ಕ್ರೀಡೆ

1000 ಕೋಟಿ ರೂ. ದಾಟಿದ ವಿರಾಟ್‌ ಕೊಹ್ಲಿ ನಿವ್ವಳ ಮೌಲ್ಯ: ಇನ್‌ಸ್ಟಾ ಪೋಸ್ಟ್‌ ಒಂದಕ್ಕೆ ದುಬಾರಿ ಬೆಲೆ!

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್‌ ಮತ್ತು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ರನ್‌ ಹೊಳೆಯನ್ನೇ ಹರಿಸುವ ಮೂಲಕ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಕ್ರಿಕೆಟ್‌ ಜಗತ್ತಿನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಆಟಗಾರ ಕೂಡ ಆಗಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ವಿರಾಟ್‌ ಕೊಹ್ಲಿ ಅವರ ನಿವ್ವಳ ಮೌಲ್ಯವು 1000 ಕೋಟಿ ರೂ.ಗಳ ಗಡಿ ದಾಟಿದೆ. ಅಷ್ಟೇ ಅಲ್ಲದೆ ಕಿಂಗ್‌ ಕೊಹ್ಲಿ ತಮ್ಮ ಪ್ರತಿ ಇನ್‌ಸ್ಟಾಗ್ರಾಮ್‌ ಪೋಸ್ಟ್‌ (ಪ್ರಮೋಷನಲ್) ಒಂದಕ್ಕೆ 9 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂಬುದು ಬೆಳಕಿಗೆ ಬಂದಿದೆ.

ಅಂದಹಾಗೆ ಕ್ರಿಕೆಟ್‌ ಕ್ರೀಡೆಯನ್ನು ಆಡುವ ರಾಷ್ಟ್ರಗಳ ಸಂಖ್ಯೆ ಬಹಳಾ ಕಡಿಮೆ. ಆದರೂ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಫುಟ್ಬಾಲ್‌ ದೈತ್ಯ ತಾರೆಗಳಿಗೆ ಪೈಪೋಟಿ ನೀಡುವ ಮಟ್ಟಿಗೆ ವಿರಾಟ್‌ ಕೊಹ್ಲಿ ಬೆಳೆದು ನಿಂತಿದ್ದಾರೆ. ಇನ್‌ಸ್ಟಾಗ್ರಾಮ್‌ ಒಂದರಲ್ಲೇ 250 ದಶಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 3ನೇ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಕ್ರೀಡಾಪಟು ಎಂಬ ಹೆಗ್ಗಳಿಕೆ ಕೂಡ ಕೊಹ್ಲಿ ಅವರದ್ದು.
ಆನ್‌ಫೀಲ್ಡ್‌ ಮಾತ್ರವಲ್ಲ ಆಫ್‌ ದಿ ಫೀಲ್ಡ್‌ನಲ್ಲೂ ಹೆಚ್ಚು ಯಶಸ್ಸು ಕಂಡ ಆಟಗಾರ ವಿರಾಟ್‌ ಕೊಹ್ಲಿ. ಇದರಿಂದಾಗಿ ಹಣಕಾಸು ವಿಚಾರದಲ್ಲಿ ಕೊಹ್ಲಿ ‘ವಿರಾಟ’ ಪ್ರಗತಿ ಕಂಡಿದ್ದಾರೆ. ಸ್ಟಾಕ್‌ ಗ್ರೂ ನಡೆಸಿರುವ ಅಧ್ಯಯನದ ಪ್ರಕಾರ, ರನ್‌ ಮಷೀನ್ ವಿರಾಟ್‌ ಕೊಹ್ಲಿ ಅವರ ನಿವ್ವಳ ಮೌಲ್ಯವು 1050 ಕೋಟಿ ರೂ.ಗಳ ಗಡಿ ದಾಟಿದೆ. ಈ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ.

