ಕ್ರೀಡೆ

ಭಾರತದ ಪ್ರೇಮಿಗಾಗಿ ಗಡಿ ದಾಟಿ ಬಂದ ಪಾಕ್ ಮಹಿಳೆ

ಇದು ‘ಸೀಮಾ’ತೀತ ಪ್ರೇಮ: ನೋಯ್ಡಾದ ಹುಡುಗನನ್ನು ಪ್ರೀತಿಸಿ ಭಾರತಕ್ಕೆ ಬಂದ ೪ ಮಕ್ಕಳ ವಿವಾಹಿತ ಮಹಿಳೆ

ಭಾರತ-ಪಾಕ್ ನಡುವಿನ ವೈಮನಸ್ಸು ಇಂದು ನಿನ್ನೆಯದಲ್ಲ. ಕ್ರೀಡೆಯೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಭಾರತ-ಪಾಕ್ ಬದ್ಧ ವೈರಿಗಳಂತೆ ಇದೆ. ಇಂಥ ದ್ವೇಷದ ಪರಿಸರದಲ್ಲಿ ಪ್ರೇಮದ ಹೂ ಅರಳಿದೆ. ಭಾರತದಲ್ಲಿರುವ ತನ್ನ ಪ್ರಿಯತಮನನ್ನು ಅರಸಿ ಪಾಕ್ ಗಡಿದಾಟಿದ ಬಂದ ವಿವಾಹಿತ ಪಾಕ್ ಮಹಿಳೆಯ ಪ್ರೇಮ ಕಥೆ ಈಗ ದೇಶ ವಿದೇಶಗಳಲ್ಲಿ ಸುದ್ದಿಯಾಗುತ್ತಿದೆ.ಆನ್‌ಲೈನ್‌ನಲ್ಲಿ ಪಬ್‌ಜಿ ಆಟ ಆಡುತ್ತ ಪರಿಚಿತನಾದ ಭಾರತದ ೨೫ರ ಹರೆಯದ ಯುವಕ ಸಚಿನ್‌ನನ್ನು ಪ್ರೀತಿಸಿದ ೩೦ರ ಪಾಕಿಸ್ತಾನದ ಸೀಮಾ ಗುಲಾಮ್ ಹೈದರ್ ಎಂಬ ವಿವಾಹಿತ ಮಹಿಳೆ ಮೂರು ದೇಶಗಳ ಗಡಿ ದಾಟಿ ಭಾರತದ ಉತ್ತರ ಪ್ರದೇಶಕ್ಕೆ ಬಂದಿದ್ದಾಳೆ.

ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ ರಬೂಪುರದ ಅಂಬೇಡ್ಕರ್ ನಗರದಲ್ಲಿ ವಾಸಿಸುವ ಸಚಿನ್‌ನನ್ನು ಪ್ರೀತಿಸಿದ ಪಾಕ್ ಮಹಿಳೆ ಸೀಮಾ ದುಬೈ, ನೇಪಾಳದ ಮೂಲಕ ಗ್ರೇಟರ್ ನೋಯ್ಡಾ ತಲುಪಿದ್ದಾಳೆ. ನಂತರ ಇಂಡೋ-ಪಾಕ್ ಪ್ರೇಮ್ ಕಹಾನಿ ವಿಷಯ ಬಹಿರಂಗವಾಗಿ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಸಂತಸವನ್ನು ಹಂಚಿಕೊಂಡ ಸೀಮಾ, ಹಣೆಗೆ ಕುಂಕುಮ ಹಚ್ಚಿ, ತಲೆಗೆ ಹೂ ಮುಡಿದು ಭಾರತೀಯ ಮಹಿಳೆಯಂತೆ ಸಂಪ್ರದಾಯ ರೂಢಿಸಿಕೊಂಡಿದ್ದಾಳೆ.

ಹರಸಿದ ಹಿಂದೂ ಮುಸ್ಲಿಂ ಹಿರಿಯರು:

