ಶರದ್ ಪವಾರ್ ಗೆ “ನರಕ ಕಾಯುತ್ತಿದೆ” ಎಂದಿದ್ದ ನಟಿ ಬಂಧನ

ಠಾಣೆ: ಎನ್ಸಿಪಿ ಅಧ್ಯಕ್ಷ ಶರದ್ ಪವರ್ ಕುರಿತು ‘ನಿಮಗೆ ನರಕ ಕಾಯುತ್ತಿದೆ, ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ ‘ ಎಂದು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮರಾಠಿ ನಟಿಯನ್ನು ಕಲ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆ ನಟಿಯನ್ನು (ಇಂದು) ಶನಿವಾರ ಪೊಲೀಸರು ಬಂಧಿಸಿದ್ದಾರೆ.

ಯಾರು ಆ ನಟಿ ?

ಮರಾಠಿ ಭಾಷೆಯ ಕೇತಕಿ ಚಿತಳೆ  ಎಂಬ ನಟಿಯೇ ಬಂಧಿತ ಆರೋಪಿ.

ದೂರು ನೀಡಿದವರಾರು ?

ಸ್ವಪ್ನೀಲ್‌ ನೆಟ್ಕೆ ಎಂ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ಕಲ್ವಾ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.