ಬಿಸಿಸಿಐ ನೀಡುವ ವೇತನ ವರ್ಷಕ್ಕೆ 7 ಕೋಟಿ ರೂ ಮಾತ್ರ
ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿರುವ ಎ+ ಗ್ರೇಡ್‌ ಒಪ್ಪಂದ ಪ್ರಕಾರ ವಿರಾಟ್‌ ಕೊಹ್ಲಿ ವರ್ಷಕ್ಕೆ 7 ಕೋಟಿ ರೂ. ವೇತನ ಪಡೆಯುತ್ತಾರೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆರ್‌ಸಿಬಿ ತಂಡ 15 ಕೋಟಿ ರೂ. ಸಂಭಾವನೆ ನೀಡುತ್ತಿದೆ. ಜೊತೆಗೆ ಪ್ರತಿ ಪಂದ್ಯಗಳಿಗೆ ಲಭ್ಯವಾಗು ಮ್ಯಾಚ್‌ ಫೀ ಕೂಡ ಸೇರಿಕೊಳ್ಳುತ್ತದೆ. ಇದರ ಜೊತೆಗೆ ತಮ್ಮ ಜನಪ್ರಿಯತೆಯ ಸಂಪೂರ್ಣ ಲಾಭ ತೆಗೆದುಕೊಳ್ಳುತ್ತಿರುವ ಕೊಹ್ಲಿ, ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಒಂದರಕ್ಕೆ 9 ಕೋಟಿ ರೂ. (ನಿಖರವಾಗಿ 8.9 ಕೋಟಿ) ತೆಗೆದುಕೊಳ್ಳುತ್ತಾರೆ. ಟ್ವಿಟರ್‌ ಪೋಸ್ಟ್‌ ಒಂದಕ್ಕೆ 2.5 ಕೋಟಿ ರೂ. ಪಡೆಯುತ್ತಾರೆ.

ಹಲವೆಡೆ ಹೂಡಿಕೆ ಮಾಡಿದ್ದಾರೆ
ಕೋಟ್ಯಧಿಪತಿ ಆಗಿರುವ ವಿರಾಟ್‌ ಕೊಹ್ಲಿ, ತಮ್ಮಲ್ಲಿನ ಸಂಪತ್ತನ್ನು ವಿವಿಧೆಡೆ ಹೂಡಿಕೆ ಕೂಡ ಮಾಡಿದ್ದಾರೆ. ವಿವಿಧ ಸ್ಟಾರ್ಟ್‌ಅಪ್‌ಗಳಿಗೂ ಹಣಕಾಸಿನ ಬೆಂಬಲ ನೀಡಿದ್ದಾರೆ. 34 ವರ್ಷದ ಅನುಭವಿ ಕ್ರಿಕೆಟಿಗ ಈವರೆಗೆ 8 ಸ್ಟಾರ್ಟ್‌ ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಸ್ಟಾಕ್ ಗ್ರೋ ವರದಿ ಮಾಡಿದೆ. ಜೊತೆಗೆ 18ಕ್ಕೂ ಹೆಚ್ಚು ಬ್ರಾಂಡ್‌ಗಳ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ಸಲುವಾಗಿ ಜಾಹೀರಾತುಗಳಲ್ಲಿ ಪಾಲ್ಗೊಳ್ಳುವುದಾದರೆ ಪ್ರತಿ ದಿನಕ್ಕೆ 7.5 ಕೋಟಿ ರೂ.ಗಳಿಂದ 10 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಾರೆ.

ಎರಡು ಪ್ರಮುಖ ಆಸ್ತಿಗಳನ್ನು ಹೊಂದಿದ್ದಾರೆ
ವಿರಾಟ್‌ ಕೊಹ್ಲಿ, ಮುಂಬೈ ಮಹಾನಗರಿ ಮತ್ತು ದಿಲ್ಲಿಯ ಗುರುಗ್ರಾಮದಲ್ಲಿ ಎರಡು ಆಸ್ತಿ ಹೊಂದಿದ್ದಾರೆ. ಈ ಆಸ್ತಿಯ ಮೌಲ್ಯ 100 ಕೋಟಿ ರೂ.ಗಳಿಗೂ ಅಧಿಕವಾಗಿದೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಕ್ಯಾಪ್ಟನ್ಸಿ ಬಿಟ್ಟಿದ್ದರೂ ಕೂಡ ವಿರಾಟ್‌ ಕೊಹ್ಲಿ ಅವರ ಬ್ರಾಂಡ್‌ ಮೌಲ್ಯಕ್ಕೆ ಯಾವುದೇ ಹಾನಿಯಾಗಿಲ್ಲ.

ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ 2ನೇ ಆವೃತ್ತಿಯ ಫೈನಲ್‌ ಪಂದ್ಯದ ಬಳಿಕ ಭಾರತ ತಂಡ 1 ತಿಂಗಳ ವಿಶ್ರಾಂತಿಯಲ್ಲಿದೆ. ಜುಲೈನಲ್ಲಿ ಭಾರತ ತಂಡ ವೆಸ್ಟ್‌ ಇಂಡೀಸ್ ಪ್ರವಾಸ ಕೈಗೊಂಡು ಎಲ್ಲಾ ಮಾದರಿಯ ಕ್ರಿಕೆಟ್‌ ಸರಣಿಗಳನ್ನು ಆಡಲಿದ್ದು, ಈ ಸರಣಿಗಳ ಮೂಲಕ ವಿರಾಟ್‌ ಕೊಹ್ಲಿ ಕ್ರಿಕೆಟ್‌ ಅಂಗಣಕ್ಕೆ ಮರಳಲಿದ್ದಾರೆ. ವಿಂಡೀಸ್ ಪ್ರವಾಸದಲ್ಲಿ ಭಾರತ ತಂಡ 2 ಟೆಸ್ಟ್‌, 3 ಒಡಿಐ ಮತ್ತು 5 ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿಗಳನ್ನು ಆಡಲಿದೆ. ಅಂದಹಾಗೆ ಭಾರತ ಟಿ20 ತಂಡದಿಂದ ವಿರಾಟ್‌ ಕೊಹ್ಲಿ ಅವರನ್ನು ಹೊರಗಿಡುವ ಸಾಧ್ಯತೆ ಇದೆ.
andolanait