ಆಕೆ ತನ್ನ ಪ್ರಿಯತಮನ ಊರಿನ ಜನರು, ವಿಚಾರಣೆ ನಡೆಸಿದ ಪೊಲೀಸರು ಹಾಗೂ ಮಾಧ್ಯಮದವರ ಮುಂದೆ ಅಂತರಾಳದ ಮಾತು ಹಂಚಿಕೊಂಡಿದ್ದಾರೆ. ತಾನು ಎಂದಿಗೂ ಸಚಿನ್‌ನನ್ನು ಬಿಟ್ಟು ಹೋಗುವುದಿಲ್ಲ, ನನ್ನ ದಾಂಪತ್ಯ ಏನಿದ್ದರೂ ಇನ್ನು ಆತನೊಂದಿಗೆ, ಉಸಿರಿರುವವರೆಗೂ ಒಟ್ಟಿಗೆ ಬಾಳುತ್ತೇವೆ. ಹಿಂದೂವನ್ನು ಮದುವೆಯಾಗಿರುವ ನಾನೂ ಹಿಂದೂ, ನನ್ನ ದೇಶವೂ ಹಿಂದೂಸ್ತಾನ್. ನನ್ನನ್ನು ಅನ್ಯಳಂತೆ ಕಾಣಬೇಡಿ ಎಂದು ಕೇಳಿಕೊಂಡಿದ್ದಾಳೆ. ನೋಯ್ಡಾದಲ್ಲಿ ಇವರಿಬ್ಬರು ನೋಡಲು ನಿತ್ಯ ಜನ ಸೇರಿ ಬರುತ್ತಿದ್ದಾರೆ. ಹಿಂದೂ-ಮುಸ್ಲಿಂ ಹಿರಿಯರು ನೂರುಕಾಲ ಬಾಳಿ ಎಂದು ಆಶೀರ್ವದಿಸಿದರೆ, ಕಿರಿಯರು ಶುಭವಾಗಲೆಂದು ಹರಸುತ್ತಿದ್ದಾರೆ.

ಸೀಮಾತೀತ ಪ್ರೀತಿ…

ನಾನು ನನ್ನ ಮಕ್ಕಳ ಜೊತೆ ಸಚಿನ್ ಸೇರಲು ಬಹಳ ದೂರದಿಂದ ಪ್ರಯಾಣ ಮಾಡಿ ಇಲ್ಲಿಗೆ ಬಂದೆ. ನನಗೆ ತುಂಬಾ ಭಯವಾಗಿತ್ತು. ನಾನು ಕರಾಚಿಯಿಂದ ದುಬೈಗೆ ಹೋದೆ. ಗೊತ್ತಿಲ್ಲದ ಊರಿನಲ್ಲಿ ೧೧ ಗಂಟೆಗಳ ಕಾಲ ಕಳೆದೆ. ಅಲ್ಲಿಂದ ನೇಪಾಳಕ್ಕೆ ಬಂದೆ. ಪೋಖ್ರಾ ತಲುಪುವ ಮೊದಲು ಸಚಿನ್‌ನನ್ನು ಭೇಟಿಯಾದೆ. ಆಗ ನಾನು ಗುರಿ ಮುಟ್ಟಿದ ಸಮಾಧಾನವಾಯಿತು.. ಎಂದು ತಾನು ಪ್ರೇಮಿಯನ್ನು ಹುಡುಕಿಕೊಂಡು ಬಂದ ಪ್ರಯಾಣದ ಬಗ್ಗೆ ವಿವರಿಸುತ್ತಾರೆ ಸೀಮಾ.

ತನಿಖೆಯ ವೇಳೆ ಅಧಿಕಾರಿಗಳು ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆಗೆ ಸೀಮಾ ಇಂಗ್ಲಿಷ್ ನಲ್ಲಿಯೇ ಉತ್ತರಿಸಿದ್ದಾಳೆ. ನೆರೆಯ ದೇಶ ಆಟ, ಪ್ರೇಮದ ನೆಪದಲ್ಲಿ ಬೇಹುಗಾರಿಕೆ ನಡೆಸುತ್ತಿರಬಹುದೇ ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಭದ್ರತಾ ಏಜೆನ್ಸಿಗಳು ತನಿಖೆಯಲ್ಲಿ ತೊಡಗಿವೆ.
ಸೀಮಾ ಹೈದರ್ ಅವರನ್ನು ಬಂಧಿಸಿದಾಗ ಆಕೆಯ ಫೋನ್‌ನ ಡೇಟಾ ಪರಿಶೀಲಿಸಲಾಗಿದೆ. ಅವರಿಬ್ಬರ ಪ್ರೇಮಕಹಾನಿಗೆ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ. ಕೇಂದ್ರ ತನಿಖಾ ಸಂಸ್ಥೆಗಳು ಅವರ ವಿಚಾರಣೆ ನಡೆಸುತ್ತಿವೆ. ಸಚಿನ್, ಸೀಮಾ ಮತ್ತು ಆಕೆಯ ೪ ಮಕ್ಕಳಿಗೆ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದ ಎಂದು ತಿಳಿದುಬಂದಿದೆ.

andolanait

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

51 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

1 hour ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago