ಸಿದ್ದುಗೆ ಜೆಡಿಎಸ್‌ ಬಗ್ಗೆ ಸಹಾನೂಭೂತಿ ಇರಬೇಕು: ಶಿವರಾಮೇಗೌಡ

ನಾಗಮಂಗಲ: ಸಿದ್ದರಾಮಯ್ಯ ಪಾಲಿಗೆ ಜೆಡಿಎಸ್‌ ಉಂಡು, ತಿಂದು, ಬೆಳೆದ ಮನೆ. ಹಾಗಾಗಿ ಒಳ್ಳೆಯ ಆಡಳಿತಗಾರರಾಗಿರುವ ಸಿದ್ದರಾಮಯ್ಯ ಜೆಡಿಎಸ್‌ ಬಗ್ಗೆ ಸಹಾನುಭೂತಿ ಇಟ್ಟುಕೊಳ್ಳಬೇಕು ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅಣ್ಣತಮ್ಮಂದಿರ ರೀತಿ ನಿತ್ಯವೂ ಜಗಳವಾಡುತ್ತಿರುತ್ತಾರೆ. ಇದು ನಿಲ್ಲಬೇಕು. ಸಿದ್ದರಾಮಯ್ಯ ಜೆಡಿಎಸ್‌ ಬಗ್ಗೆ ಸಾಫ್ಟ್‌ ಆಗಬೇಕು. ಕುಮಾರಸ್ವಾಮಿ ಅವರೂ ಸಿದ್ದರಾಮಯ್ಯರ ಬಗ್ಗೆ ಹೆಚ್ಚು ಟೀಕೆ ಮಾಡಬಾರದು.