ಬ್ಯುನಸ್‌ಐರಿಸ್ : ಅರ್ಜೆಂಟಿನಾ ತಂಡವು 2022ರ ಫೀಫಾ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಅರ್ಜೆಂಟಿನಾ ಸ್ಟಾರ್ ಆಟಗಾರ ಆಂಜೆಲ್ ಡಿ ಮಾರಿಯಾ ಅವರು ಅಂತರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಅಮೇರಿಕಾದಲ್ಲಿ ನಡೆಯುವ 2024 ರ ಕೋಪಾ ಅಮೇರಿಕಾ ಟೂರ್ನಿಯ ನಂತರ ಅಂತರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿ ಪಡೆಯುವ ಯೋಜನೆಯಿದೆ ಎಂದು ಮಾರಿಯಾ ಗುರುವಾರ ಪ್ರಕಟಿಸಿದ್ದಾರೆ.
35 ವರ್ಷದ ಡಿ ಮಾರಿಯಾ ಸತತ 15 ವರ್ಷಗಳ ಕಾಲ 136 ಪಂದ್ಯಗಳಲ್ಲಿ ಅರ್ಜೆಂಟಿನಾ ಪರವಾಗಿ ಆಡಿದ್ದಾರೆ. ಇದರಲ್ಲಿ 4 ವಿಶ್ವಕಪ್, 5 ಕೋಪಾ ಅಮೇರಿಕಾ ಸೇರಿದಂತೆ ಹಲವಾರು ಪಂದ್ಯಗಳಲ್ಲಿ ಅರ್ಜೆಂಟಿನಾ ತಂಡವನ್ನು ಪ್ರತಿನಿಧಿಸಿದ್ದಾರೆ. ಇವರು ಅರ್ಜೆಂಟಿನಾ ಪರ ಫಿಫಾ ವಿಶ್ವಕಪ್(2022), ಕೋಪಾ ಅಮೆರಿಕ(2021), ಅಂಡರ್-17 ಫಿಫಾ ವಿಶ್ವಕಪ್(2007), ಒಲಿಂಪಿಕ್ಸ್ ಗೋಲ್ಡ್(2008) ಸಹಿತ ಹಲವು ಪ್ರಶಸ್ತಿಗಳನ್ನು ಜಯಿಸಿದ್ದಾರೆ.
2008 ರಲ್ಲಿ ಪರಾಗ್ಲೆ ತಂಡದ ವಿರುದ್ಧ ಅವರು ತನ್ನ ಮೊದಲ ಪಂದ್ಯವನ್ನು ಅರ್ಜೆಂಟಿನಾ ಪರವಾಗಿ ಆಡಿದ್ದರು.
ಕೋಪಾ ಅಮೆರಿಕ ಟೂರ್ನಿಯಲ್ಲಿ ನಾನು ಕೊನೆಯ ಬಾರಿ ಅರ್ಜೆಂಟಿನಾ ಶರ್ಟ್ ಅನ್ನು ಧರಿಸುತ್ತೇನೆ. ನನ್ನ ಜೀವನದ ಅತ್ಯಂತ ಸುಂದರವಾದ ಫುಟ್ಬಾಲ್ ಗೆ ಅತ್ಯಂತ ನೋವಿನಿಂದ ವಿದಾಯ ಹೇಳುತ್ತಿರುವೆ ಎಂದು ಡಿ ಮಾರಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಕೊನೆಯ ಪಂದ್ಯದಲ್ಲಿ ಅಭಿಮಾನಿಗಳ ಹರ್ಷೋದ್ಗಾರವು ನನ್ನ ಆತ್ಮವನ್ನು ಎಷ್ಟು ತುಂಬಿದೆ ಎಂಬುದನ್ನು ನಾನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನನ್ನ ತಂಡದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ನಾನು ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ ಎಂದು ಇತ್ತೀಚೆಗೆ ನಡೆದ ಬ್ರೆಝಿಲ್ ವಿರುದ್ಧದ ತನ್ನ ಕೊನೆಯ ವಿಶ್ವಕಪ್ ಅರ್ಹತಾ ಪಂದ್ಯವನ್ನು ಉಲ್ಲೇಖಿಸಿ ಡಿ ಮಾರಿಯಾ ಹೇಳಿದ್ದಾರೆ. ಈ ಪಂದ್ಯವನ್ನು ಅರ್ಜೆಂಟಿನಾ ಗೆದ್ದುಕೊಂಡಿತ್ತು.
