ಮುಂಬೈ: ಭಾರತ ಕ್ರಿಕೆಟ್ ತಂಡವು ತವರಿನಲ್ಲಿ ಆಡುವ 2025-26ನೇ ಸಾಲಿನ ಸರಣಿಯ ವೇಳಾಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ.
2025ರ ಮೊದಲ ಋತುವಿನಲ್ಲಿ ಭಾರತ 4 ಟೆಸ್ಟ್ ಪಂದ್ಯಗಳನ್ನು ಅಹಮದಾಬಾದ್, ಕೋಲ್ಕತ್ತಾ, ನವದೆಹಲಿ ಮತ್ತು ಗುವಾಹಟಿಯಲ್ಲಿ ನಡೆಯಲಿದೆ.
ವೆಸ್ಟ್‌ಇಂಡೀಸ್ ವಿರುದ್ಧ ಆಕ್ಟೋಬರ್ 6ರಿಂದ ಆರಂಭವಾಗಲಿರುವ ಎರಡು ಟೆಸ್ಟ್ ಪಂದ್ಯಗಳನ್ನು ಭಾರತ ತಂಡವು ಅಹಮದಾಬಾದ್ ಮತ್ತು ಕೋಲ್ಕತ್ತದಲ್ಲಿ ಆಡಲಿದೆ.
ನವೆಂಬರ್ 18ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಟೆಸ್ಟ್ ಸರಣಿಯು ಐತಿಹಾಸಿಕವಾಗಿರುತ್ತದೆ. ಟೆಸ್ಟ್ ಪಂದ್ಯಗಳ ಜೊತೆಗೆ ಮೂರು ಏಕದಿನ ಮತ್ತು ಐದು ಟಿ20 ಸರಣಿಯನ್ನು ಆಡಲಿದೆ.
ವೇಳಾಪಟ್ಟಿ:
ವೆಸ್ಟ್ ಇಂಡಿಸ್, ಭಾರತ ಪ್ರವಾಸ:
* ಅಕ್ಟೋಬರ್ 6ರಿಂದ ಮೊದಲ ಟೆಸ್ಟ್- ಅಹಮದಾಬಾದ್
* ಅಕ್ಟೋಬರ್ 14ರಿಂದ ಎರಡನೇ ಟೆಸ್ಟ್- ಕೋಲ್ಕತ್ತ
ದಕ್ಷಿಣ ಆಫ್ರಿಕಾ, ಭಾರತ ಪ್ರವಾಸ:
* ನವೆಂಬರ್ 18ರಿಂದ ಮೊದಲ ಟೆಸ್ಟ್- ನವದೆಹಲಿ
* ನವೆಂಬರ್ 26ರಿಂದ ಎರಡನೇ ಟೆಸ್ಟ್- ಗುವಾಹಟಿ
* ನವೆಂಬರ್ 30ರಂದು ಮೊದಲ ಏಕದಿನ ಪಂದ್ಯ- ರಾಂಚಿ
* ಡಿಸೆಂಬರ್ 3ರಂದು ಎರಡನೇ ಏಕದಿನ ಪಂದ್ಯ- ರಾಯ್ಪುರ
* ಡಿಸೆಂಬರ್ 6ರಂದು ಮೂರನೇ ಏಕದಿನ ಪಂದ್ಯ- ವಿಶಾಖಪಟ್ಟಣ
* ಡಿಸೆಂಬರ್ 9ರಂದು ಮೊದಲ ಟಿ20 ಪಂದ್ಯ- ಕಟಕ್
* ಡಿಸೆಂಬರ್ 11ರಂದು ಎರಡನೇ ಟಿ20 ಪಂದ್ಯ- ಚಂಡೀಗಢ
* ಡಿಸೆಂಬರ್ 14ರಂದು ಮೂರನೇ ಟಿ20 ಪಂದ್ಯ- ಧರ್ಮಶಾಲಾ
* ಡಿಸೆಂಬರ್ 17ರಂದು ನಾಲ್ಕನೇ ಟಿ20 ಪಂದ್ಯ- ಲಖನೌ
* ಡಿಸೆಂಬರ್ 19ರಂದು ಐದನೇ ಟಿ20 ಪಂದ್ಯ- ಅಹಮದಾಬಾದ್
ಮಂಡ್ಯ: ಐತಿಹಾಸಿಕ ಹಿನ್ನೆಲೆಯುಳ್ಳ 416ನೇ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್.15ರಂದು ಖ್ಯಾತ ನಟ ವಿ.ರವಿಚಂದ್ರನ್ ಅವರು…
ದಾಸೇಗೌಡ ಸರಗೂರು ಹೊಸ ನಲ್ಲಿ ಸಂಪರ್ಕದಲ್ಲಿ ಸಣ್ಣ ಪ್ರಮಾಣದ ನೀರು; ಕಾಂಕ್ರೀಟ್, ಡಾಂಬರ್ ರಸ್ತೆಗಳ ಅಗೆತಕ್ಕೆ ಆಕ್ರೋಶ ಸರಗೂರು: ಪಟ್ಟಣದ…
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಪಿಎಸ್‌ಸಿ ಒಂದು ಸ್ವಾಯತ್ತ ಸಂಸ್ಥೆಯಾದರೂ…
ಸಿನಿಮಾ ಮಾಧ್ಯಮ ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮವಾಗಿದೆ. ಇತ್ತೀಚಿನ ತಂತ್ರಜ್ಞಾನದ ಅಗಾಧ ಬೆಳವಣಿಗೆಯ ನಡುವೆಯೂ ಉತ್ತಮ ಚಿತ್ರಗಳಿಗೆ…
ಈ ಬಾರಿಯ ವಿಶ್ವವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳವರಿಂದ…
ನಾಗೇಶ ಹೆಗಡೆ ಕೊನೆಗೂ ಪಶ್ಚಿಮ ಘಟ್ಟಗಳ ರಕ್ಷಣೆ ಅನಿರ್ದಿಷ್ಟ ಕಾಲ ಮುಂದೂಡಿಕೆ ಗಾಡ್ಗೀಳ್ ಸಮಿತಿಯ ಕೆಲವು ನಿಯಮಗಳ ಮತ್ತೊಮ್ಮೆ ಖಡಕ್…