ಕ್ರೀಡೆ

ಏಷ್ಯಾ ಕಪ್ 2023 : ದಾಖಲೆಯ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಭಾರತ

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡಿದ ಭಾರತ, ಭಾಬರ್ ಪಡೆಗೆ ಐತಿಹಾಸಿಕ ಸೋಲಿನ ಶಾಕ್ ನೀಡಿತು. ಇದರೊಂದಿಗೆ ಏಷ್ಯಾಕಪ್ ಸೂಪರ್ 4 ಸುತ್ತಿನ ಪಾಯಿಂಟ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿತು.

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನ ಮಳೆಯ ನಡುವೆಯೂ ಅಭಿಮಾನಿಳಿಗೆ ರಸದೌತಣ ನೀಡಿದೆ. ಉಭಯ ತಂಡಗಳ ನಡುವೆ ಸೋಮವಾರ ಕೊಲಂಬೊದಲ್ಲಿ ನಡೆದ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಕುಲ್ದೀಪ್ ಯಾದವ್ ಅವರ ಐದು ವಿಕೆಟ್ ಮ್ಯಾಜಿಕ್ ಹಾಗೂ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಅಜೇಯ ಶತಕದ ನೆರವಿನಿಂದ ಭಾರತವು, ಪಾಕಿಸ್ತಾನವನ್ನು 228 ರನ್‌ಗಳಿಂದ ಸೋಲಿಸಿದೆ. ವಾಸ್ತವವಾಗಿ ಭಾನುವಾರ ನಡೆಯಬೇಕಿದ್ದ ಪಂದ್ಯವನ್ನು ಮಳೆಯ ಕಾರಣದಿಂದಾಗಿ ಮೀಸಲು ದಿನಕ್ಕೆ ಮುಂದೂಡಲಾಯಿತು. ಸೋಮವಾರವೂ ಮಳೆ ಅಡ್ಡಿಯ ನಡುವೆಯೂ ಪಂದ್ಯ ಪೂರ್ಣಗೊಳ್ಳುವಲ್ಲಿ ಯಶಸ್ವಿಯಾಯಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡಿದ ಭಾರತ, ಭಾಬರ್ ಪಡೆಗೆ ಐತಿಹಾಸಿಕ ಸೋಲಿನ ಶಾಕ್ ನೀಡಿತು. ಇದರೊಂದಿಗೆ ಏಷ್ಯಾಕಪ್ ಸೂಪರ್ 4 ಸುತ್ತಿನ ಪಾಯಿಂಟ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿತು.

ಪಾಕಿಸ್ತಾನದ ಎದುರು ಬೃಹತ್ ಗೆಲುವು ದಾಖಲಿಸಿರುವ ಭಾರತ ಪ್ರಸ್ತುತ ಏಷ್ಯಾಕಪ್ 2023 ರ ಸೂಪರ್ 4 ಸುತ್ತಿನ ಪಾಯಿಂಟ್​ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಈ ಸುತ್ತಿನಲ್ಲಿ ಆಡಿರುವ ಏಕೈಕ ಪಂದ್ಯವನ್ನು ಭಾರಿ ಅಂತರದಿಂದ ಗೆದ್ದಿರುವ ರೋಹಿತ್ ಪಡೆ ಎರಡು ಅಂಕಗಳನ್ನು ಸಂಪಾದಿಸಿದೆ. ಅಲ್ಲದೆ 228 ರನ್​ಗಳ ಗೆಲುವು ಭಾರತದ ರನ್​ ರೇಟ್​ ಅನ್ನು +4.560 ಕ್ಕೆ ಏರಿಸಿದೆ. ಹೀಗಾಗಿ ಟೀಂ ಇಂಡಿಯಾ ಉಳಿದ ಮೂರು ತಂಡಗಳಿಗಿಂತ ಅಧಿಕ ನೆಟ್ ರನ್​ರೇಟ್​ನೊಂದಿಗೆ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಇನ್ನು ಈ ಪಂದ್ಯಕ್ಕೂ ಮುನ್ನ ಆಡಿದ ಏಕೈಕ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಮಣಿಸಿದ್ದ ಪಾಕಿಸ್ತಾನ 2 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಭಾರತ ಮೂರನೇ ಸ್ಥಾನದಲ್ಲಿತ್ತು. ಆದರೆ ರೋಹಿತ್ ಪಡೆಯ ಎದುರು ಹೀನಾಯಕವಾಗಿ ಶರಣಾದ ಬಾಬರ್ ತಂಡದ ರನ್​ ರೇಟ್​ ಪಾತಳಕ್ಕೆ ಕುಸಿದಿದೆ. ಭಾರತದ ವಿರುದ್ಧ 228 ರನ್​ಗಳ ಅಂತರದ ಸೋಲು, ಪಾಕ್ ಪಡೆಯ ರನ್​ ರೇಟ್ ಅನ್ನು -1.892 ಕ್ಕೆ ತಂದು ನಿಲ್ಲಿಸಿದೆ. ಹೀಗಾಗಿ ಮೈನಸ್ ರನ್​ ರೇಟ್​ನೊಂದಿಗೆ ಪಾಕ್ ತಂಡ ಮೂರನೇ ಸ್ಥಾನಕ್ಕೆ ಕುಸಿದಿದೆ.

