ಕ್ರೀಡೆ

ಏಷ್ಯನ್‌ ಗೇಮ್ಸ್‌: ಕ್ರಿಕೆಟ್‌- ಬಾಂಗ್ಲಾ ಬಗ್ಗು ಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಹಾಂಗ್‌ಝೌ: ಋತುರಾಜ್‌ ಗಾಯಕ್ವಾಡ್‌ ಸಾರಥ್ಯದ ಟೀಮ್ ಇಂಡಿಯಾ, 2023ರ ಸಾಲಿನ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದ ಪುರುಷರ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ಗೆ ದಾಪುಗಾಲಿಟ್ಟಿದೆ. ಶುಕ್ರವಾರ (ಅ. 6) ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 9 ವಿಕೆಟ್‌ಗಳಿಂದ ಬಗ್ಗುಬಡಿದು ಫೈನಲ್‌ಗೆ ದಾಪುಗಾಲಿಟ್ಟಿದೆ.

ಇಲ್ಲಿನ ಪಿಂಗ್‌ಫೆಂಗ್‌ ಕ್ಯಾಂಪಸ್‌ ಕ್ರಿಕೆಟ್‌ ಫೀಲ್ಡ್‌ನಲ್ಲಿ ಶುಕ್ರವಾರ ನಡೆದ ಪಂದ್ಯತದಲ್ಲಿ ಟಾಸ್‌ ಗೆದ್ದ ಟೀಮ್ ಇಂಡಿಯಾ ಬೌಲಿಂಗ್‌ ಆಯ್ದುಕೊಂಡಿತು. ಬಾಂಗ್ಲಾ ಪರ ಆರಂಭಿಕ ಬ್ಯಾಟರ್‌ ಪರ್ವೇಝ್ ಹುಸೇನ್ ಎಮಾನ್ (23) ಮತ್ತು ಜಾಕರ್ ಅಲಿ (24*) ಅಲ್ಪ ಹೋರಾಟ ನಡೆಸಿದರು. ಟೀಮ್ ಇಂಡಿಯಾದ ಶಿಸ್ತಿನ ಬೌಲಿಂಗ್‌ ದಾಳಿ ಎದುರು ಕುಸಿದ ಬಾಂಗ್ಲಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 96 ರನ್‌ಗಳ ಅಲ್ಪ ಮೊತ್ತ ಕಲೆಹಾಕಲಷ್ಟೇ ಶಕ್ತವಾಯಿತು.
ಟೀಮ್ ಇಂಡಿಯಾ ಪರ ಸ್ಪಿನ್ನರ್‌ ಆರ್‌ ಸಾಯ್‌ ಕಿಶೋರ್‌ (12ಕ್ಕೆ 3) ಹೆಚ್ಚು ವಿಕೆಟ್‌ ಪಡೆದರು. ವಾಷಿಂಗ್ಟನ್‌ ಸುಂದರ್‌ (15ಕ್ಕೆ 2), ಸ್ಪಿನ್ನರ್‌ಗಳಾದ ತಿಲಕ್ ವರ್ಮಾ, ರವಿ ಬಿಷ್ಣೋಯ್ ಮತ್ತು ಶಹಬಾಝ್ ಅಹ್ಮದ್‌ಗೂ ವಿಕೆಟ್‌ ಪಡೆದರು.
ತಿಲಕ್‌-ಋತುರಾಜ್‌ ಅಬ್ಬರದ ಬ್ಯಾಟಿಂಗ್‌ :
ಸುಲಭದ ರನ್‌ಚೇಸ್‌ ಆರಂಭಿಸಿದ ಟೀಮ್ ಇಂಡಿಯಾ ಆರಂಭದಲ್ಲೇ ಸ್ಟಾರ್‌ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ವಿಕೆಟ್‌ ಕಳೆದುಕೊಂಡಿತು. ಮೊದಲ ಓವರತ್‌ನಲ್ಲೇ ವೇಗಿ ರೊಪಿನ್ ಮೊಂಡಲ್‌ಗೆ ವಿಕೆಟ್‌ ಒಪ್ಪಿಸಿ, ಶೂನ್ಯ ವಿಕೆಟ್‌ ಒಪ್ಪಿಸಿದರು.
ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ನಾಯಕ ಋತುರಾಜ್ ಗಾಯಕ್ವಾಡ್‌ ಮತ್ತು ತಿಲಕ್‌ ವರ್ಮಾ 56 ಎಸೆತಗಳಲ್ಲಿ ಮುರಿಯದ 97 ರನ್‌ಗಳ ಜೊತೆಯಾಟವಾಡುವ ಮೂಲಕ ಭಾರತ ತಂಡಕ್ಕೆ ಭರ್ಜರಿ ಜಯ ತಂದರು.
ಸ್ಪೋಟಕ ಬ್ಯಾಟಿಂಗ್‌ ಮಾಡಿದ ಋತುರಾಜ್‌, 26 ಎಸೆತಗಳಲ್ಲಿ 4 ಫೋರ್‌ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 40 ರನ್‌ ಸಿಡಿಸಿದರು. ಯುವ ಎಡಗೈ ಬ್ಯಾಟರ್‌ ತಿಲಕ್ ವರ್ಮಾ, 26 ಎಸೆತಗಳಲ್ಲಿ 2 ಫೋರ್ ಮತ್ತು ಬರೋಬ್ಬರಿ 6 ಸಿಕ್ಸರ್‌ಗಳೊಂದಿಗೆ 55 ರನ್‌ ಸಿಡಿಸಿ ಔಟಾಗದೇ ಉಳಿದರು.
ಗೋಲ್ಡ್‌ ಮೆಡಲ್‌ ಸಲುವಾಘಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾರತ ತಂಡಕ್ಕೆ ಸಾಂಕ್ರದಾಯಿಕ ಎದುರಾಳಿ ಪಾಕಿಸ್ತಾನ ಅಥವಾ ಅಫಘಾನಿಸ್ತಾನ ತಂಡದ ಸವಾಲು ಎದುರಾಗಲಿದೆ.

ಸಂಕ್ಷಿಪ್ತ ಸ್ಕೋರ್‌

ಬಾಂಗ್ಲಾದೇಶ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 96 ರನ್‌ (ಪರ್ವೇಝ್ ಹುಸೇನ್ ಎಮಾನ್‌ 23, ಜಾಕರ್‌ ಅಲಿ 24*, ರಕಿಬುಲ್ ಹಸನ್‌ 14; ಸಾಯ್‌ ಕಿಶೋರ್‌ 12ಕ್ಕೆ 3, ವಾಷಿಂಗ್ಟನ್‌ ಸುಂದರ್‌ 15ಕ್ಕೆ 2, ಅರ್ಷದೀಪ್ ಸಿಂಗ್ 10ಕ್ಕೆ 1).

ಟೀಮ್ ಇಂಡಿಯಾ: 9.4 ಓವರ್‌ಗಳಲ್ಲಿ 1 ವಿಕೆಟ್‌ಗೆ 97 ರನ್ (ಋತುರಾಜ್‌ ಗಾಯಕ್ವಾಡ್‌ ಅಜೇಯ 40, ತಿಲಕ್ ವರ್ಮಾ ಅಜೇಯ 55).
andolanait

Recent Posts

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

13 mins ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

2 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

4 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

4 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

5 hours ago

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

10 hours ago