ಕ್ರೀಡೆ

ಜಾರ್ಖಂಡ್‌: ಬುಡಕಟ್ಟು ಸಮುದಾಯದ ಯುವ ಕ್ರಿಕೆಟಿಗನಿಗೆ ಅಪಘಾತ

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌ ಧೋನಿ ತವರಿನಿಂದ ಐಪಿಎಲ್‌-24ಕ್ಕೆ ಆಯ್ಕೆಯಾಗಿದ್ದ ಬುಡಕಟ್ಟು ಸಮುದಾಯದ ಯುವ ಕ್ರಿಕೆಟಿಗ ರಾಬಿನ್‌ ಮಿನ್ಜ್‌ ಅವರಿಗೆ ಭಾನುವಾರ ಅಪಘಾತವಾಗಿದೆ.

ಈ ಕುರಿತು ಯುವ ಕ್ರಿಕೆಟಿಗ ಮಿನ್ಜ್‌ ಅವರ ತಂದೆ ಪ್ರಾನ್ಸಿಸ್‌ ಮಿನ್ಜ್‌ ಅವರು ಮಾಹಿತಿ ನೀಡಿದ್ದಾರೆ. ಮಿನ್ಜ್‌ ತನ್ನ ಕವಾಸಕಿ ಸೂಪರ್‌ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದಾಗ ಎದುರಿಗೆ ಮತ್ತೊಂದು ಬೈಕ್‌ ಬಂದಿದ್ದು, ರಾಬಿನ್‌ ಎದುರಿಗೆ ಬಂದ ಬೈಕ್‌ ಡಿಕ್ಕಿ ಹೊಡೆದಿದೆ. ಪರಿಣಾಮ ನಿಯಂತ್ರಣ ಕಳೆದುಕೊಂಡು ಬದ್ದಿದ್ದಾರೆ. ಆದರೆ ರಾಬಿನ್‌ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಯುವ ಕ್ರಿಕೆಟಿಗನ ತಂದೆ ಪ್ರಾನ್ಸಿಸ್‌ ಹೇಳಿದ್ದಾರೆ.

ಮೂಲತಃ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯವರಾದ ಮಿನ್ಜ್, ಪ್ರಸ್ತುತ ಜಾರ್ಖಂಡ್ ರಾಜಧಾನಿ ರಾಂಚಿಯ ನಾಮ್ಕುಮ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ರಣಜಿ ಟ್ರೋಫಿಯಲ್ಲಿ ಇನ್ನೂ ರಾಜ್ಯವನ್ನು ಪ್ರತಿನಿಧಿಸದಿದ್ದರೂ, ಜಾರ್ಖಂಡ್‌ನ ಅಂಡರ್ 19 ಮತ್ತು ಅಂಡರ್ 25 ತಂಡಗಳ ಭಾಗವಾಗಿದ್ದಾರೆ.

ಅವರ ತಂದೆ ನಿವೃತ್ತ ಸೇನಾ ಸಿಬ್ಬಂದಿಯಾಗಿದ್ದು, ಈಗ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರಾಬಿನ್‌ ಮಿನ್ಜ್‌ಗೆ ಇಬ್ಬರು ಸಹೋದರಿಯರು ಇದ್ದಾರೆ.

ಅಚ್ಚರಿಯಂಬಂತೆ ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ 21 ವರ್ಷದ ರಾಬಿನ್‌ ಮಿನ್ಜ್‌ ಅವರು ಗುಜರಾತ್‌ ಟೈಟನ್ಸ್‌ ತಂಡಕ್ಕೆ ಬರೋಬ್ಬರಿ 3.60 ಕೋಟಿ ರೂಗೆ ಮಾರಾಟವಾಗಿದ್ದಾರೆ.

