಾಗಿದೆ. ಕಳೆದ 24 ಗಂಟೆಯಲ್ಲಿ 1,17,100 ಮಂದಿಗೆ ಸೋಂಕು ತಗುಲಿದೆ. ಪಾಸಿಟಿವಿಟಿ ರೇಟ್ ಶೇ.7.74 ಇದೆ. ಕಳೆದ 24 ಗಂಟೆಯಲ್ಲಿ 302 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 4,83,178ಕ್ಕೇರಿದೆ. ಸುಮಾರು 30,836 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ ದೇಶದಲ್ಲಿ ಇದುವರೆಗೂ ಒಟ್ಟು 3,43,71,845 ಮಂದಿ ಮಹಾಮಾರಿಯಿಂದ ಗುಣಮುಖರಾಗಿದ್ದಾರೆ. 27 ರಾಜ್ಯಗಳಲ್ಲಿ ಸುಮಾರು 3,007 ಓಮಿಕ್ರಾನ್ ಪ್ರಕರಣಗಳು ಕಂಡುಬಂದಿವೆ. ಮೊನ್ನೆ ಗುರುವಾರ ಮಹಾರಾಷ್ಟ್ರವೊಂದರಲ್ಲಿಯೇ ಹೊಸ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 36 ಸಾವಿರ ದಾಟಿದೆ. ಇದರ ಬಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಮೇಲೆ ಕೂಡ ಬಿದ್ದಿದೆ.

ಹೌದು, ಬಿಸಿಸಿಐನ ಮುಖ್ಯ ಕಚೇರಿ ಮುಂಬೈನಲ್ಲಿದ್ದು ಈ ಕಛೇರಿಯಲ್ಲಿರುವ ಸಿಬ್ಬಂದಿಗಳಲ್ಲಿಯೂ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಒಟ್ಟು ಮೂವರಲ್ಲಿ ಕೊರೊನಾ ವೈರಸ್‌ನ ಪತ್ತೆಯಾಗಿದ್ದು ಮೂರು ದಿನಗಳ ಕಾಲ ಬಿಸಿಸಿಐನ ಕೇಂದ್ರ ಕಚೇರಿಗೆ ಬೀಗ ಜಡಿಯಲಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದ ಆವರಣದಲ್ಲಿರುವ ಬಿಸಿಸಿಐನ ಕೇಂದ್ರ ಕಚೇರಿಯನ್ನು ಮೂರು ದಿನಗಳ ಕಾಲ ಮುಚ್ಚಲಾಗಿದೆ. ಕೊರೊನಾ ವೈರಸ್‌ಗೆ ತುತ್ತಾಗಿರುವ ಸಿಬ್ಬಂದಿಗಳು ತಮ್ಮ ನಿವಾಸದಲ್ಲಿಯೇ ಹೋಮ್‌ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇನ್ನು ಈ ಕಟ್ಟಡ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್‌ನ ಕಚೇರಿಯೂ ಆಗಿದ್ದು ಇದಕ್ಕೆ ಸಂಬಂಧಿಸಿದ 15 ಸಿಬ್ಬಂದಿಗಳಿಗೆ ಕೊರೊನಾವೈರಸ್ ವರದಿ ಪಾಸಿಟಿವ್ ಬಂದಿದೆ.

× Chat with us