ಸೋಷಿಯಲ್ ಮೀಡಿಯಾದೊಟ್ಟಿಗೆ ಮುನಿಸಿಕೊಂಡ್ರ ಶಿಲ್ಪಾ ಶೆಟ್ಟಿ?

ಮುಂಬೈ : ಸಿನಿಮಾ ತಾರೆಗಳು ಸದಾ ಸುದ್ದಿಯಲ್ಲಿರುವುದು ಹೊಸತೇನಲ್ಲ, ಪೇಸ್‌ ಬುಕ್‌, ಟ್ವೀಟರ್‌ಗಳಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ. ತಾವು ಮಾಡುವ ಸಾಮಾಜಿಕ ಕೆಲಸಗಳು ಹಾಗೂ ಚಿತ್ರಗಳ ಕುರಿತು ಅಪ್ಡೇಟ್‌ ಮಾಡಲು ಸೋಷಿಯಲ್ ಮೀಡಿಯಾದೊಟ್ಟಿಗೆ ಸಕ್ರಿಯರಾಗಿರುತ್ತಾರೆ, ಇದು ಅವರಿಗೆ ಅನಿವಾರ್ಯವೂ ಆಗಿದೆ.

ಆದರೆ, ಖ್ಯಾತ ನಟಿ ಶಿಲ್ಪಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್‌ ಮಾಡಿರುವ ಪೋಸ್ಟ್‌ವೊಂದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಹೌದು,  ʼನಟಿ ಶಿಲ್ಪ ಶೆಟ್ಟಿ ಸಾಮಾಜಿಕ ಜಾಲತಾಣದಿಂದ ಹೊರಗುಳಿಯುತ್ತೇನೆ ಎಂದು ಪೋಸ್ಟ್ ಮಾಡಿ, ಬ್ರೇಕ್ ತಗೆದುಕೊಂಡಿದ್ದಾರೆ. ನಾನು ಹೊಸ ಅವತಾರವನ್ನು ಕಂಡುಕೊಳ್ಳುವವರೆಗೂ ಸೋಶಿಯಲ್ ಮೀಡಿಯಾದಿಂದ ದೂರವಿರಲು ಈ ನಿರ್ಧಾರ ಮಾಡಿದ್ದೇನೆ”  ಎಂದು ಬ್ಲಾಂಕ್‌ ಫೋಟೋ ಜತೆ ಪೋಸ್ಟ್‌ ಮಾಡಿದ್ದಾರೆ. ಸಿನಿಮಾ, ರಿಯಾಲಿಟಿ ಶೋ ಅಂತ ಸಿಕ್ಕಾಬಟ್ಟೆ ಆಕ್ಟೀವ್‌ ಆಗಿರುತ್ತಿದ್ದ ಶಿಲ್ಪಾ ಸೋಷಿಯಲ್‌ ಮೀಡಿಯಾದಿಂದ ದೂರ ಉಳಿದಿರುವುದು  ಅವರ ಅಭಿಮಾನಿಗಳಲ್ಲಿ ಸಾಕಷ್ಟು ಬೇಸರವನ್ನುಂಟುಮಾಡಿದೆ.