ಮೆಲ್ಬೋರ್ನ್ : ಬಿಗ್ ಬ್ಯಾಷ್ ಲೀಗ್ ೨೦೨೩ ಟೂರ್ನಿಯಲ್ಲಿನ ಮೆಲ್ಬೋರ್ನ್ ರೇನಿಗೇಡ್ಸ್ ಮತ್ತು ಪರ್ತ್ ಸ್ಕಾಚರ್ಸ್ ನಡುವಿನ ಪಂದ್ಯ ಪಿಚ್ ಅಪಾಯಕಾರಿಯಾಗಿ ವರ್ತಿಸುತ್ತಿದೆ ಎಂಬ ಕಾರಣಕ್ಕೆ ರದ್ದಾಗಿದೆ. ಪಿಚ್ ಸಹಕಾರಿಯಲ್ಲದೇ ವರ್ತಿಸುತ್ತಿದ್ದನ್ನು ಅಂಪೈರ್‌ಗಳು ಗಮನಿಸಿ ಪಂದ್ಯವನನು ಅರ್ಧಕ್ಕೆ ನಿಲ್ಲಿಸಿದ ಘಟನೆ ಭಾನುವಾರ ನಡೆದಿದೆ. ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಪಾಯಕಾರಿ ಪಿಚ್ ಎಂದು ಪಂದ್ಯವೊಂದನ್ನು ರದ್ದುಪಡಿಸಲಾಗಿದೆ.
ಮೆಲ್ಬೋರ್ನ್‌ನ ಗೀಲಾಂಗ್ ಮೈದಾನದಲ್ಲಿ ಪರ್ತ್ ಬ್ಯಾಟಿಂಗ್ ಮಾಡುವಾಗ ಹಲವು ಬಾರಿ ಚೆಂಡು ದಿಢೀರನೇ ಪುಟಿದೇಳುತ್ತಿತ್ತು. ಇದನ್ನು ಗಮನಿಸಿದ ಅಂಪೈರ್‌ಗಳು ೬.೫ ಓವರ್‌ಗಳಿಗೆ ಪಂದ್ಯ ನಿಲ್ಲಿಸಲು ನಿರ್ಧರಿಸಿದರು. ಬ್ಯಾಟ್ಸ್‌ಮನ್‌ಗಳ ಸುರಕ್ಷತೆ ದೃಷ್ಠಿಯಿಂದ ಈ ಪಂದ್ಯವನ್ನು ರದ್ದುಗೊಳಿಸಿದರು.
ಪಿಚ್ ತೇವಾಂಶದಿಂದ ಕೂಡಿದ ಸ್ಥಳವಾದ್ದರಿಂದ ಸಮಸ್ಯೆಯು ಗಂಭೀರವಾಗಿದ್ದು, ಬ್ಯಾಟರ್‌ಗಳಿಗೆ ಅಪಾಯದ ಅಂಶವಾಗಿತ್ತು. ಪಿಚ್‌ನಲ್ಲಿ ಅಲ್ಲಲ್ಲಿ ಕುಳಿಗಳು ಕಾಣಿಸುತ್ತಿತ್ತು. ಪ್ರತಿಬಾರಿಯೂ ಚೆಂಡು ಹಾಕಿದಾಗೆಲ್ಲಾ ಚೆಂಡು ತೀವ್ರ ತಿರುವುಗಳನ್ನು ಪಡೆಯುತ್ತಿತ್ತು.
ಪಂದ್ಯದ ಹಿಂದಿನ ದಿನ ಸುರಿದ ಮಳೆಗೆ ಸ್ಟೇಡಿಯಂ ಒದ್ದೆಯಾಗಿತ್ತು. ನೀರು ಪಿಚ್‌ಗೆ ಹಾಕಲಾಗಿದ್ದ ಹೊದಿಕೆಯನ್ನು ಮೀರಿ ಒಳಗೆ ಸೋರಿಕೆಯಾಗಿತ್ತು ಅದರಿಂದ ಈ ಪಿಚ್ ಅಪಾಯಕಾರಿಯಾಗಿ ಪರಿಣಮಿಸಿತು ಎಂದು ಹೇಳಲಾಗಿದೆ.
ಪಂದ್ಯ ನಡೆಯುತ್ತಿರುವಾಗ ಕಾಮೆಂಟಿ ಮಾಡುತ್ತಿದ್ದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್, ಆಸೀಸ್ ವಿಕೆಟ್ ಕೀಪರ್ ಗಿಲ್‌ಕ್ರಿಸ್ಟ್ ಬಳಿ ಈ ಪಿಚ್ ನಿಜವಾಗಿಯೂ ಬ್ಯಾಟರ್‌ಗಳಿಗೆ ಅಪಾಯವಾಗಲಿದೆಯೇ, ಅಥವಾ ಬ್ಯಾಟಿಂಗ್ ಮಾಡಲು ಮಾತ್ರ ಕಷ್ಟವಾಗಲಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗಿಲ್‌ಕ್ರಿಸ್ಟ್ ಪಿಚ್ ನೈಜ ಅಪಾಯ ಎಂದು ನನಗನಿಸುತ್ತದೆ ಎಂದರು.
ಇದಾದ ಬಳಿಕ ಪಂದ್ಯ ರದ್ದುಗೊಳಿಸಲಾಯಿತು.
ಬೆಂಗಳೂರು: ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಗೆ ತಡೆ…
ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕೋಹಳ ಬಳಿಯ ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್ಆರ್‌ಟಿಸಿ ಬಸ್…
ಜೆರುಸೇಲಂ: ಭೀಕರ ವಿಮಾನ ಅವಘಡವನ್ನು ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ…
ಮಂಡ್ಯ: ರಾಜ್ಯದ ಸಚಿವರಿಗೆ ಮುಜುಗರ ಉಂಟುಮಾಡಲು ಕೇಂದ್ರ ಸಚಿವರೊಬ್ಬರು ಹಾಗೂ ಕರ್ನಾಟಕದ ಬಿಜೆಪಿ ನಾಯಕರೊಬ್ಬರು ಸ್ಟಿಂಗ್ ಆಪರೇಷನ್‌ಗೆ ಸಂಚು ರೂಪಿಸಿದ್ದಾರೆ…
ಸಿದ್ದಾಪುರ: ಸಿದ್ದಾಪುರ ಮೈಸೂರು ಮುಖ್ಯ ರಸ್ತೆಯ ಘಟ್ಟತಳ ಹೇರೂರು ಎಸ್ಟೇಟ್ ಬಳಿ ಗುರುವಾರ ರಾತ್ರಿ ಹುಲಿ ಕಾಣಿಸಿಕೊಂಡಿದ್ದು ಬಳಿಕ ಸಮೀಪದ…
ಒಂದು ಕಾಲದಲ್ಲಿ (ಒಂದಾನೊಂದು ಕಾಲದಲ್ಲಿ ಎಂಬ ಮಾತಿನಂತೆ) ಎಟಿಎಂ ಯಂತ್ರಗಳಿಂದ ಹಣ ಡ್ರಾ ಮಾಡಿದಾಗ ಸಾಮಾನ್ಯವಾಗಿ ಹೊಸ ಗರಿಗರಿನೋಟುಗಳು ಬರುತ್ತಿದ್ದವು.…