ವಿಶಿಷ್ಟ ಸಾಧನೆ : ಡಿ ಮಾರಿಯಾ ತನ್ನ ದೇಶದ ಪರ ಗರಿಷ್ಠ ಪಂದ್ಯಗಳನ್ನು(136) ಆಡಿದ 4ನೇ ಆಟಗಾರನಾಗಿದ್ದಾರೆ. ಅರ್ಜೆಂಟೀನದ ಪರ 29 ಗೋಲುಗಳನ್ನು ಗಳಿಸಿರುವ ಡಿ ಮಾರಿಯಾ 29 ಬಾರಿ ಗೋಲು ಗಳಿಸಲು ನೆರವಾಗಿದ್ದಾರೆ. ಒಟ್ಟಾರೆ ಅವರು ಅರ್ಜೆಂಟೀನದ 7ನೇ ಗರಿಷ್ಠ ಗೋಲ್ ಸ್ಕೋರರ್ ಆಗಿದ್ದಾರೆ. ಒಲಿಂಪಿಕ್ಸ್ ಫೈನಲ್, ಕೋಪಾ ಅಮೆರಿಕ ಫೈನಲ್ ಹಾಗೂ ಫಿಫಾ ವಿಶ್ವಕಪ್ ಫೈನಲ್ ನಲ್ಲಿ ಅರ್ಜೆಂಟಿನಾ ಪರ ಮೊದಲ ಗೋಲು ಗಳಿಸಿದ ಏಕೈಕ ಆಟಗಾರನೆಂಬ ಹಿರಿಮೆಯೋಂದಿಗೆ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಡಿ ಮಾರಿಯಾ ಒಟ್ಟು 4 ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದು ಕಳೆದ ಮೂರು ಆವೃತ್ತಿಗಳ (2014,2018,2022) ವಿಶ್ವಕಪ್ ಟೂರ್ನಿಗಳಲ್ಲಿ ಗೋಲು ಗಳಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಈ ಮೂರು ಗೋಲುಗಳು ಟೂರ್ನಮೆಂಟ್ ನ ನಾಕೌಟ್ ಹಂತದಲ್ಲಿ ಬಂದಿವೆ. ವಿಶ್ವಕಪ್ ನ 3 ಗೋಲುಗಳ ಪೈಕಿ ಎರಡು ಗೋಲು ಫ್ರಾನ್ಸ್ ವಿರುದ್ಧ ದಾಖಲಿಸಿದ್ದಾರೆ.
ಡಿ ಮಾರಿಯಾ ಅಮೆರಿಕದಲ್ಲಿ 2024ರ ಜೂನ್ 20ರಿಂದ ಜುಲೈ 14ರ ತನಕ ನಡೆಯುವ ಕೋಪಾ ಅಮೆರಿಕ ಟೂರ್ನಿಯಲ್ಲಿ ಆರನೇ ಬಾರಿ ಸ್ಪರ್ಧಿಸಲಿದ್ದಾರೆ. 2021ರಲ್ಲಿ ಬ್ರೆಝಿಲ್ ನ ಮರಕಾನ ಸ್ಟೇಡಿಯಮ್ ನಲ್ಲಿ ನಡೆದ ಕೋಪಾ ಅಮೆರಿಕ ಫೈನಲ್ ನಲ್ಲಿ ಗೆಲುವಿನ ಗೋಲು ಗಳಿಸಿದ ಡಿ ಮಾರಿಯಾ ಬ್ರೆಝಿಲ್ ಗೆ ಆಘಾತ ನೀಡಿದ್ದರು.
ಡಿ ಮಾರಿಯಾ ಬೆನ್ನಿಕಾ , ರಿಯಲ್ ಮ್ಯಾಡ್ರಿಡ್, ಪ್ಯಾರಿಸ್ ಸೇಂಟ್ ಜರ್ಮೈನ್, ಜುವೆಂಟಸ್ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡಿದ್ದಾರೆ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…