Categories: ಕ್ರೀಡೆ

AUS vs IND Test: ಭಾರತಕ್ಕೆ ಐತಿಹಾಸಿಕ ದಾಖಲೆಯ ಜಯ

ಪರ್ತ್:‌ ಬಾರ್ಡರ್-‌ ಗವಸ್ಕಾರ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 295 ರನ್‌ಗಳ ಐತಿಹಾಸಿಕ ಜಯ ದಾಖಲಿಸಿದೆ. ಇದು ಟೀಂ ಇಂಡಿಯಾಗೆ ಏಷ್ಯಾದ ಹೊರಗೆ ದೊರೆತ ಭಾರಿ ರನ್‌ಗಳ ಅಂತರದ ಗೆಲುವಾಗಿದೆ. ಉತ್ತಮ ಬೌಲಿಂಗ್‌ ಪ್ರದರ್ಶನದ ಜೊತೆಗೆ ಸಾಂಘಿಕ ಹೋರಾಟವು ಗೆಲುವಿಗೆ ಕಾರಣವಾಗಿದೆ.

ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಂ ಇಂಡಿಯಾದ ಕ್ಯಾಪ್ಟನ್‌ ಬುಮ್ರಾ ಬ್ಯಾಟಿಂಗ್‌ ಆಯ್ದುಕೊಂಡರು. ನಾಯಕನ ನಂಬಿಕೆ ಉಳಿಸುವಲ್ಲಿ ಬ್ಯಾಟರ್‌ಗಳು ಸೋತರು. ಆಸ್ಟ್ರೇಲಿಯಾದ ಬಿಗಿ ಬೌಲಿಂಗ್‌ ದಾಳಿಗೆ ಇಂಡಿಯಾ 150 ರನ್‌ಗಳಿಗೆ ಆಲೌಟ್‌ ಆಯಿತು. ಆಸ್ಟ್ರೇಲಿಯಾ ಪರ ಹ್ಯಾಜಲ್‌ವುಡ್‌ 4 ವಿಕೆಟ್‌ ಪಡೆದು ಮಿಂಚಿದರು.

ನಂತರ ಪ್ರಥಮ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಇಂಡಿಯಾದ ವೇಗದ ದಾಳಿಗೆ ತತ್ತರಿಸಿ 104‌ ರನ್‌ಗಳಿಗೆ ಆಲೌಟ್ ಆಯಿತು. ಬುಮ್ರಾ 30ರನ್‌ ನೀಡಿ 5 ವಿಕೆಟ್‌ ಪಡೆಯುವ ಮೂಲಕ ಯಶಸ್ವಿ ಬೌಲರ್‌ ಎನಿಸಿದರು.

46 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಇಂಡಿಯಾಗೆ ಬ್ಯಾಟರ್‌ಗಳು ಉತ್ತಮ ಆರಂಭ ನೀಡಿದರು. ಕೆಎಲ್‌ ರಾಹುಲ್‌ ಹಾಗೂ ಜೈಸ್ವಾಲ್‌ 201 ರನ್‌ಗಳ ಜೊತೆಯಾಟ ಆಡುವ ಮೂಲಕ ಇಂಡಿಯಾಗೆ ಭದ್ರ ಬುನಾದಿ ಹಾಕಿದರು.

ಕೆಎಲ್‌ ರಾಹುಲ್‌ 77(176) ರನ್‌ಗಳಿಗೆ ತಮ್ಮ ಇನ್ನಿಂಗ್ಸ್‌ ಮುಗಿಸಿದರು. ನಂತರ ಜೈಸ್ವಾಲ್‌ ಜೊತೆಗೂಡಿದ ವಿರಾಟ್‌ ಅಬ್ಬರದ ಬ್ಯಾಟಿಂಗ್‌ನಿಂದ ದಾಖಲೆಯ ಶತಕ 100(143) ಪೂರೈಸಿ ಅಜೇಯರಾಗಿ ಉಳಿದರೆ, ಜೈಸ್ವಾಲ್‌ 161(297) ರನ್‌ಗೆ ಔಟಾದರು.

ತಂಡದ ಮೊತ್ತ 6 ವಿಕೆಟ್‌ಗೆ 487ರನ್‌ ಗಳಿಸಿದಾಗ ಟೀಂ ಇಂಡಿಯಾದ ನಾಯಕ ಡಿಕ್ಲೇರ್ ಮಾಡಿಕೊಂಡು 534 ರನ್‌ಗಳ ಬೃಹತ್‌ ಮೊತ್ತದ ಗುರಿ ಎದುರಾಳಿಗೆ ನೀಡಿದರು. ಮೂರನೇ ದಿನದಾಂತ್ಯದಲ್ಲಿ ಬ್ಯಾಟಿಂಗ್‌ ಆರಂಭಿಸಿದ ಅತಿಥೇಯ ತಂಡವು 12 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.

