ಹಿರಿಯ ನಟ ಸುರೇಶ್‌ ಚಂದ್ರ ಕೋವಿಡ್‌ನಿಂದ ಸಾವು

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸುರೇಶ್‌ ಚಂದ್ರ (69) ಅವರು ಕೋವಿಡ್‌ನಿಂದ ಶುಕ್ರವಾರ ನಿಧನರಾದರು.

ಕೊರೊನಾ ಸೋಂಕಿಗೆ ಒಳಗಾಗಿದ್ದ ಅವರನ್ನು ನಗರದ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ.

ಗಣೇಶ್ ನಟನೆಯ ಚಲುವಿನ ಚಿತ್ತಾರ ಸಿನಿಮಾದಿಂದ ಹೆಚ್ಚು ಖ್ಯಾತಿಗೆ ಬಂದಿದ್ದರು ಸುರೇಶ್‌ ಚಂದ್ರ.