ಹಾಗೆಯೇ ಇಂದು ತನ್ನ ಸೂಪರ್ 4 ಸುತ್ತಿನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಎದುರಿಸುತ್ತಿರುವ ಹಾಲಿ ಚಾಂಪಿಯನ್ ಶ್ರೀಲಂಕಾ +0.420ನೆಟ್ ರನ್​ರೇಟ್​ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಮೊದಲು ಬಾಂಗ್ಲಾದೇಶ ತಂಡವನ್ನು ಮಣಿಸಿದ್ದ ಶ್ರೀಲಂಕಾ ಕೂಡ 2 ಅಂಕಗಳನ್ನು ಸಂಪಾದಿಸಿತ್ತು. ಆದರೆ ನೆಟ್​ ರನ್​ರೇಟ್ ಪಾಕಿಸ್ತಾನಕ್ಕಿಂತ ಕಡಿಮೆ ಇದ್ದಿದ್ದರಿಂದಾಗಿ ಭಾರತ- ಪಾಕಿಸ್ತಾನ ನಡುವಿನ ಕದನಕ್ಕೂ ಮುನ್ನ ಎರಡನೇ ಸ್ಥಾನದಲ್ಲಿತ್ತು. ಆದರೀಗ ಪಾಕ್ ತಂಡದ ನೆಟ್​ ರನ್​ರೇಟ್​ ಮೈನಸ್ -1.892 ಕ್ಕೆ ಇಳಿದಿರುವುದರಿಂದ ಪ್ಲಸ್ ರನ್​ ರೇಟ್​ ಹೊಂದಿರುವ ಶ್ರೀಲಂಕಾ ಎರಡನೇ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇನ್ನು ಪಾಯಿಂಟ್​ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಬಾಂಗ್ಲಾದೇಶ -0.749 ನೆಟ್​ ರನ್​ರೇಟ್ ಹೊಂದಿದೆ.

lokesh

Recent Posts

ಓದುಗರ ಪತ್ರ | ಚಲನ ಚಿತ್ರದ ಅಶ್ಲೀಲ ಸಾಹಿತ್ಯ ನಿಷೇಧಿಸಿ

ಕನ್ನಡ ಚಲನಚಿತ್ರಗಳು ಭಾರತೀಯ ಸಿನಿರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಎಪ್ಪತ್ತು, ಎಂಬತ್ತರ ದಶಕದಲ್ಲಿ ತೆರೆ ಕಂಡ ಚಿತ್ರಗಳ ಹಾಡುಗಳು…

18 mins ago

ಓದುಗರ ಪತ್ರ | ಹೆಚ್ಚುವರಿ ಬಸ್‌ ಸೌಲಭ್ಯ ಕಲ್ಪಿಸಿ

ಸರಗೂರು ಹಾಗೂ ಎಚ್‌.ಡಿ.ಕೋಟೆಯಿಂದ ಗುಂಡ್ಲುಪೇಟೆಗೆ ಪ್ರತಿನಿತ್ಯ ನೂರಾರು ಜನರು ಪ್ರಯಾಣಿಸುತ್ತಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಸರಿಯಾದ ಸಮಯಕೆ…

29 mins ago

ಓದುಗರ ಪತ್ರ | ಕೆರೆಗಳ ಉಳಿವಿಗೆ ಜಿಯೋ ಫೆನ್ಸಿಂಗ್ ಕಡ್ಡಾಯಗೊಳಿಸಿ

ರಾಜ್ಯದ ಜಲಮೂಲಗಳ ಸ್ಥಿತಿ ಇಂದು ಶೋಚನೀಯವಾಗಿದೆ. ಅಂಕಿ-ಅಂಶಗಳ ಪ್ರಕಾರ ಕಳೆದ ಎರಡು ದಶಕಗಳಲ್ಲಿ ಅತಿಕ್ರಮಣದಿಂದಾಗಿ ನಗರ ಪ್ರದೇಶದ ಕೆರೆಗಳ ವಿಸ್ತೀರ್ಣ…

34 mins ago

ಓದುಗರ ಪತ್ರ | ನೀರು ಪೋಲು ಮಾಡದಂತೆ ಜಾಗೃತಿ ಮೂಡಿಸಿ

ಬೇಸಿಗೆಯ ತಾಪ ಹೆಚ್ಚಾದಂತೆ ರಾಜ್ಯದ ಹಲವೆಡೆ ಜನರು ಒಂದು ಬಿಂದಿಗೆ ನೀರಿಗಾಗಿ ವಾರಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಹೀಗಿರುವಾಗ, ಮೈಸೂರು…

40 mins ago

ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರ ರಾಜೀನಾಮೆಗೆ ಬಿಗಿಪಟ್ಟು

ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರ ರಾಜೀನಾಮೆಗೆ ಬಿಗಿಪಟ್ಟು • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ : ತಾಲ್ಲೂಕು ವೀರಶೈವ ಲಿಂಗಾಯತ ಮಹಾ…

45 mins ago

ಅಪಘಾತದಿಂದ ಹೊತ್ತಿ ಉರಿದ ಟಿಪ್ಪರ್‌, ಬಸ್‌ : 14 ಮಂದಿ ಸಜೀವ ದಹನ

ಹೈದರಾಬಾದ್ : ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯ ರಾಯವರಂ ಬಳಿ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ,…

54 mins ago