ಕ್ರೀಡೆ

24 ಎಸೆತಕ್ಕೆ ಶತಕ, 43 ಎಸೆತಕ್ಕೆ 193 ರನ್; ನಿರ್ಮಾಣವಾಯಿತು ವಿಶ್ವದಾಖಲೆ

ಕ್ರಿಕೆಟ್‌ ಲೋಕದಲ್ಲಿ ಆಗಾಗ ಹಲವಾರು ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರ್ಮಾಣವಾದ ದಾಖಲೆಗಳು ಸುದ್ದಿಯಾದರೆ, ದೇಶಿ ಕ್ರಿಕೆಟ್‌ನಲ್ಲಿ ನಿರ್ಮಾಣವಾದ ಅದೆಷ್ಟೋ ದಾಖಲೆಗಳು ಹೆಚ್ಚು ಸುದ್ದಿಯಾಗದೇ ಉಳಿದುಕೊಂಡಿವೆ. ಇದೀಗ ಯುರೋಪಿಯನ್‌ ಟಿ 10 ಕ್ರಿಕೆಟ್‌ ಸರಣಿಯಲ್ಲಿ ಬೃಹತ್‌ ವಿಶ್ವ ದಾಖಲೆಯೊಂದು ನಿರ್ಮಾಣವಾಗಿದೆ.

ಸ್ಪೇನ್‌ನಲ್ಲಿ ನಡೆಯುತ್ತಿರುವ ಈ ಸರಣಿಯ ಕ್ಯಾಟಲುನ್ಯ ಜಾಗ್ವಾರ್‌ ಹಾಗೂ ಸೋಹಲ್‌ ಹಾಸ್ಪಿಟಲ್‌ ತಂಡಗಳ ನಡುವಿನ ಪಂದ್ಯದಲ್ಲಿ ಹಂಝ ಸಲೀಮ್‌ ದಾರ್‌ ಎಂಬ ಬ್ಯಾಟ್ಸ್‌ಮನ್‌ ಅತಿವೇಗದ ಶತಕ ಬಾರಿಸಿದ ದಾಖಲೆ ಬರೆದಿದ್ದಾರೆ. ಕೇವಲ 24 ಎಸೆತಗಳಲ್ಲಿ ಹಂಝ ಸಲೀಮ್‌ ದಾರ್‌ ಶತಕ ಬಾರಿಸಿದರು.

ತಮ್ಮ ಇನ್ನಿಂಗ್ಸ್‌ನ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್‌ ನಡೆಸಿದ ಹಂಝ ಸಲೀಮ್‌ ದಾರ್‌ ಒಟ್ಟು 43 ಎಸೆತಗಳಲ್ಲಿ 22 ಸಿಕ್ಸರ್‌ ಹಾಗೂ 14 ಬೌಂಡರಿ ಬಾರಿಸುವ ಮೂಲಕ ಅಜೇಯ 193 ರನ್‌ ದಾಖಲಿಸಿದರು. ಹಂಝ ಸಲೀಮ್‌ ದಾರ್‌ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಕ್ಯಾಟಲುನ್ಯ ಜಾಗ್ವಾರ್‌ ತಂಡ 10 ಓವರ್‌ಗಳಲ್ಲಿ 257 ರನ್‌ ಕಲೆಹಾಕಿ ಸೋಹಲ್‌ ಹಾಸ್ಪಿಟಲ್‌ ತಂಡಕ್ಕೆ ಗೆಲ್ಲಲು 258 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲಗೊಂಡ ಸೋಹಲ್‌ ಹಾಸ್ಪಿಟಲ್‌ ತಂಡ 10 ಓವರ್‌ಗಳಲ್ಲಿ ಕೇವಲ 104 ರನ್‌ ಗಳಿಸಿತು ಹಾಗೂ ಕ್ಯಾಟಲುನ್ಯ ಜಾಗ್ವಾರ್‌ ತಂಡವು 153 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

andolana

Recent Posts

ಬಂಗಾಳದಲ್ಲಿ ಬಿಜೆಪಿಗೆ ಒಂದು ಅವಕಾಶ ಕೊಡಿ: ಅಮಿತ್‌ ಶಾ ಮನವಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಲು ಬಿಜೆಪಿಗೆ ಒಂದು ಅವಕಾಶ ಕೊಡಿ. ಭಯ, ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ಉತ್ತಮ ಆಡಳಿತದೊಂದಿಗೆ…

17 mins ago

ಕರ್ನಾಟಕದಲ್ಲೂ ಎಸ್‌ಐಆರ್‌ ಜಾರಿ ಆಗಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ

ಬೆಂಗಳೂರು: ದೇಶದಾದ್ಯಂತ ಕೇಂದ್ರ ಚುನಾವಣಾ ಆಯೋಗ ಕೈಗೆತ್ತಿಕೊಂಡಿರುವ ವಿಶೇಷ ಮತದಾರರ ಪರಿಷ್ಕರಣೆ (ಎಸ್‌ಐಆರ್)ಯನ್ನು ಕರ್ನಾಟಕದಲ್ಲೂ ನಡೆಸಬೇಕೆಂದು ಕೇಂದ್ರ ಸಚಿವೆ ಶೋಭಾ…

51 mins ago

ಹುಣಸೂರು: ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

ಹುಣಸೂರು: ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ನಡೆದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಇದೀಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಮಾಹಿತಿ ಪ್ರಕಾರ…

2 hours ago

ಟಿ.ನರಸೀಪುರ: ಗುಂಜಾನರಸಿಂಹಸ್ವಾಮಿ ದರ್ಶನಕ್ಕೆ ಹರಿದುಬಂದ ಜನಸಾಗರ

ಟಿ.ನರಸೀಪುರ: ಇಂದು ವೈಕುಂಠ ಏಕಾದಶಿಯ ಸಂಭ್ರಮ ಮನೆಮಾಡಿದ್ದು, ಟಿ.ನರಸೀಪುರದ ಪ್ರಸಿದ್ಧ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದಲ್ಲಿ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ…

2 hours ago

ಕೋಗಿಲು ಲೇಔಟ್‌ನಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ: ಸಚಿವ ಪರಮೇಶ್ವರ್‌

ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅಕ್ರಮ ಶೆಡ್‌ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ಕೊಡುವ ಕುರಿತು ಗೃಹ ಸಚಿವ…

3 hours ago

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಬೇಗಂ ಖಲೀದಾ ಜಿಯಾ ನಿಧನ

ಡಾಕಾ: ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಇಂದು ಬೆಳಿಗ್ಗೆ ಡಾಕಾದ ಎವರ್‌ಕೇರ್‌…

3 hours ago