ಒತ್ತಡದಲ್ಲೇ ನಾಲ್ಕನೇ ದಿನ ಆರಂಭಿಸಿದ ಆಸ್ಟ್ರೇಲಿಯಾ ತಂಡವು 238 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಭಾರತದ ಎದುರು 295 ರನ್‌ಗಳ ಸೋಲೊಪ್ಪಿಕೊಂಡಿತು.

ಮಧ್ಯಮ ಕ್ರಮಾಂಕದಲ್ಲಿ ಟ್ರಾವಿಸ್‌ ಹೆಡ್‌ (89 ರನ್)‌, ಮಿಚೆಲ್‌ ಮಾರ್ಷ್(‌47ರನ್)‌, ಮತ್ತು ಅಲೆಕ್ಸ್‌ ಕ್ಯಾರಿ (36ರನ್)‌ ಹೋರಾಟ ನಡೆಸಿದರು ಸೋಲು ತಪ್ಪಿಸಲು ಆಗಲಿಲ್ಲ.

ಮತ್ತೆ ಮಿಂಚಿದ ಬುಮ್ರಾ ಹಾಗೂ ಸಿರಾಜ್‌ 3 ವಿಕೆಟ್‌ ಕಬಳಿಸಿದರೆ, ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌ ಹಾಗೂ ಹರ್ಷಿತ್‌ ರಾಣಾ ನಿತೀಶ್‌ ರೆಡ್ಡಿ ತಲಾ ಒಂದು ವಿಕೆಟ್‌ ಪಡೆದರು.

ನಾಯಕ ಜಸ್ಪ್ರೀತ್‌ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮಂತ್ರಾಲಯಕ್ಕೆ ಭೇಟಿ ನೀಡಿದ ನಟ ರಿಷಬ್‌ ಶೆಟ್ಟಿ ಕುಟುಂಬ

ರಾಯಚೂರು: ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಂದು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.…

17 mins ago

ಬಿಪಿಎಲ್‌ ಕಾರ್ಡ್‌ದಾರರಿಗೆ ಜನವರಿಯಿಂದ ಇಂದಿರಾ ಕಿಟ್:‌ ಸಚಿವ ಮುನಿಯಪ್ಪ

ಬೆಂಗಳೂರು: ಬಿಪಿಎಲ್‌ ಕಾರ್ಡುದಾರರಿಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಇಂದಿರಾ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.…

33 mins ago

ಅಶ್ಲೀಲ ಮೆಸೇಜ್:‌ ಪೊಲೀಸ್‌ ಕಮಿಷನರ್‌ಗೆ ದೂರು ನೀಡಿದ ದರ್ಶನ್‌ ಪತ್ನಿ ವಿಜಯಲಕ್ಷ್ಮೀ

ಬೆಂಗಳೂರು: ನಟ ದರ್ಶನ್‌ ಹಾಗೂ ನಟ ಕಿಚ್ಚ ಸುದೀಪ್‌ ಫ್ಯಾನ್ಸ್‌ ವಾರ್‌ ತಾರಕಕ್ಕೇರಿರುವ ಮಧ್ಯೆ ಸೋಷಿಯಲ್‌ ಮೀಡಿಯಾದಲ್ಲಿ ಅಶ್ಲೀಲ ಮೆಸೇಜ್‌…

57 mins ago

ಸರ್ಫರಾಜ್‌ ಮನೆ ಮೇಲೆ ಲೋಕಾಯುಕ್ತ ದಾಳಿ ವಿಚಾರ: ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಪ್ರತಿಕ್ರಿಯೆ

ಮೈಸೂರು:  ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಸಹಾಯಕ ಸರ್ಫರಾಜ್ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿರುವ…

1 hour ago

ಮುಂದಿನ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್‌ ಪಕ್ಷವನ್ನು ಹೊರಗೆ ಕಳಿಸೋದು ಗ್ಯಾರಂಟಿ: ಆರ್.‌ಅಶೋಕ್‌

ಬೆಂಗಳೂರು: ತನ್ನ ಆಂತರಿಕ ಕಚ್ಚಾಟದಿಂದ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೊರ ಬರದಿದ್ದರೆ, ಮುಂದಿನ ವಿಧಾನಸಭೆ ಚುನಾಣೆಯಲ್ಲಿ ರಾಜ್ಯದ ಜನತೆ ಇವರನ್ನು…

1 hour ago

ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಡಾ. ಶಾಮನೂರು ಶಿವಶಂಕಪ್ಪಗೆ ನುಡಿ ನಮನ

ಬೆಂಗಳೂರು: ಬೆಂಗಳೂರಿನಲ್ಲಿ 1000 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ನಿರ್ಮಿಸಬೇಕು ಎಂಬುದು ಡಾ. ಶಾಮನೂರು ಶಿವಶಂಕರಪ್ಪ ಆಶಯವಾಗಿತ್ತು, ಈ ಕನಸು ನನಸು ಮಾಡಲು…

2 hours ago