ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟರ್ ಬಾಬರ್ ಅಜಂ, ಏಕದಿನ ಮಾದರಿಯಲ್ಲಿ ವೇಗವಾಗಿ 6 ಸಾವಿರ ರನ್ ಪೂರೈಸುವ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆ ಸರಿಗಟ್ಟಿದ್ದಾರೆ.
ಕರಾಚಿ ಸ್ಟೇಡಿಯಂನಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ, ನ್ಯೂಜಿಲೆಂಡ್ ತಂಡದ ಎದುರು 29 ರನ್ ಗಳಿಸಿ ಔಟಾಗುವ ಮೂಲಕ ಕಡಿಮೆ ಇನ್ನಿಂಗ್ಸ್‌ನಲ್ಲಿ 6,000 ರನ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ.
ವೇಗವಾಗಿ 6,000 ರನ್ ಕಲೆಹಾಕಿದ ಬ್ಯಾಟರ್‌ಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಆಮ್ಲಾ ಇದ್ದರೆ, ಎರಡನೇ ಸ್ಥಾನದಲ್ಲಿ ಬಾಬರ್ ಅಜಂ, ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.
ಏಕದಿನ ಮಾದರಿಯಲ್ಲಿ ಈವರೆಗೆ ಒಟ್ಟು 123 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ಬಾಬರ್, 55.73ರ ಸರಾಸರಿಯಲ್ಲಿ 6,019 ರನ್ ಕಲೆಹಾಕಿದ್ದಾರೆ. ಇದರಲ್ಲಿ 19 ಶತಕ ಮತ್ತು 34 ಅರ್ಧಶತಕ ಸೇರಿವೆ.
ವೇಗವಾಗಿ 6 ಸಾವಿರ ರನ್ ಕಲೆಹಾಕಿದವರು:
* ಹಾಶೀಂ ಆಮ್ಲಾ (ದಕ್ಷಿಣ ಆಫ್ರಿಕಾ): 123 ಇನ್ನಿಂಗ್ಸ್
* ಬಾಬರ್ ಅಜಂ (ಪಾಕಿಸ್ತಾನ): 123 ಇನ್ನಿಂಗ್ಸ್
* ವಿರಾಟ್ ಕೊಹ್ಲಿ (ಭಾರತ): 136 ಇನ್ನಿಂಗ್ಸ್
* ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್): 139 ಇನ್ನಿಂಗ್ಸ್
* ಡೆವಿಡ್ ವಾರ್ನರ್ (ಆಸ್ರೇಲಿಯಾ): 139 ಇನ್ನಿಂಗ್ಸ್
* ಶಿಖರ್ ಧವನ್ (ಭಾರತ): 140 ಇನ್ನಿಂಗ್ಸ್
* ವಿವಿಯನ್ ರಿಚರ್ಡ್ಸನ್ (ವೆಸ್ಟ್ ಇಂಡೀಸ್): 141 ಇನ್ನಿಂಗ್ಸ್
* ಜೋ ರೂಟ್ (ಇಂಗ್ಲೆಂಡ್): 141 ಇನ್ನಿಂಗ್ಸ್
* ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ): 142 ಇನ್ನಿಂಗ್ಸ್
* ಸೌರವ್ ಗಂಗೂಲಿ (ಭಾರತ): 147 ಇನ್ನಿಂಗ್ಸ್
* ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ): 147 ಇನ್ನಿಂಗ್ಸ್
ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಸಭ್ಯತೆ ಮೀರಿ ನಡೆದುಕೊಳ್ಳಬಾರದು ಎಂದು ಶಾಸಕ ತನ್ವೀರ್ ಸೇಠ್ ಸಲಹೆ ನೀಡಿದ್ದಾರೆ. ರಾಜ್ಯ…
ಬೆಂಗಳೂರು: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಮತ್ತು ಅರೇಹಳ್ಳಿ ಸುತ್ತ-ಮುತ್ತ ಜನರಿಗೆ ಹಾವಳಿ ನೀಡುತ್ತಿರುವ 3 ಪುಂಡಾನೆಗಳನ್ನು ಪತ್ತೆಹಚ್ಚಲಾಗಿದೆ.…
ಚಾಮರಾಜನಗರ: ಬೀದಿ ನಾಯಿ ದಾಳಿಗೆ ಜಿಂಕೆ ಸಾವನ್ನಪ್ಪಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಕಾಳನಹುಂಡಿ ಗ್ರಾಮದ ಆಂಜನೇಯ ಸ್ವಾಮಿ…
ಮೈಸೂರು: ನನಗೆ ಸಿಎಂ ಹುದ್ದೆ ಕೊಟ್ಟರೆ ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ಈ ಬಗ್ಗೆ…
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದ್ದು, ವಿಶೇಷವಾಗಿ ಪ್ರೀತಿ ಹೆಸರಿನಲ್ಲಿ ಯುವತಿಯರನ್ನು ವಂಚಿಸಿ ಹತ್ಯೆ…
ಮಂಗಳೂರು: ವಕ್ಫ್ ತಿದ್ದುಪಡಿ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ವಕ್ಫ್ ತಿದ್ದುಪಡಿ ಕರಡು ಅನ್ನು ಮೇಲ್ನೋಟಕ್ಕೆ ನೋಡುವಾಗ ಅದು…