ಕೊಡಗಿನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಧನ್ವಂತರಿ ಹೋಮ

(ಸಾಂದರ್ಭಿಕ ಚಿತ್ರ)

ಕೊಡಗು: ಜಿಲ್ಲೆಯಲ್ಲಿ ಕೊರೊನಾ ವೈರಸ್ ಆರ್ಭಟ ಜೋರಾಗುತ್ತಿರುವ ಹಿನ್ನೆಲೆಯಲ್ಲಿ, ಮಹಾಮಾರಿಯನ್ನು ಹೋಗಲಾಡಿಸಲು ಕೊಡಗಿನ ಜನರು ದೇವರ ಮೊರೆ ಹೋಗಿದ್ದಾರೆ. ಕೊಡಗಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್‍ ನಿವಾರಿಸಲು, ವಿಶೇಷ ಹೋಮ ಮಾಡಿಸಿದ್ದಾರೆ.ಕೊರೊನಾ ನಿವಾರಣೆಗೆ ಮತ್ತು ಕೊರೊನಾ ಸೋಂಕಿಗೆ ಔಷಧಿ ಸಿಗಲಿ ಎಂದು ಧನ್ವಂತರಿ ಹೋಮ ನಡೆಸಿದ್ದಾರೆ. ತಾಲೂಕಿನ ಮೂರ್ನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅರ್ಚಕ ಡಾ.ಮಹಾಬಲೇಶ್ವರ ಭಟ್ ನೇತೃತ್ವದಲ್ಲಿ, 20ಕ್ಕೂ ಹೆಚ್ಚು ಅರ್ಚಕರಿಂದ ಹೋಮ ನೆರವೇರಿಸಲಾಗಿದೆ.

× Chat with us