ಬೆಂಗಳೂರು : ಜಗತ್ತಿನ ಐಶಾರಾಮಿ ಟಿ20 ಲೀಗ್ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿರಿಯರ್ ಲೀಗ್‌ನ ಹದಿನಾರನೇ ಆವೃತ್ತಿಯು ಕ್ಲೈಮ್ಯಾಕ್ಸ್ ಹಂತಕ್ಕೆ ಕಾಲಿಟ್ಟಿದೆ.
ಐಪಿಎಲ್ 2023 ಟೂರ್ನಿಯ 65ನೇ ಲೀಗ್ ಪಂದ್ಯದ ಮುಕ್ತಾಯಕ್ಕೆ, ಎಲ್ಲ ಹತ್ತು ತಂಡಗಳು ತಲಾ 13 ಪಂದ್ಯಗಳನ್ನು ಆಡಿದಂತ್ತಾಗಿದೆ. ಇನ್ನು ಲೀಗ್ ಹಂತದಲ್ಲಿ ಎಲ್ಲ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಆಡುವುದಷ್ಟೇ ಬಾಕಿ. ಆದರೂ ಕೂಡ ಪ್ಲೇ ಆಫ್ ಹಂತದ ಮೂರು ಸ್ಥಾನಗಳು ಇನ್ನೂ ಖಾಲಿ ಉಳಿದಿವೆ.
18 ಅಂಕ ಕಲೆಹಾಕಿರುವ ಡಿಫೆಂಡಿಂಗ್ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಮಾತ್ರವೇ ನಾಕ್ ಔಟ್ ಹಂತಕ್ಕೆ ಕಾಲಿಟ್ಟಿರುವ ಏಕಮಾತ್ರ ತಂಡ.
ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಜನಪ್ರಿಯ ಕ್ರಿಕೆಟ್ ಕಾಮೆಂಟೇಟರ್, ಲೀಗ್ ಹಂತದ ಅಂತಿಮ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭರ್ಜರಿ ಪ್ರದರ್ಶನ ಕಂಡು ಉಳಿದ ಎಲ್ಲಾ ತಂಡಗಳ ಮನದಲ್ಲಿ ಭಯ ಶುರುವಾಗಿದೆ ಎಂದು ಹೇಳಿದ್ದಾರೆ.
ಫಾಫ್ ಡು ಪ್ಲೆಸಿಸ್ ಸಾರಥ್ಯದ ಆರ್‌ಸಿಬಿ ತಂಡ ತನ್ನ ಕಳೆದ ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸಿದೆ. ಮೊದಲಿಗೆ ರಾಜಸ್ಥಾನ್ ರಾಯಲ್ಸ್ ಎದುರು 112 ರನ್‌ಗಳ ದೈತ್ಯ ಗೆಲುವು ದಕ್ಕಿಸಿಕೊಂಡು, ನಂತರ ಎಸ್‌ಆರ್‌ಎಚ್ ಎದುರು 187 ರನ್‌ಗಳ ಗುರಿ ಮೆಟ್ಟಿನಿಂತು 8 ವಿಕೆಟ್‌ಗಳ ಜಯ ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮರಳಿ ಅಗ್ರ 4ರಲ್ಲಿ ಸ್ಥಾನ ಪಡೆದುಕೊಂಡಿದೆ.
ತನ್ನ ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಪೈಪೋಟಿ ನಡೆಸಲಿದ್ದು, ಆ ಪಂದ್ಯದಲ್ಲಿ ಜಯ ಸಿಕ್ಕರೆ ಸುಲಭವಾಗಿ ನಾಕ್‌ಔಟ್ ಹಂತಕ್ಕೆ ಕಾಲಿಡಲಿದೆ. ಸದ್ಯ ಆಡಿದ 13 ಪಂದ್ಯಗಳಲ್ಲಿ 7 ಜಯದೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಿದೆ.
“ಬೆಂಗಳೂರು ತಂಡ ಐಪಿಎಲ್ ಪ್ಲೇ ಆಫ್ ರೇಸ್‌ನಲ್ಲಿ ಜೀವಂತವಾಗಿ ಉಳಿದಿದೆ. ಕಳೆದ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಅಧಿಕಾರಯುತ ಜಯ ದಾಖಲಿಸಿದೆ. ಹೀಗಾಗಿ ಟೂರ್ನಿಯಲ್ಲಿನ ಉಳಿದ ತಂಡಗಳಿಗೆ ಈಗ ಖಂಡಿತಾ ಆರ್‌ಸಿಬಿ ಬಗ್ಗೆ ಭಯ ಶುರುವಾಗಿದೆ ಎನ್ನಬಹುದು. ಅಂದಹಾಗೆ ಆರ್‌ಸಿಬಿ ತಂಡದ ಭವಿಷ್ಯ ಭಾನುವಾರ ರಾತ್ರಿ ನಿರ್ಧಾರವಾಗಲಿದೆ,” ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಮೇ 21ರಂದು ಮನೆಯಂಗಣ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಆರ್‌ಸಿಬಿ ತಂಡ ಡಿಫೆಂಡಿಂಗ್ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಎದುರು ಕಾದಾಟ ನಡೆಸಲಿದೆ. ಇಲ್ಲಿ ಗೆಲುವು ಸಿಕ್ಕರೆ ಆರ್‌ಸಿಬಿ ಮುಂದಿನ ಹಂತಕ್ಕೆ ಯಾವುದೇ ಅಡ್ಡಿಯಿಲ್ಲದೆ ತೇರ್ಗಡೆಯಾಗಲಿದೆ.
ಉತ್ತಮ ಪ್ರದರ್ಶನ ನೀಡಿರುವ ಆರ್‌ಸಿಬಿ
2009, 2011 ಮತ್ತು 2016ರ ಸಾಲಿನಲ್ಲಿ ರನ್ನರ್ಸ್ ಅಪ್ ಸ್ಥಾನ ಪಡೆದಿರುವ ಆರ್‌ಸಿಬಿ ತಂಡ ಈ ಬಾರಿ ಉತ್ತಮ ಪ್ರದರ್ಶನವನ್ನೇ ನೀಡಿದೆ. ನಾಯಕ ಫಾಫ್ ಡು ಪ್ಲೆಸಿಸ್, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಆಡಿದ 13 ಪಂದ್ಯಗಳಿಂದ ಒಟ್ಟಾರೆ 702 ರನ್‌ಗಳನ್ನು ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಕೂಡ ಶ್ರೇಷ್ಠ ಲಯದಲ್ಲಿದ್ದು, 538 ರನ್ ಸಿಡಿಸಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (389) ಕೂಡ ಭರ್ಜರಿ ಆಟವಾಡುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ತಂಡದ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರಿಗೆ ಉಳಿದವರಿಂದ ಸೂಕ್ತ ಬೆಂಬಲ ಸಿಕ್ಕರೆ ಖಂಡಿತಾ ಈ ಬಾರಿ ಆರ್‌ಸಿಬಿ ತನ್ನ ಟ್ರೋಫಿ ಗೆಲುವಿನ ಬರ ನೀಗಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…