ಎಂ.ಎಸ್ ಧೋನಿಯ ಅಪ್ಪಟ ಅಭಿಮಾನಿಯಾಗಿರುವ ಇವರು, ಭಾರತದ ಮಾಜಿ ನಾಯಕ ಧೋನಿಗೆ ಕೋಚಿಂಗ್ ನೀಡಿದ್ದ ತರಬೇತುದಾರ ಚಂಚಲ್ ಭಟ್ಟಾಚಾರ್ಯ ಅವರಲ್ಲಿ ರಾಬಿನ್‌ ಅವರು ತರಬೇತಿ ಪಡೆದಿದ್ದಾರೆ.

andolana

Recent Posts

ವೈಭವ್‌ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್‌ : ಸಿಎಸ್‌ಕೆ ವಿರುದ್ಧ ಆರ್‌ಆರ್‌ಗೆ ಗೆಲುವು

ಗುವಹಾಟಿ : ಆರಂಭದಲ್ಲಿ ಬೌಲರ್‌ಗಳ ಅಬ್ಬರ ನಂತರ ವೈಭವ್‌ ಸೂರ್ಯವಂಶಿ ಅವರ ಸ್ಫೋಟಕ ಅರ್ಧಶತಕದ ಆಟದಿಂದ ಚೆನ್ನೈ ಸೂಪರ್‌ ಕಿಂಗ್ಸ್‌…

6 hours ago

ಮೈಸೂರು ರೇಸ್ ಕ್ಲಬ್ ಚುನಾವಣೆ; ಸದಸ್ಯರಾಗಿ ಐವರ ಆಯ್ಕೆ

ಮೈಸೂರು: ನಗರದ ಪ್ರತಿಷ್ಠಿತ ಮೈಸೂರು ರೇಸ್ ಕ್ಲಬ್ ಸದಸ್ಯರಾಗಿ ಗೀತಿಕಾ ಬಸಪ್ಪ (152 ಮತ), ಡಾ.ಕೆ.ರವಿ (147), ಕಲೆಂಗಡ ಮಂದಣ್ಣ…

7 hours ago

ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ಹೆದ್ದಾರಿಗಿಲ್ಲ ಪ್ರವೇಶ

ಬೆಂಗಳೂರು : ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಯಾಣವು ಡಿಜಿಟಲ್ ರೂಪಾಂತರದ ಹೊಸ್ತಿಲಲ್ಲಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು…

8 hours ago

ಅಮೆರಿಕದೊಂದಿಗೆ ಯಾವುದೇ ನೇರ ಮಾತುಕತೆ ನಡೆದಿಲ್ಲ : ಇರಾನ್‌ ಸ್ಪಷ್ಟನೆ

ಟೆಹ್ರಾನ್‌ : ಅಮೆರಿಕದೊಂದಿಗೆ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಯಾವುದೇ ನೇರ ಮಾತುಕತೆ ನಡೆದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಇರಾನ್ ವಿದೇಶಾಂಗ…

8 hours ago

ಹೊರ್ಮುಜ್‌ ಜಲಸಂಧಿ ಮುಕ್ತಗೊಳಿಸಿ ; ಇರಾನ್‌ಗೆ ಅಂತಿಮ ಎಚ್ಚರಿಕೆ ನೀಡಿದ ಟ್ರಂಪ್‌

ವಾಷಿಂಗ್ಟನ್‌ : ಹಾರ್ಮುಜ್ ಜಲಸಂಧಿಯನ್ನು ತಕ್ಷಣ ತೆರೆಯದಿದ್ದರೆ ಇರಾನ್‌ನ ಎಲ್ಲ ತೈಲ ಬಾವಿಗಳು ಮತ್ತು ಖಾರ್ಗ್‌ ದ್ವೀಪಗಳನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ…

8 hours ago

ದೇಶದಲ್ಲೇ ಮೊದಲ ಮಕ್ಕಳ ಬೃಹತ್ ಆಸ್ಪತ್ರೆ ಬೆಂಗಳೂರಿನಲ್ಲಿ

ಬೆಂಗಳೂರು : ದೇಶದಲ್ಲಿ ಮೊದಲ ಬಾರಿಗೆ ಮಕ್ಕಳಿಗೆ ಮೀಸಲಾಗಿ 450 ಹಾಸಿಗೆಗಳ ಬೃಹತ್, ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಇಂದಿರಾ…

9 hours ago