Recent Posts

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ : ಸಿಎಂ ಖಂಡನೆ, ಶಾಂತಿ-ಸೌಹಾರ್ದತೆಗೆ ಮನವಿ

ಬೆಂಗಳೂರು : ಬಾಗಲಕೋಟೆಯ ಹಳೆಯ ನಗರದಲ್ಲಿ ಚತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಅಂಗವಾಗಿ ನಡೆದ ಭಾವಚಿತ್ರ ಮೆರವಣಿಗೆಯ ವೇಳೆ ನಡೆದ…

2 hours ago

ಮಡಿಕೇರಿ | ಟ್ರಾಕ್ಟರ್ ಮಗುಚಿ ಕಾರ್ಮಿಕ ಸಾವು

ಸಿದ್ದಾಪುರ : ವಾಹನ ಚಲಾಯಿಸುವ ಆಸೆಯಿಂದ ಟ್ರಾಕ್ಟರ್ ಚಲಾಯಿಸಿದ ಕಾರ್ಮಿಕ ನಿಯಂತ್ರಣ ತಪ್ಪಿ ಹಳ್ಳಕ್ಕೆ ಮಗುಚಿದ ಪರಿಣಾಮ ಸ್ಥಳದಲ್ಲೆ ಮೃತ…

2 hours ago

ಬುದನೂರು ಉತ್ಸವ | ಹೆಲಿಕಾಪ್ಟರ್‌ ಜಾಯ್‌ ರೈಡ್‌ಗೆ ಚಾಲನೆ

ಮಂಡ್ಯ : ಜಿಲ್ಲೆಯ ಯುವ ಜನತೆಗೆ ನಗರದ ಚಿತ್ರಣವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಹೆಲಿಕಾಪ್ಟರ್‌ ಜಾಯ್‌ ರೈಡ್‌ಅನ್ನು ಆಯೋಜಿಸಲಗಿದ್ದು, ಮೂರು ದಿನಗಳ…

2 hours ago

ಟಾಕ್ಸಿಕ್ ಟೀಸರ್ ಬಿಡುಗಡೆ : ಡಬಲ್‌ ಲುಕ್‌ನಲ್ಲಿ ಅಬ್ಬರಿಸಿದ ರಾಕಿಂಗ್‌ ಸ್ಟಾರ್ ರಾಯ‌

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಟೀಸರ್ ಇಂದು(ಫೆ.20) ಬಿಡುಗಡೆಯಾಗಿದೆ. 2 ನಿಮಿಷಗಳ ಈ ಟೀಸರ್…

3 hours ago

ಓದುಗರ ಪತ್ರ: ಶಾಲಾ ದಾಖಲಾತಿ ವಯೋಮಿತಿ ಸಮಸ್ಯೆ ನಿವಾರಿಸಿ

ಮಕ್ಕಳನ್ನು ಒಂದನೇ ತರಗತಿಗೆ ಪ್ರಸಕ್ತ ಸಾಲಿಗೆ ದಾಖಲಿಸುವ ವಯೋಮಿತಿಯನ್ನು ಆರು ವರ್ಷಗಳಿಗೆ ನಿಗದಿಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.…

7 hours ago

ಓದುಗರ ಪತ್ರ: ಡ್ರಗ್ಸ್ ಜಾಲ ಪತ್ತೆಗೆ ಡ್ರೋನ್ ಕಾರ್ಯಾಚರಣೆ ಶ್ಲಾಘನೀಯ

ಮೈಸೂರಿನಲ್ಲಿ ಸಮಾಜಘಾತುಕ ಶಕ್ತಿಗಳ ದುಷ್ಕೃತ್ಯ ಮತ್ತು ಡ್ರಗ್ಸ್ ಜಾಲ ಪ್ರಕರಣಗಳ ಪತ್ತೆಗೆ ಡ್ರೋನ್ ಕಾರ್ಯಾಚರಣೆ ನಡೆಸಲು ಮೈಸೂರು ನಗರ ಪೊಲೀಸರು…

7 hours ago